Friday, November 22, 2024

Latest Posts

ವೋಟರ್ ಐಡಿಗೆ ಆಧಾರ್‌ಲಿಂಕ್ ಸಂಯೋಜನೆಗೆ ರಾಜ್ಯಸಭೆ ಅನುಮೋದನೆ

- Advertisement -

ನಾವು ಬ್ಯಾಂಕ್ ಅಕೌಂಟ್, ಪ್ಯಾನ್‌ಕಾರ್ಡ್ಗೆ ಆಧಾರ್ ಸಂಯೋಜನೆಯನ್ನು ಕೇಳಿದ್ದೇವೆ, ಆದರೆ ಇದೀಗ ವೋಟರ್ ಐಡಿಗೆ ಆಧಾರ್ ಸಂಯೋಜನೆ ಮಾಡುವ ಚುನಾವಣಾ ಸುಧಾರಣಾ ಮಸೂದೆಗೆ ರಾಜ್ಯಸಭೆ ಅನುಮೋದಿಸಿದೆ. ಈ ಮೊದಲು ಲೋಕಸಭೆಯಲ್ಲಿ ಪರ ವಿರೋಧಗಳ ಮಸೂದೆಯನ್ನು ಮಂಡನೆ ಮಾಡಲಾಗಿತ್ತು . ಒಂದು ದಿನದ ನಂತರ ಅಂದರೆ ಮಂಗಳವಾರ ಪ್ರತಿಪಕ್ಷಗಳ ವಾಕ್‌ಔಟ್ ನಡುವೆ ಧ್ವನಿ ಮತದ ಮೂಲಕ ರಾಜ್ಯಸಭೆ ಅಂಗೀಕರಿಸಿದೆ .
ಬಿಜೆಪಿ, ಜೆಡಿಯು, ವೈಎಸ್ ಆರ್ ಪಿ , ಎಐಡಿಎಂಕೆ, ಬಿಜೆಡಿ ಮತ್ತು ಟಿ ಎಂಸಿ-ಎA ಸದಸ್ಯರು ಮಸೂದೆ ಬೆಂಬಲಿಸಿದ ನಂತರ ಚುನಾವಣಾ ಕಾನೂನುಗಳ ತಿದ್ದುಪಡಿ ಮಸೂದೆ, 2021 ಯನ್ನು ರಾಜ್ಯಸಭೆ ಅನುಮೋದಿಸಿದೆ. ಇದು ಮತದಾರರ ಪಟ್ಟಿಯಿಂದ ನಕಲಿ ಮತದಾರರ ನಿರ್ಮೂಲನೆಗೆ ಸಹಾಯ ಮಾಡುತ್ತದೆ . ಎಂದು ಕೇಂದ್ರಸರ್ಕಾರ ಹೇಳಿದೆ . ಆದರೆ ವಿಪಕ್ಷ ಕಾಂಗ್ರೆಸ್ ,ತೃಣಮೂಲ ಕಾಂಗ್ರೆಸ್ , ಎಡಪಕ್ಷಗಳು ,ಡಿ ಎಂಕೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ವಾಕ್ ಔಟ್ ಮಾಡಿದರು. ಸಂಕ್ಷಿಪ್ತ ಚರ್ಚೆಯ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು .

- Advertisement -

Latest Posts

Don't Miss