Monday, November 25, 2024

Latest Posts

ನೀ ಹೂ ಅಂದಿಲ್ಲ ಅಂದ್ರೆ ತಂಗೀಗೆ ಪ್ರಪೋಸ್ ಮಾಡ್ತೀನಿ ಎಂದಿದ್ರಂತೆ ನಟ ಪ್ರಜ್ವಲ್ ದೇವರಾಜ್..!

- Advertisement -

ನಟಿ ರಾಗಿಣಿ ಲಾ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆದರೆ ಮುಂದೆ ಯಾವ ಸಿನಿಮಾಗಳಲ್ಲಿಯೂ ನಟನೆ ಕಂಟಿನ್ಯೂ ಮಾಡಲಿಲ್ಲ. ಯಾಕಂದ್ರೆ ತಮಗಿಷ್ಟವಾದ ಕಥೆ ಅವರ ಬಳಿ ಬರದ ಕಾರಣ, ಯಾವ ಸಿನಿಮಾಗಳಲ್ಲಿಯೂ ಮುಂದೆ ರಾಗಿಣಿ ಪ್ರಜ್ವಲ್ ನಟಿಸಿಲ್ಲವಂತೆ. ಅದೇ ಡ್ಯಾನ್ಸ್ ಸಬ್ಜೆಕ್ಟ್ ಇರೋ ಕಥೆಯ ಸಿನಿಮಾದಲ್ಲಿ ನಟಿಸೋಕೆ ಬಹಳ ಇಷ್ಟವಿದೆ ಅನ್ನೋ ಆಸೆಯನ್ನ ರಾಗಿಣಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಅಲ್ಲದೇ ನನ್ನ ಡ್ರೀಮ್ ಸಿನಿಮಾ ಸಹ ಆಗಿದೆ ಅಂತಾರೆ. ಇನ್ನು ಹೆಣ್ಣು ಮಕ್ಕಳಾಗಿ ಪ್ರತಿಯೊಬ್ಬರಿಗೂ ಸಾಕಷ್ಟು ಆಸೆ, ಕನಸುಗಳಿರುತ್ತೆ. ಅದರಂತೆ ನನ್ನ ಆಸೆಗಳನ್ನ ಮೊದಲಿಗೆ ಈಡೇರಿಸಿದ್ದು ನಮ್ಮ ತಂದೆ-ತಾಯಿ. ನನ್ನ ಕನಸುಗಳನ್ನ ನನಸಾಗಿ ಮಾಡ್ತಿರೋದು ನನ್ನ ಅತ್ತೆ-ಮಾವ, ಪತಿ ಅಂತಾರೆ ನಟಿ ರಾಗಿಣಿ ಪ್ರಜ್ವಲ್. ಅಷ್ಟೇ ಅಲ್ಲ ನನ್ನ ತಂಗಿ ಕನಿಕಾ ನನಗೆ ಬಿಗ್ ಸಪೋರ್ಟ್ ಸಿಸ್ಟಮ್, ನನ್ನ ಪ್ರತಿಯೊಂದು ಕೆಲಸಕ್ಕೆ ಅವಳು ನನಗೆ ಸದಾ ಬೆನ್ನೆಲುಬಾಗಿರ್ತಾಳೆ. ನನಗೆ ಡ್ಯಾನ್ಸ್ ಕ್ಲಾಸ್ ನಡೆಸಬೇಕು ಅನ್ನೋದು ಸಹ ಕನಸಿತ್ತು.

Dream come true ಅಂತಾರಲ್ವಾ ಅದೇ ಈ “Urhythmix” ಡ್ಯಾನ್ಸ್ ಹಾಗೂ ಫಿಟ್‌ನೆಸ್ ಸ್ಟುಡಿಯೋ. ಇದಕ್ಕೆ ಬೆಂಬಲ ನೀಡಿದ್ದು ನನ್ನ ಇಡೀ ಕುಟುಂಬ. ಇನ್ನು ತಮ್ಮ ಲವ್‌ಸ್ಟೋರಿ ಬಗ್ಗೇನೂ ಮಾತನಾಡಿರೋ ರಾಗಿಣಿ ನಮ್ಮದು ಚೈಲ್ಡ್ಹುಡ್ ಲವ್‌ಸ್ಟೋರಿ. ನನು 6ನೇ ತರಗತಿಯಲ್ಲಿದ್ದೆ, ಪ್ರಜ್ವಲ್ 9ನೇ ತರಗತಿಯಲ್ಲಿದ್ದದರು.

ನಾವಿಬ್ಬರೂ ಫಸ್ಟ್ ಮೀಟ್ ಮಾಡಿದ್ದೂ ಸಹ ಇಮ್ರಾನ್ ಸರ್ದಾರಿಯಾ ಅವರ ಡ್ಯಾನ್ಸ್ ಕ್ಲಾಸ್‌ನಲ್ಲೇ. ಪ್ರಣಮ್ ಹಾಗೂ ನಾನು ಆಗ ಡ್ಯಾನ್ಸ್ ಕ್ಲಾಸ್‌ನಲ್ಲಿ ಬ್ಯಾಚ್ ಮೇಟ್ಸ್ ಆಗಿದ್ವಿ. ಪ್ರಜ್ವಲ್ ಸೀನಿಯರ್ ಬ್ಯಾಚ್‌ನಲ್ಲಿದ್ರು. ಅಲ್ಲೆ ಚಿರು, ಪನ್ನಗ ಇವರೆಲ್ಲರೂ ಇದ್ರು. ಅಲ್ಲಿಂದಲೂ ನಾವೆಲ್ಲರೂ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡ್ಕೊಂಡ್ವಿ.

ಅಲ್ಲಿಂದ ನಮ್ಮ ಫ್ರೆಂಡ್‌ಶಿಫ್ ಸ್ಟಾರ್ಟ್ ಆಯ್ತು. ಈಗಲೂ ನಾವೆಲ್ಲರೂ ಅದೇ ರೀತಿಯೇ ಇದ್ದೀವಿ. ಇನ್ನು ನನಗೆ ಪ್ರಜ್ಜು ಪ್ರಪೋಸ್ ಮಾಡಿದ್ದೇ ಒಂದು ಇಂಟ್ರೆಸ್ಟಿಂಗ್ ಕತೆ. ನೀನು ಹೂ ಅಂದಿಲ್ಲ ಅಂದ್ರೆ ನಿನ್ನ ತಂಗೀಗೆ ಪ್ರಪೋಸ್ ಮಾಡ್ತೀನಿ ಎಂದಿದ್ರಂತೆ ನಟ ಪ್ರಜ್ವಲ್ ದೇವರಾಜ್. ಸದ್ಯ ಪ್ರೀತಿಸಿ ಮದುವೆಯಗಿರೋ ಈ ಜೋಡಿ ಈಗ ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ ಅಂತಾನೇ ಫೇಮಸ್ ಆಗಿದ್ದಾರೆ.

ನಳಿನಾಕ್ಷಿ, ಕರ್ನಾಟಕ ನ್ಯೂಸ್

- Advertisement -

Latest Posts

Don't Miss