Sunday, May 19, 2024

Latest Posts

‘ರಾಘವೇಂದ್ರ ಸ್ಟೋರ್ಸ್’ ರಿಲೀಸ್ ಡೇಟ್ ಫಿಕ್ಸ್.!

- Advertisement -

ಸ್ಯಾಂಡಲ್​​ವುಡ್​​ನ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಅಭಿನಯದ ಬಹುನಿರೀಕ್ಷಿತ ‘ರಾಘವೇಂದ್ರ ಸ್ಟೋರ್’ ಚಿತ್ರದ ಕುರಿತು ಬಿಗ್​ ಅಫ್​ಡೇಟ್​ ಒಂದು ಹೊರಬಿದ್ದಿದೆ. ಈ ಸಿನಿಮಾವನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್​ ಟ್ವಿಟರ್​ ನಲ್ಲಿ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಮೂಲಕ ಜಗ್ಗೇಶ್ ಅಭಿಮಾನಿಗಳಿಗೆ ಸಂತಸವಾಗಿದ್ದು, ಬಹಳ ದಿನಗಳ ನಂತರ ಜಗ್ಗೇಶ್​ ಅವರನ್ನು ಬೆಳ್ಳಿತೆರೆ ಮೇಲೆ ನೋಡಲು ಸಿನಿಪ್ರೇಮಿಗಳು ಕಾತುರದಿಂದ ಕಾಡು ಕುಳಿತಿದ್ದಾರೆ.

‘ರಾಘವೇಂದ್ರ ಸ್ಟೋರ್ಸ್’ ಹೊಂಬಾಳೆ ಫಿಲಂಸ್ ಅಡಿಯಲ್ಲಿ ತಯಾರಾಗುತ್ತಿರುವ 12ನೇ ಸಿನಿಮಾ. ಈಗಾಗಲೇ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಏನಿರಬಹುದು ಎನ್ನುವ ಬಗ್ಗೆ ಟೀಸರ್ ಸೂಚನೆ ಕೊಟ್ಟಿದೆ. ಇನ್ನು ಚಿತ್ರದ ಟೈಟಲ್‌ಗೆ ತಕ್ಕಂತೆ ಟೀಸರ್‌ನಲ್ಲಿ ನಟ ಜಗ್ಗೇಶ್ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದೀಗ ಈ ಚಿತ್ರದ ರಿಲೀಸ್ ಡೇಟ್ ಅನ್ನು ಚಿತ್ರತಂಡ ಪ್ರಕಟ ಮಾಡಿದೆ. ಆಗಸ್ಟ್ 5ಕ್ಕೆ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಲಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ತೆರೆಯ ಮೇಲೆ ಬರುತ್ತಿದೆ.

ಇನ್ನು ಈ ಸಿನಿಮಾದ ರಿಲೀಸ್ ಡೇಟ್ ಬಗ್ಗೆ ನಟ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, “ರಾಘವೇಂದ್ರ ಸ್ಟೋರ್ಸ್ ಅಡುಗೆ ಸವಿಯಲು ಸಮಯ ಬಂದಿದೆ. ವರಮಹಾಲಕ್ಷ್ಮಿಯ ಹಬ್ಬದಂದು ಸಿಹಿಸವಿಯಲು ತಯಾರಾಗಿ. ಇದು ಚಿತ್ರವಲ್ಲಾ ಒಂದು ಅದ್ಭುತ ಕಾದಂಬರಿ. ಇಂಥ ಅವಕಾಶ ನೀಡಿದ, ಹೊಂಬಾಳೆ ಫಿಲ್ಮ್ಸ್, ಸಂತೋಷ್ ಆನಂದ್ ರಾಮ್, ಕಾರ್ತಿಕ್, ಯೋಗಿ ಅವರಿಗೆ ಧನ್ಯವಾದ. ಸಂತೋಷ ಆನಂದ ರಾಮ್ ನನ್ನನ್ನು ಬಹಳ ಅದ್ಭುತವಾಗಿ ಬಳಸಿಕೊಂಡಿದ್ದಾನೆ ಧನ್ಯವಾದ ಚಿನ್ನ”. ಎಂದು ಬರೆದುಕೊಂಡಿದ್ದಾರೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ 

 

- Advertisement -

Latest Posts

Don't Miss