Friday, May 17, 2024

Latest Posts

ಕಂಪನಿಯೊಂದಕ್ಕೆ ನೀಡಿದ್ದ ಸಮೋಸಾದಲ್ಲಿ ಕಂಡುಬಂದಿದ್ದು ಕಾಂಡೋಮ್, ಗುಟ್ಕಾ..

- Advertisement -

News: ಪುಣೆಯ ಕಂಪನಿಯೊಂದಕ್ಕೆ ನೀಡಲಾಗಿದ್ದ ಸಮೋಸಾ ಒಂದರಲ್ಲಿ ಕಾಂಡೋಮ್, ಗುಟ್ಕಾ, ಕಲ್ಲು ಪತ್ತೆಯಾಗಿದೆ. ಇಲ್ಲಿನ ಪಿಂಪ್ರಿ ಚಿಂಚವಾಡದಲ್ಲಿ ಇದ್ದ ಕಂಪನಿಯೊಂದಕ್ಕೆ, ಮನೋಹರ್ ಎಂಟರ್‌ಪ್ರೈಸಸ್ ಎಂಬುವ ಕಂಪನಿ ಸಮೋಸಾ ಸರಬರಾಜು ಮಾಡುತ್ತಿತ್ತು.

ಆದರೆ ಈ ಕಂಪನಿ ನೀಡಿದ್ದ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ, ಕಲ್ಲು ಸೇರಿ ಹಲವು ವಸ್ತುಗಳು ಕಂಡುಬಂದಿದೆ. ಹಾಗಾಗಿ ಪುಣೆಯ ಕಂಪನಿ, ಸಮೋಸಾ ನೀಡಿದವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಪೊಲೀಸರು ಯಾರ ಮೇಲೆ ಪ್ರಕರಣ ದಾಖಲಾಗಿತ್ತೋ, ಆ ಆರೋಪಿಗಳನ್ನು ಒದ್ದು ವಿಚಾರಣೆ ನಡೆಸಿದಾಗ, ಫಿರೋಜ್ ಶೇಖ್ ಮತ್ತು ವಿಕಿ ಶೇಖ್ ಎಂಬುವವರು ಸಮೋಸಾದಲ್ಲಿ ಈ ವಸ್ತುಗಳನ್ನು ತುಂಬಿದ್ದರು ಎಂಬ ಸತ್ಯ ಹೊರಬಿದ್ದಿದೆ.

ಇನ್ನು ಇವರೊಂದಿಗೆ ರಹೀಮ್ ಶೇಖ್ ಮತ್ತು ಅಜರ್ ಶೇಖ್ ಎಂಬುವವರು ಸೇರಿ ಇನ್ನು ಕೆಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲ ಮನೋಹರ್ ಎಂಟರ್‌ಪ್ರೈಸಸ್ ಕಂಪನಿ ಹೆಸರಿಗೆ ಮಸಿ ಬಳಿಯಲು ಈ ಕೆಲಸ ಮಾಡಿದ್ದಾರೆಂದು ಒಪ್ಪಿಕೊಂಡಿದ್ದಾರೆ.

ಚಪ್ಪಲಿ ಹಾರ ಹಾಕಿಕೊಂಡು ಮತ ಕೇಳಲು ಬಂದ ಪಕ್ಷೇತರ ಅಭ್ಯರ್ಥಿ..

ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಅಮೆರಿಕದಲ್ಲಿ ಶ*ವವಾಗಿ ಪತ್ತೆ..

- Advertisement -

Latest Posts

Don't Miss