Raichur : ಕರ್ನಾಟಕ ಟಿವಿ ಇಂಪ್ಯಾಕ್ಟ್..!

ರಾಯಚೂರು :  ಹತ್ತಾರು ವರ್ಷಗಳ ಈ ಗ್ರಾಮದ ಸಮಸ್ಯೆ ಕೇಳುವವರೇ ಇರಲ್ಲ .ಎದ್ನೋ ಬಿದ್ನೋ ಅನೋ ಹಾಗೆ ಈ ಹಳ್ಳದಲ್ಲಿ ಜೀವನ ಸಾಗಿಸುತ್ತಿದ್ದರು . ಆದರೆ ಕರ್ನಾಟಕ ಟಿವಿ(Karnataka TV) ಯ ವರದಿ ಬಳಿಕ ಎಚ್ಚೆತ್ತು ಕೊಂಡ  ಅಧಿಕಾರಿಗಳು ಆ ಹಳ್ಳದ ಮೇಲೆ ತಾತ್ಕಾಲಿಕ ವಾಗಿ ರಸ್ತೆ ಮಾಡಿದ್ದಾರೆ .

ಹೌದು ರಾಯಚೂರು(Raichur) ಜಿಲ್ಲೆಯ ಮಾನ್ವಿ(Manvi) ತಾಲೂಕಿನ ಮುಸ್ಟೂರು(Musturu) ಗ್ರಾಮದಲ್ಲಿ ಕಳೆದ ೨ ದಶಕ ದಿಂದ ರಸ್ತೆ ಕಾಣದ ಅಂಗೈಯಲ್ಲಿ ಜೀವ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿತ್ತು.  2008 -09 ರ ಸಾಲಿನಲ್ಲಿ 63 ಲಕ್ಷದ ಅನುದಾನ ದಲ್ಲಿ  ಅರ್ಧಂಬರ್ಧ ಕಾಮಗಾರಿ  ಮಾಡಲಾಗಿದೆ . ಆದ್ರೆ ಅನುದಾನ ಕೊರತೆ ಎಂದು ಅರೆ ಬರೆ ಕಾಮಗಾರಿ ಮಾಡಿ ಗುತ್ತಿಗೆದಾರರು ಕೈ ತೊಳೆದುಕೊಂಡಿದ್ದಾರೆ..

ಹಾಗೇ ಆ ಗುತ್ತಿಗೆದಾರರು ಮಾಡಿದ ಆ ಸೇತುವೆಯೂ 2009 ರಲ್ಲಿ ಬಂದ ಪ್ರವಾಹಕ್ಕೆ ನಾಶವಾಗಿದೆ.. ಅಂದಿನಿಂದ ಇಂದಿನವರೆಗೂ ಸೇತುವೆ ಕಾಣದೇ ಗ್ರಾಮಸ್ಥರು ಶಾಲಾ ಕಾಲೇಜು ವಿದ್ಯಾರ್ಥಿಗಳು (School college students) ಕಂಗಾಲಾಗಿದ್ದಾರೆ.  ವರದಿ ಬಳಿಕ ರಸ್ತೆ ಸಮಸ್ಯೆಗೆ ಕೊನೆಗೂ ಸಿಕ್ಕ ತಾತ್ಕಾಲಿಕ ಪರಿಹಾರ .  ಇನ್ನೂ  ಈ ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೂ ಜನರು  ಇದೆ  ಸೇತುವೆ ಇಲ್ಲದೆ ಹಳ್ಳದಲ್ಲಿ ನಡೆಯುತ್ತಿದ್ದರೂ.    ನಡುಮಟ್ಟದ ನೀರಿನಲ್ಲೇ ಅಂತ್ಯ  ಸಂಸ್ಕಾರ(The funeral) ಸೇರಿದಂತೆ ಶಾಲಾ ಕಾಲೇಜಿಗೆ ತೆರಳ್ತಿದ್ದ ಮಕ್ಕಳು. ಕೃಷಿಗೆ ತೆರಳ್ತಿದ್ದ ಜನ. ಆದರೆ

ರಸ್ತೆ ಇಲ್ಲದೇ ಇದ್ದಿದ್ರಿಂದ ಕಿಲೋ ಮೀಟರ್ ದೂರದಲ್ಲೇ ವಾಹನಗಳನ್ನ ನಿಲ್ಲಿಸಿ ಹೋಗ್ತಿದ್ದ ಜನರು ಹಾಗೂ  ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಜನ ನಡುಮಟ್ಟದ ನೀರಿನಲ್ಲೇ ಹೋಗಿ, ಬರೋದು ಅನಿವಾರ್ಯ ಎದುರಾಗಿತ್ತು . ಆದರೆ ರಾಜಕೀಯ ಆಶ್ವಾಸನೆಗೆ ಊರಿನ ಗ್ರಾಮಸ್ಥರು ಬೇಸರ ಗೊಂಡಿದರು . ಇನ್ನೂ ಈ ಎಲ್ಲಾ ಸಮಸ್ಯೆಗಳ ಬಗ್ಗೆ ವಿಸ್ತೃತ ವರದಿ ಬಿತ್ತರಿಸಿ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕಣ್ತೆರೆಸಿದ್ದ  ಕರ್ನಾಟಕ ಟಿವಿ  ವರದಿ .

ಸದ್ಯ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಕ್ಕೆ ಕರ್ನಾಟಕ ಟಿವಿ ಗೆ  ಅಭಿನಂದನೆ ತಿಳಿಸಿದ ಮುಸ್ಟೂರು ಜನ ಆದೇನೆ ಆಗಲ್ಲಿ ಆದಷ್ಟು ಬೇಗ ಸೇತುವೆ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಕಲ್ಪಿಸಿಕೊಡುವಂತೆ ಒತ್ತಾಯ ಮಾಡಿದರು.

                                                                                ಅನಿಲ್ ಕುಮಾರ್, ಕರ್ನಾಟಕ ಟಿವಿ,ರಾಯಚೂರು.

About The Author