ನವದೆಹಲಿ : ಭಾರತ ಪಾಕಿಸ್ತಾನದ ಮೇಲೆ ನಡೆಸಿದ ಆಪರೇಷನ್ ಸಿಂಧೂರ್ ಜಾಗತಿಕವಾಗಿ ಅಧಿಕ ಮನ್ನಣೆ ಪಡೆದಿರುವ ಕಾರ್ಯಾಚರಣೆಯಾಗಿದ್ದು, ಭಯೋತ್ಪಾದನೆಯ ವಿರುದ್ಧ ಭಾರತದ ಗಟ್ಟಿ ಸಂಕಲ್ಪವನ್ನು ಎತ್ತಿ ಹಿಡಿದಿದೆ. ಭಾರತದ ದಾಳಿಗೆ ಅಕ್ಷರಶಃ ಪಾಕಿಸ್ತಾನ ಸುಧಾರಿಸಿಕೊಳ್ಳಲು ಸಾಕಷ್ಟು ದಿನಗಳು ಬೇಕೇನೋ.. ಅಷ್ಟೊಂದು ಬಲವಾಗಿರುವ ಏಟನ್ನು ನಮ್ಮ ಹೆಮ್ಮೆಯ ಸೇನೆ ರಣಹೇಡಿ ಪಾಕ್‌ಗೆ ನೀಡಿದ್ದು ಗುಟ್ಟಾಗಿ ಉಳಿದಿಲ್ಲ. ಆದರೆ ಇದೇ ವಿಚಾರವಾಗಿ ಇದೀಗ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ.
ಪಾಕಿಸ್ತಾನ ಸೈನಿಕರು ಭೂಗರ್ಭದ ಆಳದಲ್ಲಿ ಅಡಗಿ ಕುಳಿತರೂ ಬಿಡುವುದಿಲ್ಲ..
ಇನ್ನೂ ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ವಾಯು ರಕ್ಷಣಾ ವ್ಯವಸ್ಥೆಯ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸುಮರ್ ಇವಾನ್ ಕುನ್ಹಾ ಭಾರತದ ಪರಾಕ್ರಮವನ್ನು ಬಿಚ್ಚಿಟ್ಟಿದ್ದಾರೆ. ಭಾರತವನ್ನು ಕೆಣಕಿ ಸರಿಯಾಗಿಯೇ ಗುಮ್ಮಿಸಿಕೊಂಡು ಬಿಲ ಸೇರಿರುವ ಪಾಕಿಗಳಿಗೆ ಸೇನೆ ನೀಡಿರುವುದು ಸಾಮಾನ್ಯವಾದ ಶಿಕ್ಷೆಯಲ್ಲ ಎನ್ನುವುದನ್ನು ಅವರು ಬಯಲಿಗೆಳೆದಿದ್ದಾರೆ.
ಇನ್ನೂ ಪಾಕಿಸ್ತಾನವು ತನ್ನ ಸೇನಾ ಕಚೇರಿಯನ್ನು ಎಲ್ಲೇ ಸ್ಥಳಾಂತರ ಮಾಡಿದರೂ ಸಹ ಭಾರತದ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮ ಬಾರತವು ಈಗ ಪಾಕ್‌ನ ಯಾವುದೇ ಪ್ರದೇಶದ ಮೇಲೆ ನಿಖರವಾಗಿ ದಾಳಿ ಮಾಡುವ ಶಕ್ತಿ ಹಾಗೂ ಸಾಮರ್ಥ್ಯವನ್ನು ಹೊಂದಿದೆ. ಈ ಭಯೋತ್ಪಾದಕರನ್ನು ಮಣ್ಣು ಮುಕ್ಕಿಸಲು ನಮ್ಮ ಬಳಿ ಅಗತ್ಯ ಶಸ್ತ್ರಾಸ್ತ್ರಗಳಿವೆ. ಅಲ್ಲದೆ ನಮ್ಮ ಸೈನಿಕರು ಅಖಾಡಕ್ಕಿಳಿದರೆ ಪಾಕಿಸ್ತಾನ ಸೈನಿಕರು ಭೂಗರ್ಭದ ಆಳದಲ್ಲಿ ಅಡಗಿ ಕುಳಿತರೂ ಬಿಡುವುದಿಲ್ಲ. ಯಾಕೆಂದರೆ ಇಡೀ ಪಾಕ್ ನಮ್ಮ ಗುರಿಯ ವ್ಯಾಪ್ರಿಯೊಳಗೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ಪಾಕಿಸ್ತಾನದವರು ರಕ್ಷಣೆಗಾಗಿ ಆಳವಾದ ಗುಂಡಿ ಹುಡುಕಬೇಕು..
ಪಾಕಿಸ್ತಾನದ ಸೇನೆಯ ಪ್ರಧಾನ ಕಚೇರಿಯನ್ನು ರಾವಲ್ಪಿಂಡಿಯಿಂದ ಖೈಬರ್ ಪಂಖ್ತುಖ್ವಾ ಇಂತಹ ಸ್ಥಳಗಳಿಗೂ ಶಿಫ್ಟ್ ಮಾಡಿದರೂ ಕೂಡ ರಕ್ಷಣೆಗಾಗಿ ಆಳವಾದ ಗುಂಡಿಯನ್ನೇ ಹುಡುಕಬೇಕಾಗುತ್ತದೆ. ಪಾಕಿಸ್ತಾನದ ಆಳವನ್ನು ಹೊಕ್ಕುವ ಭಾರತವು ಸಾಕಷ್ಟು ಶಸ್ತ್ರಾಸ್ತ್ರಗಳ ಸಂಗ್ರಹ ಹೊಂದಿದೆ. ಆದ್ದರಿಂದ, ಉದ್ದ ಆಳ ಹಾಗೂ ಅಗಲ ಪಾಕ್ ಎಲ್ಲಿದ್ದರೂ ನಮ್ಮ ವ್ಯಾಪ್ತಿಯಲ್ಲಿದೆ. ನಮ್ಮ ಗಡಿಗಳಿಂದ ಅಥವಾ ಆಳದಿಂದ, ನಾವು ಇಡೀ ಪಾಕಿಸ್ತಾನವನ್ನು ಎದುರಿಸಲು ಸಂಪೂರ್ಣವಾಗಿ ಸಮರ್ಥರಾಗಿದ್ದೇವೆ . ಅಲ್ಲದೆ ರಾವಲ್ಪಿಂಡಿಯಿಂದ ಖೈಬರ್ ಪಂಖ್ತುಖ್ವಾಗೆ ಅಥವಾ ಅವರು ಎಲ್ಲಿಗೆ ಹೋಗಲು ಬಯಸುತ್ತಾರೋ ಅಲ್ಲಿಯವರೆಗೂ ನಮ್ಮ ವ್ಯಾಪ್ತಿಯೊಳಗೆ ಇದ್ದಾರೆ, ಆದ್ದರಿಂದ ಪಾಕಿಸ್ತಾನಿಯರು ನಿಜವಾಗಿಯೂ ಆಳವಾದ ಗುಂಡಿಯನ್ನೇ ಹುಡುಕ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಯಾವುದೇ ಸಾವುಗಳಾಗದಂತೆ ತಡೆದಿರುವುದು ಸೈನಿಕರಿಗೆ ಹೆಮ್ಮೆ..
ನಮ್ಮ ಕೆಲಸ ನಮ್ಮ ಸಾರ್ವಭೌಮತ್ವವನ್ನು, ನಮ್ಮ ಜನರನ್ನು ರಕ್ಷಿಸುವುದಾಗಿದೆ. ನಮ್ಮದೇ ಆದ ಅನೇಕ ಜವಾನರು, ಅಧಿಕಾರಿಗಳು, ಪತ್ನಿಯರು ಕಂಟೋನ್ಮೆಂಟ್‌ಗಳಲ್ಲಿ ವಾಸಿಸುತ್ತಿದ್ದರು. ಅಲ್ಲದೆ ಅವರು ಈ ಡ್ರೋನ್ ದಾಳಿಯ ಬಗ್ಗೆಯೂ ಅಷ್ಟೇ ಕಾಳಜಿ ವಹಿಸಿದ್ದರು. ಇದರಿಂದ ಯಾವುದೇ ಸಾವುನೋವುಗಳಾಗದಂತೆ ತಡೆದಿರುವುದು ಸೈನಿಕರಿಗೆ ಹೆಮ್ಮೆಯನ್ನುಂಟುಮಾಡಿದೆ. ಇಷ್ಟೇ ಅಲ್ಲದೆ, ನಮ್ಮ ಯೋಧರ ಕುಟುಂಬಗಳಿಗೂ ಹೆಮ್ಮೆಯನ್ನುಂಟುಮಾಡಿದೆ. ಅಲ್ಲದೆ ನಮ್ಮ ಸೇನೆಯ ಕಾರ್ಯಕ್ಕೆ ಅಂತಿಮವಾಗಿ ಭಾರತದ ಜನರು ಹೆಮ್ಮೆಪಡುತ್ತಿದ್ದಾರೆ ಎಂದು ಕುನ್ಹಾ ಸಂತಸ ವ್ಯಕ್ತಪಡಿಸಿದ್ದಾರೆ.
ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಭಾರತದ ಬತ್ತಳಿಕೆಯಲ್ಲಿವೆ..
ಇನ್ನೂ ಪಹಲ್ಗಾಮ್ ದಾಳಿಯ ಬಳಿಕ ಭಾರತೀಯ ಸೇನೆ ನೆರೆಯ ದೇಶಕ್ಕೆ ಸೂಕ್ತ ಪ್ರತ್ತ್ಯುತ್ತರ ನೀಡಿದೆ. ಉಗ್ರರ ಒಂಭತ್ತು ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ಭಾರತದ ಮೇಲೆ ದಾಳಿಗೆ ಯತ್ನ ಮಾಡಿರುವ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಲಾಗಿದೆ. ಅಲ್ಲದೆ ಇನ್ನು ಮುಂದೆ ಉಗ್ರರು ಅಡಗಿರುವ ತಾಣಗಳನ್ನು ಪತ್ತೆಹಚ್ಚಿ ನಿಖರವಾಗಿ ದಾಳಿ ಮಾಡುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಭಾರತದ ಬತ್ತಳಿಕೆಯಲ್ಲಿವೆ. ಗಡಿ ಸೇರಿದಂತೆ ಇನ್ಯಾವುದೇ ಕಡೆಗಳಿಂದಲೂ ಪಾಕಿಸ್ತಾನದ ಪ್ರದೇಶಗಳನ್ನು ಟಾರ್ಗೆಟ್ ಮಾಡುವ ಸಾಮರ್ಥ್ಯವನ್ನು ಸೇನೆಯು ಹೊಂದಿದೆ ಎಂದು ಜನರಲ್ ಸುಮರ್ ಇವಾನ್ ಕುನ್ಹಾ ತಿಳಿಸಿದ್ದಾರೆ.