Political News: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿದೇಶಕ್ಕೆ ಹೋದಾಗಲೆಲ್ಲ, ಆಡಳಿತ ಪಕ್ಷವಾದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಭಾರತದ ಮಾನ ಮರ್ಯಾದೆ ತೆಗೆಯುತ್ತಿದ್ದರು. ಈಗಲೂ ಅದೇ ಕೆಲಸ ಮುಂದುವರೆಸಿದೆ ಎಂದು ರಾಹುಲ್ ವಿರುದ್ಧ ಬಿಜೆಪಿ ನಾಾಯಕರು ಕಿಡಿಕಾರಿದ್ದಾರೆ.
ಸದ್‌ಯ ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಬೋಸ್ಟನ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ಚುನಾವಣಾ ಆಯೋಗವು ರಾಜಿ ಮಾಡಿಕೊಂಡಿದ್ದು, ವ್ಯವಸ್ಥೆಯಲ್ಲಿ ಏನೋ ಸಮಸ್ಯೆ ಇದೆ ಎಂದು ಭಾರತೀಯ ಚುನಾವಣೆ ವ್‌ಯವಸ್ಥೆ ಬಗ್ಗೆ ವಿದೇಶಕ್ಕೆ ಹೋಗಿ ಕಿಡಿಕಾರಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಬಗ್ಗೆ ದೂರಿರುವ ರಾಾಹುಲ್, ವಯಸ್ಕರಿಗಿಂತ ಹೆಚ್ಚು ಜನ ಓಟ್ ಮಾಡಿದ್ದಾರೆ. ಅದರಲ್ಲೂ ಚುನಾವಣೆ ಮುಗಿದು ಎರಡೇ ಗಂಟೆಯಲ್ಲಿ 65 ಲಕ್ಷ ಜನ ಓಟ್ ಮಾಡಿದ್ದಾರೆ. ಇದು ನಂಂಬಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ವ್ಯಂಗ್ಯವಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿದೇಶ ಪ್ರವಾಸ ಮಾಡಿದಾಗಲೆಲ್ಲ ರಾಹುಲ್ ಗಾಂಧಿಯವರು ಭಾರತದ ಪ್ರಜಾಪ್ರಭುತ್ವ ಹಾಗೂ ವಿವಿಧ ಸಂಸ್ಥೆಗಳನ್ನು ಟೀಕಿಸುವ ಪ್ರವೃತ್ತಿಯನ್ನು ಕೊನೆಗೊಳಿಸಬೇಕು. ಕ್ರಿಕೆಟ್ ಆಟದಲ್ಲಿ ಔಟ್ ಆದಾಗ ಮಕ್ಕಳು ಬ್ಯಾಟ್ ನೀಡದೇ ತೋರುವ ನಡವಳಿಕೆಯನ್ನು ರಾಹುಲ್ ಗಾಂಧಿ ಪ್ರದರ್ಶಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಮ್ಮ ಹಿಂದಿನ ದಾಖಲೆಗಳನ್ನೊಮ್ಮೆ ಪರಿಶೀಲಿಸುವುದು ಉತ್ತಮ.
1. ಸುಮಾರು ವರ್ಷಗಳಿಂದಲೂ ಚುನಾವಣಾ ಆಯುಕ್ತರನ್ನು ಪ್ರಧಾನ ಮಂತ್ರಿಯೇ ಆಯ್ಕೆ ಮಾಡುತ್ತಿದ್ದರು, ಚುನಾವಣಾ ದಿನಾಂಕಗಳಿಗಾಗಿ ಆಯೋಗವು ಪ್ರಧಾನಿಯನ್ನು ಸಂಪರ್ಕಿಸುತ್ತಿತ್ತು.
2. ಚುನಾವಣಾ ಆಯೋಗದ ಅಧಿಕಾರಿಗಳು 10 ಜನಪಥ್‌ನಿಂದ ನೇರವಾಗಿ ಸೂಚನೆಗಳನ್ನು ಪಡೆಯುತ್ತಿದ್ದರೆ ಹೊರೆತು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ.
3. 1991 ರಲ್ಲಿ, ರಾಜೀವ್ ಗಾಂಧಿಯವರ ಹತ್ಯೆಯ ನಂತರ, ಚುನಾವಣೆಗಳನ್ನು ಮುಂದೂಡಲಾಯಿತು – ಇದು ಸಾರ್ವಜನಿಕರ ಹಣ ಪೋಲಾಗಿದ್ದು ನೆನಪಿಸಿಕೊಳ್ಳಬೇಕು ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.

