Thursday, December 12, 2024

Latest Posts

Rajanna : ಮೂವರು ಡಿಸಿಎಂ ಮಾಡದಿದ್ರೆ ಶೀಘ್ರವೇ ಸರ್ಕಾರ ಪತನ : ರಾಜಣ್ಣ

- Advertisement -

Political News : ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿಯ ಅನಿವಾರ್ಯತೆ ಇದೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕಾದರೆ ಇದರ ಅಗತ್ಯತೆ ಇದೆ. ಒಂದು ವೇಳೆ ಕಡಿಮೆ ಲೋಕಸಭಾ ಸ್ಥಾನವನ್ನು ಗೆದ್ದರೆ ರಾಜ್ಯದಲ್ಲಿ ಅಭದ್ರ ಸರ್ಕಾರ ಉಂಟಾಗುತ್ತದೆ ಎಂದು ಸಚಿವ ಕೆ.ಎನ್.‌ ರಾಜಣ್ಣ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

ಈ ಮೂಲಕ ಈ ಸರ್ಕಾರ ಲೋಕಸಭೆ ಚುನಾವಣೆ ನಂತರ ಪತನವಾಗಲಿದೆ ಎಂಬ ಪರೋಕ್ಷ ಸಂದೇಶವನ್ನು ನೀಡಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಒಳರಾಜಕೀಯದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.

ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ನಾನು ನೀಡಿದ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಯಾಕೆ ನನ್ನ ಕ್ಲಾರಿಫಿಕೇಷನ್ ಪಡೆಯಬೇಕು? ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರು ತಾನೇ? ಅವರೇ ಕರೆದು ಕೇಳಲಿ. ನಾನಂತೂ ಈವರೆಗೆ ಡಿ.ಕೆ. ಶಿವಕುಮಾರ್​ರನ್ನು ನಾನು ಭೇಟಿ ಮಾಡಿಲ್ಲ ಎಂದು ಕೆ.ಎನ್.‌ ರಾಜಣ್ಣ ಹೇಳಿದರು.

ಕೆ.ಎಸ್ ಈಶ್ಬರಪ್ಪ : ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಎಂ ಚೇಲಾಗಳು ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಚೇಲಾಳು ಮಾತನಾಡುತ್ತಿದ್ದಾರೆ. ಅವರಿಗೆಯೇ ಹಲವು ವಿಚಾರಗಳನಲ್ಲಿ ಗೊಂದಲವಿದೆ. ಲೋಕಸಭಾ ಚುನಾವಣೆ ಪೂರ್ವ ಅಥವಾ ನಂತರ ಈ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

Siddaramaiah : ಆಮಿಷವೊಡ್ಡಿ ಗೆದ್ರಂತೆ ಸಿಎಂ ಸಿದ್ದರಾಮಯ್ಯ..!

‘ಅಬ್ಬಕ್ಕ, ಓಬವ್ವ,ರಾಣಿ ಚೆನ್ನಮ್ಮಂಥವರ ರಾಜ್ಯದಿಂದ ನಾನು ಬಂದಿದ್ದೇನೆ’

Cogress: ಗ್ಯಾರಂಟಿ ಕೂಪನ್ ಹಂಚಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ವಜಾ ಮಾಡಲು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

- Advertisement -

Latest Posts

Don't Miss