Thursday, July 10, 2025

Latest Posts

Rajastan News: ಕರ್ನಾಟಕದ ಪ್ರಸಿದ್ಧ ಸಿಹಿ ತಿನಿಸು ಮೈಸೂರು ಪಾಕ್ ಹೆಸರು ಬದಲಾವಣೆ..!

- Advertisement -

Rajastan News: ಪಾಕಿಸ್ತಾನದ ಉಗ್ರರು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ, ಕಾಲು ಕೆದರಿ ಜಗಳಕ್ಕೆ ಬಂದಿದ್ದರು. ಇದೇ ಕಾರಣಕ್ಕೆ, ಭಾರತವೂ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ದಾಳಿ ಮಾಡಿ, ಬುದ್ಧಿ ಕಲಿಸಿತ್ತು.

ಇಂಥ ವಿರೋಧಿ ದೇಶದ ಹೆಸರು ನಮ್ಮ ಭಾರತದಲ್ಲಿ ಯಾವುದೇ ಕಾರಣಕ್ಕೂ ಬಳಕೆಯಾಗಬಾರದು ಎಂದು, ಸಿಹಿ ತಿನಿಸುಗಳ ಅಂಗಡಿಯ ಮಾಲೀಕರೋಬ್ಬರು, ಮೈಸೂರು ಪಾಕ್ ಹೆಸರನ್ನು ಮೈಸೂರು ಶ್ರೀ ಎಂದು ನಾಮಕರಣ ಮಾಡಿದ್ದಾರೆ.

ರಾಜಸ್ಥಾನದ ಜೈಪುರದಲ್ಲಿರುವ ಸಿಹಿ ಅಂಗಡಿಯಲ್ಲಿ ಈ ಕ್ರಮ ಕೈಗ“ಳ್ಳಲಾಗಿದೆ. ಪಾಕ ಬರಿಸಿ ಮಾಡುವ ಸಿಹಿ ತಿಂಡಿಯಲ್ಲಿ ಪಾಕ್ ಎನ್ನುವ ಪದವಿರುತ್ತದೆ. ಮೋತಿ ಪಾಕ್, ಗೋಂದ್ ಪಾಕ್ ಹೀಗೆ. ಈ ಅಂಗಡಿಯವರು ಮೋತಿ ಪಾಕ್‌ ಹೆಸರನ್ನು ಮೋತಿ ಶ್ರೀ, ಗೋಂದ್ ಪಾಕ್ ಹೆಸರನ್ನು ಗೋಂದ್ ಶ್ರೀ ಮಾಡಿದ್ದಾರೆ. ಈ ಮೂಲಕ ಪಾಕ್ ಎನ್ನುವ ಎಲ್ಲ ಹೆಸರಿನ ತಿಂಡಿಗೂ ಶ್ರೀ ಎಂದು ಮರುನಾಮಕರಣ ಮಾಡಿದ್ದಾರೆ.

- Advertisement -

Latest Posts

Don't Miss