Sunday, December 22, 2024

Latest Posts

Raichur : ಬಡಮಕ್ಕಳ ಹಾಲಿನ ಪೌಡರ್ ಅಕ್ರಮ ಸಾಗಾಟ..!

- Advertisement -

ರಾಯಚೂರು : ಇಡೀ ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಿಗೆ ಅಪೌಷ್ಟಿಕತೆ ಅನ್ನುವುದು ಹುಟ್ಟುತ್ತಲೇ ಇರುವ ದೊಡ್ಡ ಪಿಡುಗು. ಆದರೆ ಇಂಥ ದುರಂತದ ಮತ್ತೆ ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಿಗೆ ಸೇರಬೇಕಿದ್ದ ಹಾಲಿನಪುಡಿ ಅಕ್ರಮ ಸಾಗಾಟವಾಗುತ್ತಿದೆ ಎನ್ನುವ  ಆರೋಪ ಕೇಳಿಬಂದಿದೆ. ಈ ಬಗ್ಗೆ  ಒಂದು ಕೇಸ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ.                            

ಹೌದು ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿ ಹುಟ್ಟುತ್ತಲೆ ಬರುವ ಅವಶ್ಯಕತೆ ಹೋಗಲಾಡಿಸಲು ಸರ್ಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದೇ ರೀತಿ ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳಿಗೆ ಅಕ್ಷರ ದಾಸೋಹ ಗಾಡಿ  ಹಾಲು ಕೊಡೋ ಯೋಜನೆಯನ್ನು ಸಹ ಸರ್ಕಾರ ಮಾಡುತ್ತಿದೆ, ಆದ್ರೆ ಇದೇ ಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿ ಮಕ್ಕಳಿಗೆ ಸೇರಬೇಕಿದ್ದ ಹಾಲಿನಪುಡಿ ಅಕ್ರಮ ಸಾಗಾಟ ಆಗ್ತಿರೋ ಆರೋಪ ಕೇಳಿಬಂದಿದೆ. ರಾಯಚೂರು ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಸಪ್ಲೈ ಮಾಡುವ ಟ್ರಕ್  ಅನುಮಾನಸ್ಪದವಾಗಿ ಓಡಾಡುತ್ತಿತ್ತು, ಮೂಟೆಗಟ್ಟಲೆ ಹಾಲಿನ ಪೌಡರ್ಗಳ ಲೋಡ್ ಹೊಂದಿದ್ದ  ಆ ಟ್ರಕ್ ಶಾಲೆಗಳಿಗೆ ಹಾಲಿನ ಪೌಡರ್ ಸಪ್ಲೇ ಮಾಡಿರಲಿಲ್ಲ, ಲೋಡ್ ಹಾಗೆ ಇತ್ತು. ರಾಯಚೂರು ಪೊಲೀಸ್ ಕಂಟ್ರೋಲ್ ರೂಂಗೆ 112 ನಂಬರ್ ನಿಂದ ಕರೆ ಬಂದಿತ್ತು. ಹಾಗೂ ಪಶ್ಚಿಮ ಟಾಣ ಪೊಲೀಸರು ಒಟ್ಟು 253 ಹಾಲಿನ ಪುಡಿ  ಮೂಟೆಗಳು ಹಾಗೂ ತೃಪ್ತಿ ಮಾಡಿ, ಜೊತೆಗೆ ಗುತ್ತಿಗೆದಾರ ಹಾಗೂ ಚಾಲಕನಾಗಿದ್ದ ಹನುಮೇಶ್ ನನ್ನು ವಶಕ್ಕೆ ಪಡೆದಿದ್ದಾರೆ. ಇತ್ತ ಪಚ್ಚಿಮ ಠಾಣಾ ಪೊಲೀಸರು ಹಾಲಿನ ಪೌಡರ್ ಗಳನ್ನು ಪರಿಶೀಲಿಸಿದಾಗ ಅದು ಸರ್ಕಾರದ  ಫಂಡಿನಿಂದ  ಕೊಡು ಮಾಲು ಅನ್ನೋದು ಕೂಡ ದೃಢಪಟ್ಟಿತ್ತು. ಒಟ್ಟು 5060 ಕೆಜಿ ಹಾಲಿನ ಪೌಡರ್ ಇರೋ ಒಟ್ಟು 253 ಮೂಟೆಗಳನ್ನು ರಾಯಚೂರಿನ ಕೆಎಂಎಫ್ ಘಟಕದಿಂದ ತರಲಾಗಿತ್ತು. ನಿನ್ನೆ ಸಂಜೆ ಒಳಗಡೆ ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಶಾಲೆಗಳಿಗೂ ಇದು ತಲುಪಬೇಕಾಗಿತ್ತು. ಆದರೆ ಗುತ್ತಿಗೆದಾರ ಹನುಮೇಶ್ ತಡರಾತ್ರಿಯಾದರೂ ಸಪ್ಲೈ ಮಾಡಿರಲಿಲ್ಲ. ವಿಚಾರಣೆ ವೇಳೆ ಪೊಲೀಸರಿಗೆ ತನ್ನದೇ ಆದ ಕಥೆಯನ್ನು ಕಟ್ಟಿದ್ದ ಜೊತೆಗೆ ಆತನ ಬಳಿ ಹಾಲಿನ ಪೌಡರ್ ಸಾಗಾಟ ಮಾಡುತ್ತಿದ್ದದಕ್ಕೆ ಯಾವುದೇ ದಾಖಲೆಗಳು ಇರಲಿಲ್ಲ. ಇತ್ತ ವಿಷಯ ತಿಳಿಯುತ್ತಿದ್ದಂತೆಯೇ ಶಿಕ್ಷಣ ಇಲಾಖೆ ಅಧಿಕಾರಿಗಳು ಕೆಎಂಎಫ್ ಹಾಗೂ ಗುತ್ತಿಗೆದಾರ ಹನುಮೇಶ್ ಬಗ್ಗೆ ಮಾಹಿತಿ ಪಡೆದರು. ನಂತರ ಸರಕಾರದ ಅಧಿಕೃತ ಟೆಂಡರ್ ಅಥವಾ ಎಂದಿದ್ದನ್ನು ದಾಖಲೆಗಳು ಹಾಗೂ ಬಿಲ್ ಸಂಗ್ರಹಿಸಿ ಪಶ್ಚಿಮ ಠಾಣೆ ಪೊಲೀಸರಿಗೆ ನೀಡಿದ್ದಾರೆ. ಆದರೆ ಪಶ್ಚಿಮ ಠಾಣಾ ಪೊಲೀಸರು ಮಾತ್ರ ಸುಮ್ಮನಾಗಿಲ್ಲ ಘಟನೆ ಬಗ್ಗೆ ಶಿಕ್ಷಣ ಇಲಾಖೆಯಿಂದ ಮುಚ್ಚಳಿಕೆ ಬರೆಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.                 

                                                                            ಅನಿಲ್ ಕುಮಾರ್ ,ಕರ್ನಾಟಕ ಟಿವಿ ,ರಾಯಚೂರು.

- Advertisement -

Latest Posts

Don't Miss