Sunday, September 8, 2024

Latest Posts

Raichur : ಅಕ್ರಮ ಸಿ ಎಚ್ ಪೌಡರ್ ದಂಧೆ..!

- Advertisement -

ರಾಯಚೂರು : (Raichur) ಬಿಸಿಲು ನಾಡು ರಾಯಚೂರಿನಲ್ಲಿ  ಅಕ್ರಮ ದಂಧೆ ಹೆಚ್ಚಾಗಿದೆ . ಎಳನೀರಿ ಗಿಂತ  ಹೆಂಡ ಕ್ಕೆ ಹೆಚ್ಚು ಬೇಡಿಕೆ ಇದೆ. ಮೂಲೆ ಮೂಲೆಗಳಲ್ಲಿ ಸಿಗುತ್ತೆ ಸಿ ಎಚ್ ಪೌಡರ್ (CS Powder Packet) ಹಾವಳಿ. ಏನಪ್ಪ ಎಂದೆಲ್ಲ ಅಂತೀರ ಈ ಸ್ಟೋರಿ ನೋಡಿ .  ಎಲ್ಲಿ ನೋಡಿದರೂ ಸಿ ಎಸ್ ಪೌಡರ್ ಪ್ಯಾಕೆಟ್ ಗಳು. ಬಾಟಲ್ ತುಂಬಿರುವ ಸೇಂದಿ  ಎಲ್ಲಾ ದೃಶ್ಯ ಕಂಡು ಬಂದಿದ್ದು ರಾಯಚೂರು ಜಿಲ್ಲೆಯಲ್ಲಿ. ಹಿಂದುಳಿದ ಜಿಲ್ಲೆ ಎಂದೇ ಹೆಸರಾಗಿರುವ ರಾಯಚೂರು ಜಿಲ್ಲೆ ಮಾತ್ರ ಅಬಕಾರಿ ಇಲಾಖೆ ಗೆ ಸವಾಲು ಆಗಿದೆ ಎಂದು ಹೇಳಬಹುದು . ರಾಯಚೂರು ಜಿಲ್ಲೆ ಆಂಧ್ರ ಮತ್ತು ತೆಲಂಗಾಣ ಗಡಿ ಭಾಗ (Part of the Andhra and Telangana border)ಹೊಂದಿಕೊಂಡಿರುವ ಜಿಲ್ಲೆಯಾಗಿದ್ದು , ಕಳ್ಳ ಬಟ್ಟಿ ಸೇಂದಿ ಮಾತ್ರ ಅಬಕಾರಿ ಇಲಾಖೆ ಹಾಗೂ ಪೋಲಿಸರ ಕಣ್ಣು ತಪ್ಪಿಸಿ ಅಕ್ರಮವಾಗಿ  ಮಾರಾಟ ಮಾಡಲು ಮುಂದಾಗಿದ್ದಾರೆ . ಒಂದು ಲೀಟರ್ ಸೇಂದಿ ಗೆ  ಹಾಗೂ ಒಂದು ಪಾಕೇಟ್ ಸೇಂದಿ ಗೆ ಕೇವಲ 20 ರೂಪಾಯಿ ಆಗಿದ್ದು  ಕಡಿಮೆ ದರದಲ್ಲಿ ಸಿಗುತ್ತೆ ಎಂದು ಸೇಂದಿ ಗೆ ರಾಯಚೂರು ಜನ ದಾಸ ರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಯಚೂರು ಅಬಕಾರಿ ಇಲಾಖೆ ನಿರಂತರ ದಾಳಿ ನಡೆಸಿ  ಅಕ್ರಮ ಸೇಂದಿ ಬುಡ ಕಿತ್ತಲು ಮುಂದಾಗಿದೆ. ಆದರೆ ಎಷ್ಟು ಬಾರಿ ದಾಳಿ ನಡೆಸಿ ದಂಧೆ ಕೋರರು   ಎಡೆಮೂರಿ ಕಟ್ಟಿದ್ದರು. ಹೊಸ ಹೊಸ ಮಾರಾಟಗಾರರು ಪತ್ತೆ ಆಗುತ್ತಿದ್ದಾರೆ. ಆಂಧ್ರ ತೆಲಂಗಾಣ ಗಡಿಭಾಗದ ಬಡ ಜನರೇ ಈ ದಂಧೆ ಕೋರರಿಗೆ ಟಾರ್ಗೆಟ್ ಆಗಿದ್ದಾರೆ. ಕಳೆದ ತಿಂಗಳಿನಿಂದ  ಅಬಕಾರಿ ಇಲಾಖೆ ಹಾಗೂ ಪೊಲೀಸರು (Excise Department and Police) ಸತತವಾಗಿ ದಾಳಿ ನಡೆಸಿ ಲಕ್ಷ್ಯಾಂತರ ಮೌಲ್ಯದ ಸಿ ಎಚ್ ಪೌಡರ್ ವಶ ಪಡಿಸಿ ಕೊಂಡಿದ್ದಾರೆ . ರಾಯಚೂರು ನಗರದ ಮ್ಯದರವಾಡಿ ಯ ಕಿಶೋರ್ ಲಾಲ್ (Kishore Lal) ಅವರನ್ನು ಹಿಡಿದು ಆತನಿಂದ 32 ಕೆಜಿ ಸಿ ಎಚ್ ಪೌಡರ್ 4 ಕೆಜಿ ವೈಟ್ ಪೇಸ್ಟ್ ವಶಪಡಿಸಿಕೊಂಡಿದ್ದಾರೆ.  ಇನ್ನೂ ಸೇಂದಿ ಕುಡಿದು ಕೆಲವು ಕುಟುಂಬಗಳು ಸಾವಿನ ಬಾಗಿಲು ತಟ್ಟಿದ್ದಾರೆ. ಕೆಲವು ಬೀದಿ ಪಾಲಾಗಿವೆ. ಒಟ್ಟಾರೆ ನೋಡುವುದಾದರೆ ,ಅಕ್ರಮ ಸೇಂದಿ ಮಾರಾಟಕ್ಕೆ ಕಡಿವಾಣ ಆಗುತ್ತೆ ಅಂತ ಕಾದುನೋಡಬೇಕಿದೆ.

                                                                                           ಅನಿಲ್ ಕುಮಾರ್, ಕರ್ನಾಟಕ ಟಿವಿ, ರಾಯಚೂರು.

- Advertisement -

Latest Posts

Don't Miss