Tuesday, April 30, 2024

Latest Posts

ರಂಜಾನ್ ಚಂದ್ರ ದರ್ಶನ: ಕರಾವಳಿಯಲ್ಲಿ ನಾಳೆಯೇ ಈದ್ ಉಲ್ ಫಿತರ್ ಆಚರಣೆ

- Advertisement -

News: ಪವಿತ್ರ ರಂಜಾನ್ ಉಪವಾಸ ಇಂದಿಗೆ ಅಂತ್ಯವಾಗಿದ್ದು, ಕರಾವಳಿಯಲ್ಲಿ ಚಂದ್ರ ದರ್ಶನವಾಗಿದೆ. ಹಾಗಾಗಿ ಕರಾವಳಿಯಲ್ಲಿ ನಾಳೆಯೇ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತಿದೆ.

ರಂಜಾನ್ ರೋಜಾ ಶುರುವಾದಾಗ ಚಂದ್ರ ದರ್ಶನ ಮಾಡಿ, ಬಳಿಕ ಒಂದು ತಿಂಗಳು ಉಪವಾಸ ಆಚರಿಸುವ ಮುಸ್ಲಿಂ ಬಾಂಧವರು, ಮತ್ತೆ ಚಂದ್ರ ದರ್ಶನ ಮಾಡಿ, ಹಬ್ಬ ಆಚರಿಸುತ್ತಾರೆ. ಹೊರದೇಶದಲ್ಲಿ ಮತ್ತು ಕರಾವಳಿಯಲ್ಲಿ ಒಂದು ದಿನ ಮೊದಲೇ ಚಂದ್ರ ದರ್ಶನವಾಗಿದ್ದು, ಹಬ್ಬದ ಆಚರಣೆ ಮಾಡಲಾಗುತ್ತದೆ.

ರಂಜಾನ್ ಮಾಸ ಶುರುವಾದಾಗ, ಬೆಳಿಗ್ಗೆ 5 ಗಂಟೆಗೆ ಎದ್ದು ನಮಾಜ್ ಮಾಡಿ, ಕೊಂಚ ಆಹಾರ ಸೇವಿಸಿ, ಸಂಜೆ 5 ಗಂಟೆಯವರೆಗೂ ಉಗುಳು ಸಹ ನುಂಗದೇ, ರೋಜಾ ಮಾಡಲಾಗುತ್ತದೆ. ಬಳಿಕ ಶುದ್ಧವಾಗಿ, ನಮಾಜ್ ಮಾಡಿ, ಇಫ್ತಾರ್‌ ಕೂಟದಲ್ಲಿ ಭಾಗಿಯಾಗಿ, ಉಪವಾಸವನ್ನು ಮುರಿಯಲಾಗುತ್ತದೆ. ಅರ್ಧ ದಿನದ ಉಪವಾಸವಿರುವ ಕಾರಣಕ್ಕೆ, ಆರೋಗ್ಯದಲ್ಲಿ ಏನೂ ಏರುಪೇರಾಗಬಾರದು ಎಂಬ ಕಾರಣಕ್ಕೆ ಮೊದಲು ಖರ್ಜೂರ ಸೇವನೆ ಮಾಡುತ್ತಾರೆ. ಬಳಿಕ ಬೇರೆ ಬೇರೆ ಆಹಾರಗಳನ್ನು ತಿನ್ನಲಾಗುತ್ತದೆ.

ಇನ್ನು ರಂಜಾನ್ ಮಾಸವನ್ನು ಪವಿತ್ರ ಮಾಸವೆಂದು ಪರಿಗಣಿಸುವ ಮುಸ್ಲಿಂ ಬಾಂಧವರು, ಆ ಸಮಯದಲ್ಲಿ ಕೆಟ್ಟ ಪದಗಳನ್ನು ಬಳಸುವುದಿಲ್ಲ, ಮಾಡರ್ನ್ ಲೈಫ್ ಅನುಸರಿಸುವುದಿಲ್ಲ. ದಾನ ಮಾಡಲಾಗುತ್ತದೆ. ಹೀಗೆ ಈ ಮಾಸದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಾರೆ. ಇದಾದ ಬಳಿಕ ಚಂದ್ರ ದರ್ಶನ ಮಾಡಿ, ಮರುದಿನ ನಮಾಜ್ ಮಾಡಿ, ಹೊಸ ಬಟ್ಟೆ ಧರಿಸಿ, ಶ್ಯಾವಿಗೆ ಪಾಯಸ ಮತ್ತು ತರಹೇವಾರಿ ಭೋಜನವನ್ನು ಸವಿದು ಹಬ್ಬವನ್ನು ಸಂಭ್ರಮಿಸಲಾಗುತ್ತದೆ.

ತೋಟದಲ್ಲಿ ವ್ಯಕ್ತಿ ಶ*ವಪತ್ತೆ ಪ್ರಕರಣ: ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಸಕ್ಸಸ್

ಕಂಪನಿಯೊಂದಕ್ಕೆ ನೀಡಿದ್ದ ಸಮೋಸಾದಲ್ಲಿ ಕಂಡುಬಂದಿದ್ದು ಕಾಂಡೋಮ್, ಗುಟ್ಕಾ..

ಚಪ್ಪಲಿ ಹಾರ ಹಾಕಿಕೊಂಡು ಮತ ಕೇಳಲು ಬಂದ ಪಕ್ಷೇತರ ಅಭ್ಯರ್ಥಿ..

- Advertisement -

Latest Posts

Don't Miss