ರಾಯಚೂರು : ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ (Bajrang Dal activist) ಹರ್ಷ ಕೊಲೆ (Harsha murder) ಪ್ರಕರಣ ಇಡೀ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಇತ್ತ ಬಿಸಿಲುನಾಡು ರಾಯಚೂರಿನಲ್ಲೂ (raichur) ಹರ್ಷ ಕೊಲೆ ಪ್ರಕರಣದ ಕಾವು ಜೋರಾಗಿದ್ದು,ಹಿಂದು ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿವೆ. ಹೌದು. ಎಲ್ಲಿ ನೋಡಿದ್ರೂ ಕೇಸರಿ,ಕೇಸರಿ, ಕೇಸರಿ ಬಾವುಟಗಳದ್ದೇ ಹಾರಾಟ. ಹೋರಾಟಗಾರರ ಬಾಯಲ್ಲಿ ಅದೊಂದೇ ಘೋಷಣೆ, ಹರ್ಷ ಅಮರ್ ರಹೆ. ಹರ್ಷ ಅಮರ್ ರಹೆ ಅಂತ. ಕಣ್ಣು ಹಾಸಿದ ಕಡೆಯಲ್ಲೆಲ್ಲಾ ಹಿಂದೂ ಸಂಘಟನೆ ಹೋರಾಟಗಾರರ ಜೈಕಾರವೇ ಮೊಳಗಿದೆ. ಹೌದು, ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಕಾವು ಬಿಸಿಲುನಾಡು ರಾಯಚೂರು ಜಿಲ್ಲೆವರೆಗೂ ವ್ಯಾಪಿಸಿದೆ. ಹಿಜಾಬ್-ಕೇಸರಿ ಶಾಲು ವಿವಾದದ ವೇಳೆ ರಾಯಚೂರು ಜಿಲ್ಲೆ ತಣ್ಣಗಿತ್ತು. ಆದ್ರೆ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ವಿರುದ್ಧ ಈಗ ಇಡೀ ಹಿಂದೂ ಸಂಘಟನೆಗಳು (Hindu organizations) ತಿರುಗಿಬಿದ್ದಿವೆ. ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ವಿರೋಧಿಸಿ ಇಂದು ಜಿಲ್ಲೆಯ ಹಲವೆಡೆ ಕೇಸರಿ ಪಡೆ,ಪ್ರತಿಭಟನೆ ನಡೆಸಿವೆ. ಅದರಲ್ಲೂ ಕೊಂಚ ಸೆನ್ಸಿಟಿವ್ ಆಗಿರೊ ಲಿಂಗಸುಗೂರು ಪಟ್ಟಣದಲ್ಲಿ ಇಂದು ಹಿಂದೂ ಕಾರ್ಯಕರ್ತರು ದೊಡ್ಡ ಹೋರಾಟವನ್ನೇ ನಡೆಸಿದ್ದಾರೆ. ಹೌದು,ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣ (town of Lingasuguru) ಇಂದು ಸಂಪೂರ್ಣ ಕೇಸರಿಮಯವಾಗಿತ್ತು. ಎಬಿವಿಪಿ(ABVP), ಭಜರಂಗದಳ, ಶ್ರೀರಾಮಸೇನೆ (Sriramasena) ಸೇರಿ ವಿವಿಧ ಹಿಂದು ಪರ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಇಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಪ್ರತಿಯೊಬ್ಬ ಪ್ರತಿಭಟನಾಕಾರರಲ್ಲೂ ಭಜರಂಗದಳ ಹರ್ಷ ಹತ್ಯೆಯ ಕಿಚ್ವು ಕೊತ್ತಿ ಉರಿಯುತ್ತಿತ್ತು. ಕಾಲ್ನಡಿಗೆ ಮೂಲಕ ಪ್ರತಿಭಟನಾಕಾರರು ಹತ್ಯೆಯಾದ ಹರ್ಷನ ಭಾವಚಿತ್ರ ಹಿಡಿದು ಅತನ ಪರ ಘೋಷಣೆ ಕೂಗಿ,ಆಕ್ರೋಶ ವ್ಯಕ್ತಪಡಿಸಿದ್ರು. ಮಹಿಳಾ ಹಿಂದೂ ಕಾರ್ಯಕರ್ತರು (Female Hindu activists), ಹತ್ಯೆಯಾದ ಹರ್ಷನನ್ನು ನೆನೆದು ಭಾವುಕರಾದ್ರು. ಜುಹಾದಿಗಳು ಬೆನ್ನ ಹಿಂದೆ ಬಂದು ಹೊಡೆದಿದ್ದಾರೆ. ದೈರ್ಯವಿದ್ದರೇ ಎದುರಿಗೆ ಬಂದು ಹೋರಾಡಬೇಕಿತ್ತು. ಜೀಹಾದಿಗಳು ಬೇಕಂತಲೇ ಹಿಂದೂ ಮಕ್ಕಳನ್ನು ಟಾರ್ಗೆಟ್ ಮಾಡ್ತಿದ್ದಾರೆ. ಮಗ ಹತ್ಯೆಯಾದ್ರೂ ಆತನ ತಾಯಿ,ಸಹೋದರಿಯ ದೇಶಭಕ್ತಿ ಮೆಚ್ಚುವಂಥದ್ದು. ಹರ್ಷ ಕೊಲೆ ಹಂತಕನ್ನು ಗಲ್ಲಿಗೇರಿಸಬೇಕು ಅಂತ ಮಹಿಳಾ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ. ಹೀಗೆ ಹಿಂದು ಪರ ಸಂಘಟನೆಗಳು, ಭಜರಂಗದಳ ಕಾರ್ಯಕರ್ತ ಹರ್ಷ ಅವರ ಕೊಲೆ ಪ್ರಕರಣದ ವಿರುದ್ಧ ಅಕ್ಷರಶಃ ಕೆಂಡಮಂಡಲಾಗಿದ್ದಾರೆ. ಹಂತಕರನ್ನು ಗಲ್ಲಿಗೇರಿಸಲೇಬೇಕು ಪಟ್ಟುಹಿಡಿದ್ದಾರೆ. ಅದೇನೇ ಇರ್ಲಿ, ಆರೋಪಿಗಳು ಈಗಾಗಲೇ ಜೈಲು ಸೇರಿದ್ದು,ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದರು .