Friday, January 3, 2025

Latest Posts

100 ಸೈಬರ್ ಕ್ರೈಂ ಚಿತ್ರದಲ್ಲಿ ರಮೇಶ್ ಅರವಿಂದ್ ತಂಗಿಯಾಗಿ ರಚಿತಾ ರಾಮ್..!

- Advertisement -

www.karnatakatv.net:ಸ್ಯಾಂಡಲ್ ವುಡ್‌ನ ಚಿರಯುವಕ ಹ್ಯಾಂಡ್ಸಮ್ ನಟ ರಮೇಶ್ ಅರವಿಂದ್ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. “100” ಹೆಸರಿನಲ್ಲಿ ಕೇಸು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಟೈಟಲ್ “100′ ಎಂದೆ ಇಡಲಾಗಿದೆ.
100 ಪೊಲೀಸರಿಗೆ ಕರೆ ಮಾಡಲು ಇರುವ ಸಹಾಯವಾಣಿ ಸಂಖ್ಯೆ. ಇದನ್ನೇ ಚಿತ್ರದ ಟೈಟಲ್ ಆಗಿಸಿ ಥ್ರಿಲ್ಲರ್ ಕಥೆ ಮಾಡಿದ್ದಾರೆ ನಟ ರಮೇಶ್ ಅರವಿಂದ್ ಅವರ ನಿರ್ದೇಶಿಸಿರುವ ಸೈಬರ್ ಕ್ರೈಂ ಆಧಾರಿತ ಸಿನಿಮಾ ಇದಾಗಿದೆ. ರಮೇಶ್ ಜೊತೆಗೆ ರಚಿತಾ ರಾಮ್, ಪೂರ್ಣಾ ನಟಿಸಿದ್ದಾರೆ. ಇದು ಫ್ಯಾಮಿಲಿ ಥ್ರಿಲ್ಲರ್ ಸಿನಿಮಾವಾಗಿರಲಿದೆ. ವಿಶೇಷ ಎಂದರೆ ರಮೇಶ್ ಅರವಿಂದ್ ಪೊಲೀಸ್ ಅಧಿಕಾರಿಯಾಗಿ ಈ ಸಿನಿಮಾದಲ್ಲಿ ಮಿಂಚಿದ್ದಾರೆ.

ಸದ್ಯ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಆಸಕ್ತಿದಾಯಕ ಟ್ರೇಲರ್ ಕಟ್ಟಿ ಕೊಡುವುದರಲ್ಲಿ ಚಿತ್ರತಂಡ ಯಶಸ್ವಿಯಾಗಿದೆ ಎಂದೆ ಹೇಳಬಹುದು. ಟ್ರೇಲರ್ ನೋಡಿದ ಮೇಲೆ ಸಿನಿಮಾ ನೋಡ ಬೇಕು ಎನ್ನುವ ಕುತೂಹಲ ಹುಟ್ಟುತ್ತದೆ. ರಮೇಶ್ ಅರವಿಂದ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಕರಣವನ್ನು ಹೇಗೆ ಭೇಟೆಯಾಡುತ್ತಾರೆ ಎನ್ನುವ ಬಗ್ಗೆ ಸಣ್ಣ ಸುಳಿವು ಬಿಟ್ಟು ಕೊಟ್ಟಿದೆ ಚಿತ್ರತಂಡ, ಸ್ವಲ್ಪ ನಗಿ ಬಾಸ್ ಎನ್ನುವ ಡೈಲಾಗ್‌ನಿಂದ ಟ್ರೇಲರ್ ಆರಂಭ ಆಗುತ್ತದೆ. ನಂತರ ಪ್ರತಿ ಕಥೆಯಲ್ಲಿ ಹೀರೋ ಹಾಗೂ ವಿಲನ್ ಇರುತ್ತಾರೆ. ಆದರೆ ಈ ಕಥೆಗೆ ಹೀರೋ ಇಲ್ಲ ಇಬ್ಬರೂ ವಿಲನ್ ಎನ್ನುವ ಸಾಲು ನಾಯಕ ರಮೇಶ್ ಅರವಿಂದ್ ಪಾತ್ರದ ಬಗ್ಗೆ ಆಸಕ್ತಿ ಮೂಡಿಸುತ್ತದೆ.

ಕನ್ನಡದ ಸ್ಟಾರ್ ನಟಿ ರಚಿತಾ ರಾಮ್ ಈ ಚಿತ್ರದಲ್ಲಿ ನಾಯಕನ ಜೊತೆ ಡ್ಯೂಯೆಟ್ ಆಡುವ ಅಥವಾ ನಾಯಕನ ಲವ್ ಇಂಟ್ರಸ್ಟ್ ಆಗಿ ನಾಯಕಿಯ ಪಾತ್ರ ಮಾಡಿಲ್ಲ. ಅದನ್ನೆಲ್ಲಾ ಬ್ರೇಕ್ ಮಾಡಿ ರಚಿತಾ ರಾಮ್ ಹೊಸ ಪ್ರಯೋಗಕ್ಕೆ ಇಳಿದಿದ್ದಾರೆ. ರಚಿತಾ ರಾಮ್ ಈ ಚಿತ್ರದಲ್ಲಿ ಅತಿ ಮುಖ್ಯವಾದ ಪಾತ್ರ ಮಾಡಿದ್ದಾರೆ. ರಮೇಶ್ ಅರವಿಂದ್ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ.

100 ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಇಂದು ನೆರವೇರಿದ್ದು. ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ನಮನ ಸಲ್ಲಿಸಿ ಬಳಿಕ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿದೆ.
ಇನ್ನೂ ಚಿತ್ರದ ಬಗ್ಗೆ ನಟ ರಮೇಶ್ ಅರವಿಂದ್ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ್ದು, “ಇದು ಪೊಲೀಸ್ ಆಫೀಸರ್ ಕಥೆ, ಇದು ಫ್ಯಾಮಿಲಿ ಕಥೆ, ಅಪರಿಚಿತರು ಚಾಕೊಲೇಟ್ ಕೊಟ್ಟರೆ ತಗೆದು ಕೊಳ್ಳಬಾರದು ಎಂದು ಅಪ್ಪ ಅಮ್ಮ ಮಕ್ಕಳಿಗೆ ಹೇಳುತ್ತಾರೆ. ಆದರೆ ಈಗ ನಮಗೆ ಗೊತ್ತಿಲ್ಲದೆ ಅಪರಿಚಿತರು ನಮ್ಮ ಮೊಬೈಲ್ ಮೂಲಕ ಮನೆ ಒಳಗೆ ಬರುತ್ತಿದ್ದಾರೆ. ನಮ್ಮ ಮಕ್ಕಳಿಗೆ ಏನೇನೋ ಚಾಕೊಲೇಟ್ ಕೊಡುತ್ತಾರೆ. ನಮಗೆ ಅದರ ಅರಿವು ಇರುವುದಿಲ್ಲ. ಮನೆಯಲ್ಲಿ ನಾಲ್ಕು ಜನ ಇದ್ದರೆ, ಎಲ್ಲರಿಗೂ ಒಂದು ಮೊಬೈಲ್ ಇರುತ್ತದೆ. . ಎಲ್ಲರೂ ಏನೇನೋ ಮಾಡುತ್ತಿರುತ್ತಾರೆ. ಮನೆಗೆ ಬೀಗ ಹಾಕಿದ್ದರು, ಮೊಬೈಲ್ ಮೂಲಕ ಮನೆಯ ಒಳಗೆ ಕಳ್ಳರು ಬಂದು ಬ್ರೇನ್ ವಾಶ್ ಮಾಡುತ್ತಾರೆ. ನಾವು ಮಕ್ಕಳಿಗೆ ಹೇಳಿ ಕೊಟ್ಟ ಮೌಲ್ಯವನ್ನು ಬ್ರೇಕ್ ಮಾಡುತ್ತಿದ್ದಾರೆ. ಅದನ್ನ ಮನೆ ಮಾಲೀಕ ಹೇಗೆ ಬ್ರೇಕ್ ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ’ ಎಂದು ಚಿತ್ರದ ಬಗ್ಗೆ ನಟ ರಮೇಶ್ ಅರವಿಂದ್ ಹೇಳಿದ್ದಾರೆ.

ಇಂದಿನ ಆಧುನಿಕತೆ ಹಾಗೂ, ಮೊಬೈಲ್ ಯುಗಕ್ಕೆ ಹೇಳಲೇಬೇಕಾದ ಒಂದು ಕಥೆಯನ್ನು ಪರದೆ ಮೇಲೆ ತರಲು ರಮೇಶ್ ಅರವಿಂದ್ ಸಜ್ಜಾಗಿದ್ದಾರೆ. ೧೦೦ ಚಿತ್ರ ಇದೇ ನವೆಂಬರ್ 19ಕ್ಕೆ ರಿಲೀಸ್ ಆಗುತ್ತಿದೆ.

ರೂಪೇಶ್, ಫಿಲಂ ಬ್ಯೂರೋ, ಕರ್ನಾಟಕ ಟಿವಿ.

- Advertisement -

Latest Posts

Don't Miss