Sunday, September 8, 2024

Latest Posts

ದರ್ಶನ್, ಅಪ್ಪು, ಶಿವಣ್ಣ ,ಸುದೀಪ್ ಸ್ಟೈಲ್ ನಲ್ಲಿ ರಚಿತಾರಾಮ್.

- Advertisement -

www.karnatakatv.net:ರಚಿತಾ ರಾಮ್ ತಮ್ಮ ನಟನೆಯಿಂದ ಮನೆ ಮಾತಾಗಿದ್ದಾರೆ. ಸದ್ಯ ರಚಿತಾ ಉತ್ತಮ ಮತ್ತು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ಏಕ್ ಲವ್ ಯಾ ಸಿನಿಮಾದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈಗಾಗಲೇ ಎಣ್ಣೆ ಸಾಂಗ್ ನಿಂದಾ ಪಡ್ಡೆ ಹುಡುಗರು ಮತ್ತು ಕ್ರೇಜಿ ಹುಡುಗಿಯರ ಮೆಚ್ಚುಗೆಯ ನಟಿಯಾಗಿ ಬಿಟ್ಟಿದ್ದಾರೆ. ಈ ಚಿತ್ರದ ಎಲ್ಲಾ ಹಾಡುಗಳೂ ಮಿಲಿಯನ್ ಗಟ್ಟಲೆ ವ್ಯೂವ್ ಪಡೆದು ಸ್ಯಾಂಡಲ್ವುಡ್ ನಲ್ಲಿ ಸಖತ್ ಸೌಂಡ್ ಮಾಡುತ್ತಿವೆ.

ಇದೀಗ ಮೀಟ್ ಮಾಡೋಣ ಇಲ್ಲಾ ಡೇಟ್ ಮಾಡೋಣ ಅನ್ನುತ್ತಿದ್ದಾರೆ ರಚಿತಾ ರಾಮ್.
ಏಕ್ ಲವ್ ಯಾ ಸಿನಿಮಾದ ಐದನೇ ಹಾಡು “ಮೀಟ್ ಮಾಡೋಣ ಇಲ್ಲಾ ಡೇಟ್ ಮಾಡೋಣ” ರಿಲೀಸ್ ಆಗಿದ್ದು, ವಾವ್ ರಚ್ಚೂ ಅಂತಿದ್ದಾರೆ ಅಭಿಮಾನಿಗಳು.

ಮೊದಲನೆಯದಾಗಿ “ಮೀಟ್ ಮಾಡೋಣ ಇಲ್ಲಾ ಡೇಟ್ ಮಾಡೋಣ” ಒಂದು ಸೂಪರ್ ಹಾಡು. ವಿಜಯ್ ಈಶ್ವರ್ ಸಾಹಿತ್ಯ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ, ಐಶ್ವರ್ಯ ರಂಗರಾಜನ್ ಅವರ ಅದ್ಬುತ ಧ್ವನಿ ಕೇಳುಗರನ್ನು ಮತ್ತೆ ಮತ್ತೆ ಹಾಡು ಕೇಳುವಂತೆ ಮಾಡುತ್ತಿದೆ.

ಇನ್ನೂ ಈ ಹಾಡಿನ ತುಣುಕುಗಳನ್ನು ರಿಲೀಸ್ ಮಾಡಿದ್ದು, ರಚಿತಾ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡನ್ನು ಮೋಹನ್ ಕೊರಿಯೋಗ್ರಫಿ ಮಾಡಿದ್ದಾರೆ. ವಿಶೇಷವಾಗಿ ರಚಿತಾ ಸ್ಟೆಪ್ಸ್ ಮಾತ್ರವಲ್ಲದೆ, ಕೆಲ ಹೀರೋಗಳ ಸಿನಿಮಾದ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್, ಸುದೀಪ್, ಶಿವಣ್ಣ, ಅಪ್ಪು ಅವರ ಲುಕ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲಾ ಲುಕ್ ಗಳು ಪ್ರೇಮ್ ಅವರು ನಿರ್ದೇಶನ ಮಾಡಿದ್ದ ಸಿನಿಮಾದ ಲುಕ್ ಗಳಾಗಿವೆ. ಈ ಲುಕ್ ನಲ್ಲಿ ರಚಿತಾ ಸುಂದರವಾಗಿ ಕಾಣುತ್ತಿದ್ದಾರೆ.

- Advertisement -

Latest Posts

Don't Miss