Tuesday, September 23, 2025

Latest Posts

Bajaj Groupನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ನಿಧನ..!

- Advertisement -

ಬಜಾಜ್ ಗ್ರೂಪ್‌ನ ಮಾಜಿ ಅಧ್ಯಕ್ಷ, ಕೈಗಾರಿಕೋದ್ಯಮಿ ರಾಹುಲ್ ಬಜಾಜ್ (Rahul bajaj) (83)  ಇಂದು ಪುಣೆ(Pune )ಯಲ್ಲಿ ನಿಧನರಾದರು. ಇಂದು ಮಧ್ಯಾಹ್ನ 14:30 ಗಂಟೆಗೆ ನಿಧನರಾದರು, ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ. ರಾಹುಲ್ ಬಜಾಜ್ ಅವರಿಗೆ 2001 ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿ ಗೌರವಿಸಲಾಯಿತು. ಕಳೆದ ಏಪ್ರಿಲ್‌ನಲ್ಲಿ ಬಜಾಜ್ ಆಟೋ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಬಜಾಜ್ ರಾಜೀನಾಮೆ ನೀಡಿದ್ದರು. ಆದಾಗ್ಯೂ, ಅವರು ಐದು ವರ್ಷಗಳ ಕಾಲ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಕೈಗಾರಿಕೋದ್ಯಮಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶ್ರದ್ಧಾಂಜಲಿಗಳ ಮಹಾಪೂರವೇ ಹರಿದು ಬರತೊಡಗಿತು. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ (Jyotiraditya Scindia) ಅವರು ರಾಹುಲ್ ಬಜಾಜ್ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ. ರಾಹುಲ್ ಬಜಾಜ್ ನಿಧನ ಕಾರ್ಪೊರೇಟ್‌ಗಳು, ರಾಜಕೀಯ ನಾಯಕರು ದುಃಖ ವ್ಯಕ್ತಪಡಿಸಿದ್ದಾರೆ. ಯಶಸ್ವಿ ಉದ್ಯಮಿ, ಲೋಕೋಪಕಾರಿ ಮತ್ತು ಬಜಾಜ್‌ನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ಜಿ ಅವರಿಗೆ ನನ್ನ ಹೃತ್ಪೂರ್ವಕ ನಮನಗಳು, ಓಂ ಶಾಂತಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಕೈಗಾರಿಕೋದ್ಯಮಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

- Advertisement -

Latest Posts

Don't Miss