Saturday, November 15, 2025

Latest Posts

‘ರಾಮ ಕನಸಲ್ಲಿ ಬಂದು ಎಲ್ಲರೂ ಖುಷಿಯಿಂದ ಇದ್ದಾರೆ, ನೀವು ಯಾಕೆ ಹುಚ್ಚರಂತೆ ಮಾಡುತ್ತಿದ್ದೀರಿ ಎಂದು ಕೇಳಿರಬೇಕು’

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ರಾಮನ ಪ್ರತಿಷ್ಟಾನದ ದಿನ ರಜೆ ಕೊಡಬೇಕು. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಯಾವತ್ತೂ ದ್ವಂದ್ವದಲ್ಲ ಇದೆ. ರಾಮ ಮಂದಿರ ಹೋರಾಟ ಆರಂಭವಾಗಿದೆ. ಅವತ್ತಿಂದ ಕಾಂಗ್ರೆಸ್ ಈ ವಿಷಯದಲ್ಲಿ ದ್ವಂದ್ವ ಮತ್ತು ಗೊಂದಲದಲ್ಲಿ‌ ಇದೆ. ಅವರ ಸ್ಥಿತಿ ಯಾಕೆ ಹೀಗೆ ಅಂದರೆ ಅವರಿಗೆ ಸ್ಪಷ್ಟತೆ ಇಲ್ಲಾ ಎಂದು ಜೋಶಿ ಹೇಳಿದ್ದಾರೆ.

ದೇಶದ ಸಮಾಜಕ್ಕಿಂತ ಹೆಚ್ಚು ಒಟ್ ಬ್ಯಾಂಕ್ ಬಗ್ಗೆ ಅವರು ವಿಚಾರ ಮಾಡ್ತಾರೆ. ಅದರ ಪರಿಣಾಮವಾಗಿ ಅಲ್ಲಿ ಹೋದರೆ ಹಂಗೆ, ಇಲ್ಲಿ ಹೋದರೆ ಹಂಗೆ ಎಂಬಾಗಿದೆ. ಅವರು ಪಕ್ಷದ ಲಿಡರ್ ಹಾಗೂ ಗೊಂದಲ ಪಕ್ಷ. ಕನಫ್ಯೂಸ್ ಪಾರ್ಟಿ ಜೊತೆ ಕನಫ್ಯೂಸ್ ಪಾರ್ಟಿ. ಸಿದ್ದರಾಮಯ್ಯ ನವರು ನಾಳೆ ರಾಹುಲ್ ಗಾಂಧಿ ಅವರನ್ನ ಕೇಳಿ ರಾಮನ ಪ್ರತಿಷ್ಟಾಪನೆ ನಂತರ ನಾಳೆ ನಿರ್ಣಯ ಕೊಡಬಹುದು. ಆಗ ಸಿದ್ದರಾಮಯ್ಯ ತಿರ್ಮಾನ ತಗೊತಾರೆ. ಈ ಸ್ಥಿತಿಗೆ ಅವರು ಬಂದಿದ್ದಾರೆ. ದೇಶದಲ್ಲಿ ಅವರ ಮೂರು ಸರ್ಕಾರ ಇವೆ, ಅವು ಕೂಡಾ ಬರುವ‌ ದಿನದಲ್ಲಿ ಇರಲ್ಲ, ರಾಮನ ಶಾಪ ಅವರಿಗೆ ತಟ್ಟಲಿದೆ ಎಂದು ಜೋಶಿ ಹೇಳಿದ್ದಾರೆ.

ಕಾಂಗ್ರಸ್ ಗೆ ರಾಮ ಕನಸಲ್ಲಿ ಬಂದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಈಗ ಅವರಿಗೆ ರಾಮ ಕನಸಲ್ಲಿ ಬಂದಿದ್ದ ಎನ್ನುವುದೇ ಅದ್ಭುತ ಸಂಗತಿ. ರಾಮ ಬಂದು ಸದ್ಬುದ್ಧಿ ಬರಲಿ ಎಂದು ಹೇಳಿರಬೇಕು. ಇಡಿ‌ ಜಗತ್ತಿನಲ್ಲಿ ಎಲ್ಲರೂ ಸಂತೋಷ ಪಡುತಿದ್ದಾರೆ, ಯಾಕೆ ಹುಚ್ಚರಂತೆ ಮಾಡುತಿರಿ‌ ಎಂದು ಕೇಳಿರಬೇಕು. ಅದನ್ನ ಅವರು ಹೇಗೆ ಹೇಳ್ತಾರೆ ರಾಮಗೂ ಮೋಸ ಮಾಡಿದವರು ಇವರು. ಅವರಿಗೆ ರಾಮನೇ ಸದ್ಬುದ್ದಿ ಕೊಡಲಿ ಎಂದು ಹಾರೈಸ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಕುಮಾರಸ್ವಾಮಿ ಜೊತೆ ಯಡಿಯೂರಪ್ಪ ವಿಚಾರದ ಬಗ್ಗೆ ಮಾತನಾಡಿದ ಜೋಶಿ, ನನಗೆ ಯಡಿಯೂರಪ್ಪ ನವರು ಕರೆ ಮಾಡಿದ್ದರು, ನಮ್ಮ ರಾಜ್ಯ ಅದ್ಯಕ್ಷರು ಇದ್ದಾರೆ. ವಿಧಾನ ಪರಿಷತ್ ಸದಸ್ಯರ ಚುನಾವಣೆ ಕುರಿತು ಚರ್ಚೆ ಆಗುತ್ತಿದೆ, ೬ ಎಂಎಲ್ಸಿ ಸಿಟ್ ಇವೆ, ಇದೆ ಅದಕ್ಕೆ ಸಭೆ ಇದೆ ಎಂದು ಜೋಶಿ ಹೇಳಿದ್ದಾರೆ.

ಮಂಡ್ಯ ಟಿಕೆಟ್ ವಿಚಾರವಾಗಿ ಮಾತನಾಡಿದ ಜೋಶಿ,  ಆ ಬಗ್ಗೆ ಅಲ್ಲಿ ಕೂಡಾ ಚರ್ಚೆ ಇಲ್ಲಾ ನಾನು ಇಲ್ಲಿ ಹೇಗೆ ಹೇಳಲಿ. ಸೂಕ್ತ ಚರ್ಚೆ ಮಾಡಿ ನಮ್ಮ ರಾಷ್ಟ್ರೀಯ ನಾಯಕರು ಜೊತೆ ಕೂಡಾ ಸಭೆ ಮಾಡಿ ನಿರ್ಣಯ ಕೈಗೊಳ್ತೇವೆ ಎಂದು ಜೋಶಿ ಹೇಳಿದ್ದಾರೆ.

ಮುನೇನಕೊಪ್ಪ ಕಾಂಗ್ರೆಸ್ ಗೆ ಹೋಗುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಜನವರಿ 31 ರ ವರೆಗೆ ಎಲ್ಲೂ ಗುರುತಿಸಿಕೊಳ್ಳಲ್ಲ ಎಂದಿದ್ದಾರೆ. 31 ಜನವರಿ ಆಗಲಿ ನೋಡೊಣ. 31 ರ ನಂತರ ನನಗೆ ಭೇಟಿ ಮಾಡ್ತಾರೆ ಎಂದು ಹೇಳಿದ್ದಾರೆ, ನಾನು ಬಿಜೆಪಿಯಲ್ಲಿ ಉಳಿಯುವ ಮಾತನ್ನ ಅವರು ಹೇಳಿದ್ದಾರೆ. ಈ ರೀತಿ ಮಾಡಲು ಏನು ಕಾರಣ ಅನ್ನೊದು ಮುನೇನಕೊಪ್ಪ ಗೆ ಕೇಳಬೇಕು. ನನಗೆ ಪಕ್ಷದಿಂದ ಎಲ್ಲ ಕಡೆ ಕರೆಯುತಿದ್ದಾರೆ ಎಂದು ಅವರೇ ಹೇಳಿದ್ದಾರೆ. ಅದಕ್ಕೆ ಧನ್ಯವಾದ ಹೇಳಿದ್ದಾರೆ ಎಂದು ಜೋಶಿ ಹೇಳಿದರು.

ಸಂಸದೆ ಸುಮಲತಾ ಅಂಬರೀಶ್ ಗೆ ಗೌರವ ಡಾಕ್ಟರೇಟ್

ಅಯೋಧ್ಯಾ ಕಾರ್ಯಕ್ರಮದ ಹಿನ್ನೆಲೆ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ: ಸಿಎಂ ಸಿದ್ದರಾಮಯ್ಯ

ಅನ್ನಪೂರ್ಣಿ ಸಿನಿಮಾದಲ್ಲಿ ರಾಮನ ಡೈಲಾಗ್ ಬಗ್ಗೆ ಹೇಳಿಕೆ ನೀಡಿದ ನಟಿ ನಯನತಾರಾ

- Advertisement -

Latest Posts

Don't Miss