Friday, November 28, 2025

Latest Posts

Raichur : ಅಧಿಕಾರಿಗಳಿಗೆ ಉಪ್ಪರಿಗೆ ಮನೆ, ಕಾರ್ಮಿಕರಿಗೆ ತಗಡಿನ ಮನೆ..!

- Advertisement -

ರಾಯಚೂರು : ಚಿನ್ನದಗಣಿ ಕಂಪನಿಯ ಕಾರ್ಮಿಕರದ್ದು ಇದೆಂಥಾ ಗೋಳು ನೋಡಿ . ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್‌ ಅಧಿಕಾರಿಗಳ(British authorities) ಆಳ್ವಿಕೆ ನೆನಪಿಸುತ್ತೆ ಈ ಚಿನ್ನದ ಗಣಿ ಕಾರ್ಮಿಕರ ಬದುಕು. ನಿತ್ಯ ಗಣಿಯ ಆಳಕ್ಕಿಳಿದು ಚಿನ್ನ ತೆಗೆಯೋ ಕಾರ್ಮಿಕರ ಬದುಕು ತುಕ್ಕು ಹಿಡಿದ ಕಬ್ಬಿಣಕ್ಕೂ ಕಡೆ ಯಾಗಿದೆ.

ಅಧಿಕಾರಿಗಳಿಗೆ ಉಪ್ಪರಿಗೆ ಮನೆ. ಕಾರ್ಮಿಕರಿಗೆ ತಗಡಿನ ಮನೆ. 60-70 ವರ್ಷ ದುಡಿದರೂ ಸರಿಯಾದ ಸೂರಿಲ್ಲದೇ ಕಾರ್ಮಿಕರ ಕುಟುಂಬಗಳ ಪರದಾಟ ,ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ರಾಯಚೂರು ಜಿಲ್ಲೆಯ ಹಟ್ಟಿ ಪಟ್ಟಣದಲ್ಲಿ. ಹಟ್ಟಿ ಚಿನ್ನದ ಗಣಿಯಲ್ಲಿ ಒಟ್ಟು 4500 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ . ಆದರೆ ಅಂಗೈಯಲ್ಲಿ ಜೀವ ಹಿಡಿದು 2600 ಕಾರ್ಮಿಕರು(Workers) ಭೂಗರ್ಭದ ಆಳಕ್ಕಿಳಿದು  ಚಿನ್ನ ತೆಗೆಯುತ್ತಾರೆ . ಆದರೆ ಚಿನ್ನ ತೆಗೆಯೋ ಕಾರ್ಮಿಕರ ಸೂರು ಮಾತ್ರ ಹಂದಿಗಳ ಗುಡುಗಳಾಗಿವೆ.

ಇನ್ನೂ ನಮ್ಮ ಕ್ಯಾಮರಾ ಮುಂದೇ ಬಿಚಿಟ್ಟ ಚಿನ್ನದ ಗಣಿ ಕಾರ್ಮಿಕರ ಬವಣೆಯ ಬದುಕು ಕೆಳುವವರು ಇಲ್ಲದಂತಾಗಿದೆ . ಅಧಿಕಾರಿಗಳ ಮನೆ ಐಶಾರಾಮಿ ಹಾಗಿದ್ದು ಕಾರ್ಮಿಕರ ಮನೆಗಳು ಮಾತ್ರ ಹಂದಿಗಳ ಕೊಟ್ಟಡಿ ಗಳಾಗಿವೆ . ಹಟ್ಟಿ ಚಿನ್ನದ ಗಣಿಯಲ್ಲಿ ಒಟ್ಟು 4500 ಕಾರ್ಮಿಕರು ಕೆಲಸ ಮಾಡುತ್ತಿರುವ  ಕಾರ್ಮಿಕರಲ್ಲಿ  ಭೂಗರ್ಭದ ಆಳಕ್ಕಿಳಿದು ಚಿನ್ನ ತೆಗೆಯೋ ಕೆಲಸ ಮಾಡುವವರು 2600  ಕಾರ್ಮಿಕರು. ಭೂಗರ್ಭಕ್ಕಿಳಿದು ಕೆಲಸ ಮಾಡುವ ಕಾರ್ಮಿಕರಿಗೆ ನೀಡಲಾಗಿದೆ ಬ್ರಿಟೀಷ್ ಕಾಲದ‌ ಹಂದಿ ಗೂಡಿನಂತ ಮನೆಗಳು.  ಮಳೆ ಬಂದರೆ ಮನೆ ಸೋರುತ್ತವೆ. ಬಿಸಿಲಲ್ಲಿ ತಗಡಿನ ಹೆಂಚು ಕುದಿಯುತ್ತವೆ. ವಿಧಿಯಿಲ್ಲದೇ ಮನೆಯ ಹೊರಗೆ ಮರದ ನೆರಳಿಗೆ ಮಲಗುತ್ತಿವೆ ಕಾರ್ಮಿಕರ ಕುಟುಂಬಗಳು.

ಅಧಿಕಾರಿಗಳ ಮಕ್ಕಳಿಗೆ ಆಟವಾಡಲು ಸುಂದರ ಉದ್ಯಾನವನ (The park)ಮಾಡಲಾಗಿವೆ . ಇನ್ನೂ ಕಾರ್ಮಿಕರ ಮಕ್ಕಳಿಗೆ ಹಂದಿಗಳ ಗೂಡೇ ವನ ಆಗಿವೆ .  ಇದು ಒಬ್ಬಿಬ್ಬರು ಕಾರ್ಮಿಕರ ಕಥೆಯಲ್ಲ. ಸಾವಿರಾರು ಕಾರ್ಮಿಕರು ಇಂದಿಗೂ ನರಕ ಯಾತನೆಯಲ್ಲಿ ಜೀವನ ಸಾಗಿಸುತ್ತಿದ್ದರು. ಅಧಿಕಾರಿಗಳನ್ನ ಪ್ರಶ್ನೆ ಮಾಡಿದ್ರೆ ಕೆಲಸಕ್ಕೆ ಕುತ್ತು ಬರುತ್ತೆ ಎನ್ನುತ್ತಾರೆ ಇಲ್ಲಿನ ಕಾರ್ಮಿಕರು . ಹೇಳಿಕೊಳ್ಳದ ಸಂಕಟ ಸ್ಥಿತಿಯಲ್ಲಿ‌ ಕಾರ್ಮಿಕರ ಜೀವನ ಬಂಡಿ ಸಾಗುತ್ತಿದೆ.

                                                                                           ಅನಿಲ್ ಕುಮಾರ್, ಕರ್ನಾಟಕ ಟಿವಿ ,ರಾಯಚೂರು.

- Advertisement -

Latest Posts

Don't Miss