Monday, October 27, 2025

Latest Posts

RAICHUR : ಉಕ್ರೇನ್ ನಿಂದ ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗ್ತಿದೆ..!

- Advertisement -

ರಾಯಚೂರು (Raichur) ಉಕ್ರೇನ್ ನಲ್ಲಿ ರಾಜ್ಯದ ವಿದ್ಯಾರ್ಥಿ ನವೀನ್ (Nveen) ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲ್ಲಿದ್ದ ಉಳಿದ ವಿದ್ಯಾರ್ಥಿಗಳು ಅಕ್ಷರಶಃ ಬೆಚ್ಚಿಬಿದ್ದಿದ್ರು. ನಿನ್ನೆ ತುರ್ತು ಸಂದೇಶ ಹಿನ್ನೆಲೆ ಉಕ್ರೇನ್ ನಲ್ಲಿದ್ದ ಆ ಜಿಲ್ಲೆಯ ‌ಎಲ್ಲ ವಿದ್ಯಾರ್ಥಿಗಳು, ಉಕ್ರೇನ್ ಗಡಿ ದಾಟಿ, ಪ್ರಾಣ ಉಳಿಸಿ ಕೊಂಡಿದ್ದಾರೆ. ಇತ್ತ ಕೆಡಿಪಿ ಮೀಟಿಂಗ್ (KDP Meeting) ನಲ್ಲಿ ಉಕ್ರೇನ್ ನಲ್ಲಿ ಸಿಲುಕಿರೊ ವಿದ್ಯಾರ್ಥಿಗಳ ರಕ್ಷಣಾ ಕಾರ್ಯದ ವಿಚಾರ ಪ್ರತಿಧ್ವನಿಸ್ತು. ಹೌದು ಉಕ್ರೇನ್-ರಷ್ಯಾ ಯುದ್ಧದಲ್ಲಿ ರಾಯಚೂರು ಮೂಲದ ವಿದ್ಯಾರ್ಥಿಗಳು ಅಕ್ಷರಶಃ ಬಚ್ಚಿ ಬಿದ್ದಿದ್ರು. ಇಂದು ರಾಯಚೂರು ನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಇದೇ ವಿಚಾರ ಪ್ರತಿಧ್ವನಿಸ್ತು. ಸಭೆಯಲ್ಲಿ ಭಾಗಿಯಾಗಿದ್ದ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ (Musky Basanagouda Turviha), ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ (Sindanur MLA Venkatarao Nadagowda) ಸೇರಿ ಉಳಿದ ಶಾಸಕರು, ಉಕ್ರೇನ್ ನಲ್ಲಿ ಸಿಲುಕಿರೊ ಜಿಲ್ಲೆಯ ವಿದ್ಯಾರ್ಥಿಗಳ ರಕ್ಷಣಾ ಕಾರ್ಯದ ಬಗ್ಗೆ ಪ್ರಸ್ತಾಪಿದ್ರು.  ಅವರ ರಕ್ಷಣಾ ಕಾರ್ಯ ಹೇಗಿದೆ..? ಅವರು ಸ್ಥಿತಿ, ಗತಿ ಬಗ್ಗೆ ಕೇಳಿದ್ರು. ಆಗ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್ ಹಾಗೂ ಕೊಪ್ಪಳ ಸಂಸದ ಸಂಗಣ್ಣ ಕರಡಿ ಸ್ಪಷ್ಟನೆ ನೀಡಿದ್ರು. ನಿನ್ನೆಯೇ ಉಕ್ರೇನ್ ನಲ್ಲಿರೊ ವಿದ್ಯಾರ್ಥಿಗಳಿಗೆ ತುರ್ತು ಸಂದೇಶ ನೀಡಿ, ಸಮೀಪದ ಏರ್ ಪೋರ್ಟ್ ಗಡಿಗಳಿಗೆ ಬರುವಂತೆ ಸೂಚಿಸಲಾಗಿತ್ತು. ಆ ಮೂಲಕ ಎಲ್ಲಾ ವಿದ್ಯಾರ್ಥಿಗಳ ರಕ್ಷಣಾ ಕಾರ್ಯ ನಡೀತಿದೆ ಅಂತ ಸ್ಪಷ್ಟನೆ ನೀಡಿದ್ರು. ಇದಷ್ಟೇ ಅಲ್ಲ,ರಾಯಚೂರು ಮೂಲದ ರುಬಿನಾ, ಚನ್ನವಿರೇಶ್, ಅಭಿಷೇಕ್, ಸೋಮು, ನಂದೀಶ್, ತೃಪ್ತಿ, ಶಶಾಂಕ್ ಗುಡದಪ್ಪ ಸದ್ಯ ಉಕ್ರೇನ್ ಗಡಿ ತಲುಪಿದ್ದಾರೆ. ಉಕ್ರೇನ್ ನಲ್ಲಿ ರಾಜ್ಯದ ನವೀನ್ ಮೃತಪಟ್ಟ ಬೆನ್ನಲ್ಲೆ,  ಅಲ್ಲಿರೋ ಭಾರತದ ವಿದ್ಯಾರ್ಥಿಗಳಿಗೆ ತುರ್ತು ಸಂದೇಶ ರವಾನೆಯಾಗಿತ್ತು. ಆಗ ಅಲ್ಲಿರೋ ರಾಯಚೂರು ಮೂಲದ ವಿದ್ಯಾರ್ಥಿಗಳು,ಭಾರತದ ಧ್ವಜ ಹಿಡಿದುಕೊಂಡು ಕಾರ್ಕಿವ್ ಸೇರಿ ಇನ್ನಿತರ ಕಡೆಗಳಿಂದ ಬ್ಯಾಚ್ ವೈಸ್ ಆಗಿ ರೈಲು ಹತ್ತಿದ್ರು. ಸದ್ಯ ಎಲ್ಲರೂ ಉಕ್ರೇನ್ ಗಡಿ ದಾಟಿದ್ದು, ಎಲ್ಲರೂ ಸೇಫ್ ಅನ್ನೊ ಸಂದೇಶ ರವಾನಿಸಿದ್ದಾರೆ. ಇದಕ್ಕು ಮುನ್ನ ಉಕ್ರೇನ್ ನಲ್ಲಿದ್ದ ವಿದ್ಯಾರ್ಥಿಗಳು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ದೆಹಲಿ ತಲುಪಿರೊ ರಾಯಚೂರು ನಗರದ ಮಯೂರ್ ಪಟ್ಟ ಪಾಡು ಅಂತಿಂಥದ್ದಲ್ಲ. ಮಯೂರ್, ಉಕ್ರೇನ್ ನಿಂದ  ರೊಮ್ಯಾನಿಯಾ ದೇಶಕ್ಕೆ ಹಿಂದಿರುಗಿದಾಗ ರಾತ್ರಿಯಿಡಿ ಕ್ಯೂ ನಲ್ಲಿ ನಿಂತಿದ್ರು. ರೊಮ್ಯಾನಿಯಾ ಏರ್ ಪೋರ್ಟ್ ಬಳಿ ಮೈನಸ್ 10° ಡಿಗ್ರಿ ಚಳಿಯಲ್ಲಿ ಉಸಿರು ಬಿಗಿ ಹಿಡಿದು ಸಾವಿರಾರು ಜನರ ಮಧ್ಯೆ ಕ್ಯೂ ನಲ್ಲಿ‌ ನಿಂತಿದ್ರು. ಒಂದು ವೇಳೆ,ಅದೇ ರೀತಿ ಇನ್ನೊಂದು ದಿನ ಮೈ ಕೊರೆವ ಚಳಿಯಲ್ಲಿ ನಿಂತಿದ್ರೆ, ಅಲ್ಲೆ ಪ್ರಾಣ ಹೋಗ್ತಿತ್ತು ಅಂತ ಮಯೂರ್ ಪೋಷಕರೆದುರು ಕಣ್ಣೀರಿಟ್ಟಿದ್ದಾನೆ. ಹೀಗಾಗಿ ಉಕ್ರೇನ್ ನಲ್ಲಿ ಸಿಲುಕಿರೊ ಎಲ್ಲಾ ವಿದ್ಯಾರ್ಥಿಗಳನ್ನು ಸೇಫಾಗಿ ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗ್ತಿದೆ ಅಂತ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ. ಅದೆನೇ ಇರ್ಲಿ, ರಾಯಚೂರು ಮೂಲದ ಇನ್ನೂ ಕೆಲ ವಿದ್ಯಾರ್ಥಿಗಳು, ಉಕ್ರೇನ್ ಗಡಿ‌‌ ದಾಟಿದ್ದು ಮೂರ್ನಾಲ್ಕು ದಿನಗಳಲ್ಲಿ ತವರು ಸೇರಲಿದ್ದಾರೆ. ಹಾಗಂತ ನಿಟ್ಟುಸಿರು ಬಿಡುವಂತೆಯೂ ಇಲ್ಲ. ಯಾಕಂದ್ರೆ,ಕೆಲ ವಿದ್ಯಾರ್ಥಿಗಳು ಇನ್ನೂ ಉಕ್ರೇನ್ ಗಡಿ ಸಮೀಪದಲ್ಲಿದ್ದು ಏನು ಬೇಕಾದ್ರೂ ಆಗಬಹುದು. ಆದ್ರೆ ಎಲ್ಲಾ ವಿದ್ಯಾರ್ಥಿಗಳು ಸೇಫಾಗಿ ಭಾರತಕ್ಕೆ ಮರಳಲಿ ಅನ್ನೋದೇ ನಮ್ಮ ಆಶಯ.

                                                                                    ಅನಿಲ್ ಕುಮಾರ್ , ಕರ್ನಾಟಕ ಟಿವಿ,ರಾಯಚೂರು.

- Advertisement -

Latest Posts

Don't Miss