Thursday, August 7, 2025

Latest Posts

‘RRR’ಸಿನಿಮಾ ರಿಲೀಸ್ ಗೆ ಹೊಸ ಮುಹೂರ್ತ ಫಿಕ್ಸ್…ಮಾರ್ಚ್ ಅಥವಾ ಎಪ್ರಿಲ್ ನಲ್ಲಿ ತೆರೆಗೆ ಬರಲಿದೆ ರಾಜಮೌಳಿ ಸಿನಿಮಾ!

- Advertisement -

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ RRR ಬಿಡುಗಡೆಗೆ ಹೊಸ ದಿನಾಂಕ‌‌ ನಿಗದಿಯಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ RRR ಸಿನಿಮಾ ಜನವರಿ 7ರಂದು ಅದ್ಧೂರಿಯಾಗಿ ಐದು ಭಾಷೆಯಲ್ಲಿ ತೆರೆಗೆ ಬರಬೇಕಿತ್ತು ರಿಲೀಸ್ ಆಗಬೇಕಿತ್ತು. ರಾಜ್ಯ ರಾಜ್ಯ ಸುದ್ದಿ ಚಿತ್ರತಂಡ  ಭರ್ಜರಿ ಪ್ರಚಾರ ನಡೆಸಿತ್ತು. ಇನ್ನೇನು ಸಿನಿಮಾ ರಿಲೀಸ್ ಮಾಡಬೇಕು ಎನ್ನುವಷ್ಟರಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗಿತ್ತು. ಅಲ್ಲದೆ ರಾಜ್ಯದ ಹಲವೆಡೆಗಳಲ್ಲಿ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದು, ಇನ್ನೂ ಹಲವೆಡೆ ಶೇ 50ರಷ್ಟು ಮಾತ್ರ ಆಸನಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಸಿನಿಮಾ ಬಿಡುಗಡೆ  ಮಾಡೋದನ್ನು ಮುಂದಕ್ಕೆ ಹಾಕಲಾಯ್ತು. ಈಗ ಸಿನಿಮಾ ತಂಡ ಹೊಸ ರಿಲೀಸ್‌ ಡೇಟ್ ನೀಡಿದೆ.

ಯಾವಾಗ ಬರುತ್ತೇ ಆರ್ ಆರ್ ಆರ್?

ಇಡೀ ಚಿತ್ರಪ್ರೇಮಿಗಳು ತ್ರಿಬಲ್ ಸಿನಿಮಾಗಾಗಿ ಕಾದು ಕುಳಿತಿದ್ದಾರೆ. ಅಂತೂ ರಾಜಮೌಳಿ ಹೊಸ ದಿನಾಂಕ ಅನೌನ್ಸ್ ಮಾಡಿದ್ದಾರೆ. ಆದ್ರೆ ಅಲ್ಲೊಂದು ಟ್ವಿಸ್ಟ್ ಇದೆ. ಎರಡು ದಿನಾಂಕಗಳಿಗೆ ಆರ್ ಆರ್ ಅರ್ ಕರ್ಚಿಫ್ ಹಾಕಿದೆ. 18 ಮಾರ್ಚ್ ಅಥವಾ ಏಪ್ರಿಲ್ 28 ರಲ್ಲಿ ಒಂದು ಡೇಟ್‌ನಲ್ಲಿ ಸಿನಿಮಾ ರಿಲೀಸ್ ಮಾಡಲಿದ್ದೇವೆ ಎಂದು ಆರ್ ಆರ್ ಆರ್ ಬಳಗ ತಿಳಿಸಿದೆ. ದೇಶದಲ್ಲಿ ಕೊರೋನಾ ಪ್ರಕರಣ ಕಡಿಮೆಯಾಗಿ, ಎಲ್ಲ ಥಿಯೇಟರ್‌ಗಳಲ್ಲಿ 100% ಆಸನ ವ್ಯವಸ್ಥೆ ಸಿಕ್ಕರೆ ಮಾರ್ಚ್ 18ಕ್ಕೆ ಬರುತ್ತೇವೆ. ಇಲ್ಲ ಏಪ್ರಿಲ್ 28ಕ್ಕೆ ಸಿನಿಮಾ ರಿಲೀಸ್ ಮಾಡಲಿದ್ದೇವೆ  ಎರಡು ರಿಲೀಸ್ ಡೇಟ್‌ನ್ನು RRR ತಂಡ ಬ್ಲ್ಯಾಕ್ ಮಾಡಿಕೊಂಡಿದೆ.

ಈ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿದ್ದು, ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಟಿ ಆಲಿಯಾ ಭಟ್​ ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಅಜಯ್​ ದೇವಗನ್​ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಹಿಂದಿ ಹಾಗೂ ಮಾಲಯಾಳಂ ಭಾಷೆಯಲ್ಲಿ ರಿಲೀಸ್ ಆಗ್ತಿರುವ ತ್ರಿಬಲ್ ಆರ್ ಸಿನಿಮಾವನ್ನು ಕರ್ನಾಟಕದಲ್ಲಿ  ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದೆ.

- Advertisement -

Latest Posts

Don't Miss