Friday, July 11, 2025

Latest Posts

Ramanagara Case: ಬಾಲಕಿ ಮೇಲೆ ಅತ್ಯಾ*ಚಾರ ನಡೆದಿಲ್ಲ, ಹ*ತ್ಯೆ ಮಾಡಿಲ್ಲ: ಎಸ್ಪಿ ಶ್ರೀನಿವಾಸ್ ಸ್ಪಷ್ಟನೆ

- Advertisement -

Ramanagara Case: ರಾಮನಗರ ತಾಲೂಕಿನ ಬಿಡದಿ ಸಮೀಪದ ಭದ್ರಾಪುರ ಗ್ರಾಮದಲ್ಲಿ ಹಕ್ಕಿಪಿಕ್ಕಿ ಜನಾಂಗದ 15 ವರ್ಷದ ಬಾಲಕಿ ಖುಷಿ ಸಾವನ್ನಪ್ಪಿದ್ದಳು. ಈ ಸುದ್ದಿ ರಾಜ್ಯಾದ್ಯಂತ ಹಬ್ಬಿದ್ದು, ಈಕೆಯ ಮೇಲೆ ಅತ್ಯಾಚಾರವಾಗಿದ್ದು, ದುರುಳರು ಹಿಂಸಿಸಿ ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಅಲ್ಲದೇ, ಈಕೆಯ ಸಾವಿಗೆ ನ್ಯಾಯ ಸಿಗಲೇಬೇಕೆಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದರು. ಅಭಿಯಾನ ಮಾಡಿದ್ದರು. ಆದರೆ ಇದೀಗ ಎಸ್ಪಿ ಶ್ರೀನಿವಾಸ್ ಗೌಡ ಅವರು ಈ ಬಗ್ಗೆ ಸ್ಪಷ್’’ನೆ ನೀಡಿದ್ದು, ಅದು ಹತ್ಯೆಯಲ್ಲ, ಆಕೆ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾಳೆಂದು ಹೇಳಿದ್ದಾರೆ.

ಈ ಘಟನೆ ಬಗ್ಗೆ ಪೋಲೀಸರು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದರು. ಆಗ ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ, ಮತ್ತು ಆಕೆಯನ್ನು ಯಾರೂ ಹತ್ಯೆ ಮಾಡಿಲ್ಲವೆಂದು ಮೇಲ್ನೋಟಕ್ಕೆ ಗೋತ್ತಗಿತ್ತು. ಇದೀಗ ಆಕೆಯ ದೇಹದ ಮರಣೋತ್ತರ ಪರೀಕ್ಷೆಯ ವರದಿ ಸಿಕ್ಕಿದ್ದು, ಆಕೆಯ ಮೇಲೆ ಯಾವುದೇ ಅತ್ಯಾಚಾರವಾಗಿಲ್ಲ, ಆಕೆಯನ್ನು ಯಾಾರೂ ಹತ್ಯೆ ಮಾಡಿಲ್ಲ. ಬದಲಾಗಿ, ಆಕೆಗೆ ರೈಲು ತಾಗಿ, ಆಕೆ ಸಾವನ್ನಪ್ಪಿದ್ದಾಳೆಂದು ಎಸ್ಪಿ ಶ್ರೀನಿವಾಸ್ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದ ಬಳಿ ಮಾತನಾಡಿರುವ ಎಸ್ಪಿ ಶ್ರೀನಿವಾಸ್, ಎಫ್‌ಎಸ್‌ಎಲ್ ವರದಿ ಮತ್ತು ಮರಣೋತ್ತರ ಪರೀಕ್ಷೆಯ ಪರದಿ ಬಂದಿದ್ದು, ಇದರಲ್ಲಿ ಬಾಲಕಿಯ ಮೇಲೆ ಅತ್ಯಾಚಾರವಾಗಿಲ್ಲವೆಂದು ಸ್ಪಷ್’’ವಾಗಿದೆ. ಎಲ್ಲಾ ಆಯಾಮದಲ್ಲೂ ತನಿಖೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬಂದಿರುವ ಸುದ್ದಿ ಎಲ್ಲ ಸುಳ್ಳು ಎಂದು ಹೇಳಿದ್ದಾರೆ.

ತಲೆಗೆ ಪೆಟ್ಟು ಬಿದ್ದು ಸಾವು ಸಂಭವಿಸಿದೆ..

ಈ ಬಗ್ಗೆ ಮಾತನಾಡಿರುವ ಎಸ್ಪಿ, ಖುಷಿಯ ತಲೆಗೆ ಏಟು ಬಿದ್ದಿದೆ. ಈ ಕಾರಣಕ್ಕೆ ಆಕೆಯ ಕುತ್ತಿಗೆಗೂ ಪೆಟ್ಟು ಬಿದ್ದಿದ್ದು, ಖುಷಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮೇ 11ರ ಸಂಜೆ 6.07ರಿಂದ 6.08 ಹೀಗೆ ಈ ಸಮಯದಲ್ಲಿ ಈ ಸಾವು ಸಂಭವಿಸಿದೆ. ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದು, ಅದರಲ್ಲಿ ಬಾಲಕಿಯ ಚಲನವಲನ ಕಂಡು ಬಂದಿದೆ ಎಂದು ಪ್ರೆಸ್‌ಮೀಟ್ ನಲ್ಲಿ ಎಸ್ಪಿ ಶ್ರೀನಿವಾಸ್ ಹೇಳಿದ್ದಾರೆ.

ಆದರೆ ಹಕ್ಕಿ ಪಿಕ್ಕಿ ಜನಾಂಗದ ಅಧ್ಯಕ್ಷರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ ಕೇಸನ್ನು ಸಿಬಿಐಗೆ ನೀಡಬೇಕು. ಅಪಘಾತವೆಂದು ಕೇಸನ್ನು ಮೂಲೆಗೆ ತಳ್ಳಬೇಡಿ. ಬಾಲಕಿಯ ಸಾವಿಗೆ ಅನ್ಯಾಯ ಮಾಡಬೇಡಿ ಎಂದು ವಿನಂತಿಸಿದ್ದಾರೆ. ಅಲ್ಲದೇ ಕೆಲ ವರದಿಗಳ ಮೇಲೆ ನಮಗೆ ನಂಂಬಿಕೆ ಬರುತ್ತಿಲ್ಲ. ಸಿಬಿಐ ವರದಿ ಮೇಲೆ ಮಾತ್ರ ನಮಗೆ ನಂಬಿಕೆ ಬರುತ್ತದೆ ಎಂದು ಹೇಳಿದ್ದಾರೆ.

- Advertisement -

Latest Posts

Don't Miss