ಕೊಡುಗು : ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತೆ ಮಡಿಕೇರಿಯನ್ನನ ಮಹಾ ಆಪಾಯಕ್ಕೆ ತಂದು ನಿಲ್ಲಿಸಿದೆ. ಇದೀಗ ಜುಲೈ 18ರಿಂದ 22ರ ವರೆಗೆ ಭಾರೀ ಕುಂಭದ್ರೋಣ ಮಳೆಯಾಗಗುವ ಮುನ್ಸೂಚನೆ ಜಿಲ್ಲೆಯ ಜನರನ್ನ ಮತ್ತಷ್ಟು ಕಂಗೆಡಿಸಿದೆ.. ಸುಮಾರು 115.6 MM ನಿಂದ 204.4 MM ಮಳೆ ಬೀಳುವ ಸಾಧ್ಯತೆ ದು ಘೋಷಣೆ ಮಾಡಿದ್ದಾರೆ..
ಸಾರ್ವಜನಿಕರಿಗೆ ಎಚ್ಚರದಿಂದ ಇರಿ : ಡಿಸಿ ಸಂದೇಶ
ಇನ್ನು ಸಾರ್ವಜನಿಕರು, ಪ್ರವಾಸಿಗರು ಎಚ್ಚರದಿಂದ ಇರಬೇಕು ಎಂದು ಕೊಡಗು ಡಿಸಿ ಅನೀಸ್ ಕಣ್ಮನಿ ಜಾಯ್ ಮನವಿ ಮಾಡಿದ್ದಾರೆ. ಕೇಂದ್ರ ಹವಮಾನ ಇಲಾಖೆ ವರದಿ ಆಧರಿಸಿ ಪ್ರಕಟಣೆ ಹೊರಡಿಸಿದ್ದು, ತುರ್ತು ಸಂದರ್ಭದಲ್ಲಿ ಸಹಾಯವಾಣಿಗೆ ಕರೆ ಮಾಡುವಂತೆ ಸಲಹೆ ನೀಡಿದ್ದಾರೆ.. ಕಳೆದ ವರ್ಷ ಸುರಿದ ಭಾರೀ ಮಳೆಗೆ ಕೊಡಗು ಜಿಲ್ಲೆಯಾದ್ಯಂತ ಭಾರೀ ಭೂಕುಸಿತ ಉಂಟಾಗಿ ಭಾರೀ ಸಾವುನೋವು ಸಂಭವಿಸಿತ್ತು.. ಈ ಭಾರೀ ಅತಿಯಾಗಿ ಮಳೆಯಾದರೆ ಮತ್ತೆ ಭೂ ಕುಸಿತ ಉಂಟಾಗುವ ಭಯ ಕಾಡ್ತಿದೆ.