Thursday, July 31, 2025

Latest Posts

Raichur : ಗುರು ರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿಯ ಗುರು ಭಕ್ತಿ ಉತ್ಸವ ಇಂದು ಸಂಪನ್ನ..!

- Advertisement -

ರಾಯಚೂರು  : ನಾದ ಪ್ರಿಯ ರಾಘವೇಂದ್ರ ಸ್ವಾಮಿಗಳ (Raghavendra Swamy) 427 ನೇ ವರ್ಧಂತಿ ( ಹುಟ್ಟುಹಬ್ಬ) ಉತ್ಸವ  ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವೈಣಿಕರಾಗಿ, ಸಂಗೀತ ಪ್ರೇಮಿಯಾಗಿದ್ದ ಗುರು ರಾಯರಿಗೆ ತಮಿಳುನಾಡಿನ ನಾದಾಹಾರ ಟ್ರಸ್ಟ್ (Nadadahara Trust of Tamil Nadu) ನ 150 ವಿದ್ವಾಂಸರಿಂದ ಏಕ ಕಾಲಕ್ಕೆ ಗಾಯನ ಮಾಡಿ ಸಂಗೀತ ಸೇವೆ ಸಮರ್ಪಿಸಿದರು. ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠವು ರಾಯರ 427 ನೇ ವರ್ಧಂತಿ ಮಹೋತ್ಸವಕ್ಕೆ ಸಾಕ್ಷಿಯಾಯಿತು. ರಾಘವೇಂದ್ರ ಸ್ವಾಮಿಗಳ ಮೂಲ ಬೃದಾಂವನಕ್ಕೆ ವಿಶೇಷ ಪೂಜೆ, ಪಂಚಾಮೃತಾಭಿಷೇಕ ಮಾಡಲಾಯಿತು. ವರ್ಧಂತೋತ್ಸವ ಹಿನ್ನಲೆ ವಿಶೇಷವಾಗಿ ತಿರುಮಲ ತಿರುಪತಿ ದೇವಸ್ಥಾನ ಸಮಿತಿಯಿಂದ (Tirumala Tirupati Temple Committee) ಶೇಷ ವಸ್ತ್ರ ಬರ ಮಾಡಿಕೊಂಡು ಪೂಜೆ ಸಲ್ಲಿಸಿ ರಾಯರಿಗೆ ಸಮರ್ಪಿಸಲಾಯಿತು. ಭಕ್ತರು ನೀಡಿದ ದೇಣಿಗೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಆಭರಣ ಉಡುಗೋರೆಯಾಗಿ ನೀಡಿಲಾಯಿತು. ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ (Police Officer Bhaskar Rao) ಅವರಿಂದ ರಾಯರಿಗೆ ಚಿನ್ನದ ಸರ ಸಮರ್ಪಣೆ  ರಾಘವೇಂದ್ರ ಸ್ವಾಮಿಗಳ ಹುಟ್ಟು ಹಬ್ಬದ ಅಂಗವಾಗಿ ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ಜರುಗಿತು. ಸಂಗೀತ ಪ್ರಿಯರು, ವೈಣಿಕರಾಗಿದ್ದ ರಾಘವೇಂದ್ರ ಸ್ವಾಮಿಗಳಿಗೆ ಚೆನೈನ ನಾದಾಹಾರ ಟ್ರಸ್ಟ್ ನಿಂದ ಕಳೆದ 18 ವರ್ಷಗಳಿಂದ ನಿರಂತರವಾಗಿ ಸಂಗೀತ ಸೇವೆ ಮಾಡುತ್ತಾ ಬರಲಾಗಿದೆ. ಈ ವರ್ಷವೂ ಕೂಡ 150 ಸಂಗೀತಗಾರರಿಂದ ಏಕ ಕಾಲಕ್ಕೆ ಗಾಯನ ಮಾಡುವ ಮೂಲಕ ನಾದಹಾರ ಸಮರ್ಪಿಸಿದರು. ಭಕ್ತರ ಪಾಲಿನ ಕಾಮಧೇನು ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ (Coronation of Raghavendra Swamis) ಹಾಗೂ ವರ್ಧಂತಿಯ ಗುರು ಭಕ್ತಿ ಉತ್ಸವ ಇಂದು ಸಂಪನ್ನಗೊಂಡಿದೆ. ನಾಡಿನ ಮೂಲೆ ಮೂಲೆಗಳಿಂದ ಬಂದ ಭಕ್ತರು ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಧನ್ಯತೆ ಅನುಭವಿಸಿದರು.

                                                                          ಅನಿಲ್ ಕುಮಾರ್ , ಕರ್ನಾಟಕ ಟಿವಿ,ರಾಯಚೂರು.

- Advertisement -

Latest Posts

Don't Miss