Ramanagara News: ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಮಾತು ಬಾರದ ಯುವತಿಯ ಮೇಲೆ ದುರುಳರು ಅತ್ಯಾಚಾರವೆಸಗಿ, ಹತ್ಯೆ ಮಾಡಿದ್ದಾರೆ. ಖುಷಿ ಎಂಬ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅವಳ ಕತ್ತು ತಿರುಗಿಸಿ, ಬೆನ್ನು ಮೂಳೆ ಮುರಿದು ಹಿಂಸಿಸಿ ಆಕೆಯನ್ನು ಹತ್ಯೆ ಮಾಡಲಾಗಿದೆ.
ದುಷ್ಕರ್ಮಿಗಳು ಅತ್ಯಾಚಾರದ ಬಳಿಕ ಆಕೆಯ ಶವವನ್ನು ರೈಲ್ವೆ ಹಳಿಯ ಬಳಿ ಬಿಸಾಕಿ ಹೋಗಿದ್ದಾರೆ. ಹಕ್ಕಿ ಪಿಕ್ಕಿ ಜನಾಂಗದ ಹುಡುಗಿಯಾಗಿರುವ ಖುಷಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ಕಿವಿಯೂ ಕೇಳಿಸುವುದಿಲ್ಲ. ಈಕೆ ಅಂಗಡಿಗೆ ಹೋಗಿ ಬರುವ ಸಮಯದಲ್ಲಿ ಈ ವಿಷಯನ್ನು ಕನ್ಫರ್ಮ್ ಮಾಡಿಕ“ಂಡಿರುವ ದುರುಳರು, ಆಕೆಯನ್ನು ಹಿಂಬಾಲಿಸಿ, ಈ ರೀತಿ ದುಷ್ಕೃತ್ಯ ಎಸಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈಕೆಯ ಸಾವಿಗೆ ಸಾವಿಗೆ ನ್ಯಾಯ ಸಿಗಬೇಕೆಂಬ ಕೂಗು ಕೇಳಿ ಬರುತ್ತಿದೆ. ಇಂಥ ನೀಚ ಕೃತ್‌ಯ ನಡೆದರೂ ಹಲವರು ಈ ಕೇಸ್‌ನ್ನು ನಿರ್ಲಕ್ಷಿಸುತ್ತಿದ್ದಾರೆ. ಬಡವರಿಗೆ ಈ ದೇಶದಲ್ಲಿ ನ್ಯಾಯ ಸಿಗುವುದು ಎಷ್ಟು ಕಷ್ಟ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.