ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳ ಮೇಲೆ ಏರ್‌ಸ್ಟ್ರೈಕ್ ನಡೆಸಿ ಭಾರತೀಯ ಸೇನೆಯು ನೂರಾರು ಉಗ್ರರನ್ನು ಹೊಡೆದುರುಳಿಸಿತ್ತು. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ನಡೆದ ಈ ಕಾರ್ಯಾಚರಣೆಯು ಜಾಗತಿಕ ಮಟ್ಟದಲ್ಲಿ ಭಾರತದ ಶಕ್ತಿಯನ್ನು ತೋರಿಸಲು ಕಾರಣವಾಗಿತ್ತು. ಅಲ್ಲದೆ ಭಯೋತ್ಪಾದನೆಯ ಭಾರತ ಹೊಂದಿರುವ ಸ್ಪಷ್ಟ ನಿಲುವಿನ ಪ್ರತಿರೂಪವಾಗಿ ಹೊರಹೊಮಿತ್ತು. ಇನ್ನೂ ತನ್ನಲ್ಲಿರುವ ಉಗ್ರರನ್ನು ನಿಗ್ರಹ ಮಾಡುವ ಬದಲು ಪಾಕಿಸ್ತಾನ ಭಾರತದ ವಿರುದ್ಧವೇ ಕಾಲು ಕೆದರಿ ಜಗಳಕ್ಕಿಳಿದು ಸರಿಯಾಗಿಯೇ ಹೊಡೆತ ತಿಂದಿದೆ.
ಅಲ್ಲದೆ ಪಾಕಿಸ್ತಾನ ಭಾರತದ ಮೇಲೆ ದಾಳಿಯ ದುಸ್ಸಾಹಸ ಮಾಡಲು ಎರಡೂ ನೀತಿಗೆಟ್ಟ ರಾಷ್ಟ್ರಗಳ ಕುಮ್ಮಕ್ಕು ಹಾಗೂ ಬೆಂಬಲವೇ ಕಾರಣವಾಗಿತ್ತು. ಅದರಲ್ಲಿ ಕುತಂತ್ರಿ ಚೀನಾ ಹಾಗೂ ಉಂಡ ಮನೆಗೆ ದ್ರೋಹ ಬಗೆಯುವ ನೀಚ ಟರ್ಕಿ ಈ ಎರಡೂ ದೇಶಗಳು ತಮ್ಮಲ್ಲಿನ ಯುದ್ಧ ಸಾಮಗ್ರಿಗಳು ಹಾಗೂ ಡ್ರೋನ್, ಮಿಸೈಲ್‌ಗಳನ್ನು ರಣಹೇಡಿ ಪಾಕಿಸ್ತಾನಕ್ಕೆ ನೀಡುವ ಮೂಲಕ ಭಾರತದ ಮೇಲೆ ಛೂ ಬಿಡುವ ಕೆಲಸ ಮಾಡಿದ್ದವು. ಈ ಎರಡೂ ದೇಶಗಳು ಮಾಡಿರುವ ಈ ಹೇಸಿಗೆ ತಿನ್ನುವ ಕೆಲಸ ಇಡೀ ಜಗತ್ತಿಗೆ ತಿಳಿದಿದೆ. ಅದರಲ್ಲೂ ಭಾರತಕ್ಕೆ ಈ ದೇಶಗಳ ಕಂತ್ರಿ ಬುದ್ಧಿ ಗೊತ್ತೇ ಇದೆ. ಹೀಗಾಗಿ ಈ ಎರಡೂ ನೀಚ ದೇಶಗಳಿಗೆ ಭಾರತ ಇದೀಗ ಶಾಕ್ ನೀಡಿದೆ.
ಚೀನಾದ ಗ್ಲೋಬಲ್ ಬ್ಯಾನ್..
ಪ್ರಮುಖವಾಗಿ ಭಾರತ ಹಾಗೂ ಪಾಕಿಸ್ತಾನದ ಸಂಘರ್ಷದ ನಡೆಯುತ್ತಿದ್ದ ವೇಳೆ ಚೀನಾದ ಸರ್ಕಾರಿ ಮಾಧ್ಯಮ ಸಂಸ್ಥೆ ಗ್ಲೋಬಲ್ ಟೈಮ್ಸ್ ಭಾರತದ ವಿರುದ್ಧವಾಗಿ ನಕಲಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿತ್ತು.ಭಾರತದ ಬಗ್ಗೆ ಆಕ್ಷೇಪಾರ್ಹ ವಿಚಾರಗಳನ್ನು ಹರಡುವ ಹೇಡಿ ಕೃತ್ಯಕ್ಕೆ ಕೈ ಹಾಕಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಚೀನಾದಲ್ಲಿನ ಭಾರತೀಯ ರಾಯಭಾರಿ ಕಚೇರಿ , ತಪ್ಪು ಮಾಹಿತಿ ಹೊರಹಾಕುವ ಮೊದಲು ನಿಮ್ಮ ಸತ್ಯಗಳನ್ನು ಪರಿಶೀಲಿಸಿ ಮತ್ತು ನಿಮ್ಮ ಮೂಲಗಳನ್ನು ಪರಾಮರ್ಶೆ ಮಾಡಿ ಎಂದು ಎಚ್ಚರಿಸಿತ್ತು.
ಅಲ್ಲದೆ ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಪಾಕಿಸ್ತಾನದ ಪರ ಹಲವಾರು ಹ್ಯಾಂಡಲ್‌ಗಳು ಆಧಾರರಹಿತ ಹೇಳಿಕೆಗಳನ್ನು ಹರಡುತ್ತಿದ್ದು, ಸಾರ್ವಜನಿಕರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿತ್ತು. ಇದಾದ ಬಳಿಕ ಭಾರತದ ವಿರುದ್ಧ ದ್ರೋಹಿ ಚೀನಾ ಮಾಡಿರುವ ಎಲ್ಲ ಮಸಲತ್ತುಗಳು ಹೊರಬಂದ ಬೆನ್ನಲ್ಲೇ ಭಾರತ ಸರ್ಕಾರವು ಬುಧವಾರ ಚೀನಾದ ಟ್ವಿಟ್ಟರ್ ಖಾತೆಯನ್ನು ನಿಷೇಧಿಸುವ ಮೂಲಕ ಕುತಂತ್ರಿ ದೇಶಕ್ಕೆ ಬಿಗ್ ಶಾಕ್ ನೀಡಿದೆ.
ಕಂಗಾಲಾದ ಪಾಕ್ ಪ್ರೇಮಿಗಳು..
ಇನ್ನೂ ಪಾಕಿಸ್ತಾನದ ಭಾರತ ವಿರೋಧಿ ನೀಚ ಕೃತ್ಯಕ್ಕೆ ಕೈಜೋಡಿಸಿದ್ದು ಇನ್ನೊಂದು ದೇಶ ಟರ್ಕಿ, ಈ ಟರ್ಕಿಶ್ ಪ್ರಸಾರಕ ಮಾಧ್ಯಮ ಟಿಆರ್‌ಟಿ ವರ್ಲ್ಡ್‌ನ ಟ್ವಿಟ್ಟರ್ ಖಾತೆಯನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ.
ತಾನು ವಿನಾಶದಂಚಿನಲ್ಲಿದ್ದಾಗ ಭಾರತದಿಂದ ಆಪರೇಷನ್ ದೋಸ್ತ್ ಎಂಬ ಬೃಹತ್ ಕಾರ್ಯಾಚರಣೆಯ ಲಾಭ, ಸಹಾಯ ಪಡೆದ ಮುಸ್ಲಿಂ ರಾಷ್ಟ್ರ ಇದಾಗಿದೆ. ಆದರೆ ಉಪಕಾರಕ್ಕೆ ಅಪಕಾರ ಬಗೆಯುವುದರಲ್ಲಿ ಈ ತುರ್ಕಿ ಎತ್ತಿದೆ ಕೈ ಅಂತ ಸಾಬೀತೂ ಕೂಡ ಮಾಡಿದೆ. ಮುಖ್ಯವಾಗಿ ಭಾರತ ಹಾಗೂ ಪಾಕಿಸ್ತಾನದ ಸಂಘರ್ಷದ ವೇಳೆ ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನಕ್ಕೆ ಯುದ್ಧ ನೌಕೆ, ಶಸ್ತ್ರಾಸ್ತ್ರ ಪೊರೈಕೆ, ಡ್ರೋನ್, ಮಿಸೈಲ್ ರವಾನೆ ಸೇರಿದಂತೆ ಹಲವು ರೀತಿಯಲ್ಲಿ ಚೀನಾ, ಟರ್ಕಿ ಹಾಗೂ ಅಜರ್‌ಬೈಜನ್ ನೆರವು, ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿವೆ. ಆದರೆ ನೆರವು ನೀಡಿದರೂ ಪಾಕಿಸ್ತಾನಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ, ಇನ್ನೊಂದೆಡೆ ಹೇಡಿ ಪಾಕ್‌ಗೆ ನೆರವು ನೀಡಿದ ಕೊಳಕು ರಾಷ್ಟ್ರಗಳು ಇದೀಗ ಕಂಗಾಲಾಗಿವೆ.
ಫ್ಲೈಟ್, ಹೊಟೆಲ್ ಬುಕಿಂಗ್ ರದ್ದು..!
ಅನ್ಯಾಯದ ಮದದಿಂದ ಮೆರೆಯುತ್ತಿರುವ ಪಾಕಿಸ್ತಾನಕ್ಕೆ ನೆರವು ನೀಡಿದ ರಾಷ್ಟ್ರಗಳ ಉತ್ಪನ್ನಗಳನ್ನು ಭಾರತೀಯರು ಬಹಿಷ್ಕರಿಸುತ್ತಿದ್ದಾರೆ. ಟರ್ಕಿಯ ಆ್ಯಪಲ್ ಹಣ್ಣನ್ನು ಪುಣೆ ವರ್ತಕರು ಬ್ಯಾನ್ ಮಾಡಿದ್ದಾರೆ. ಅಲ್ಲದೆ ಇದೇ ಟರ್ಕಿಯ ಮಾರ್ಬಲ್‌ಗೆ ರಾಜಸ್ತಾನದ ವ್ಯಾಪಾರಿಗಳು ಗುಡ್ ಬೈ ಹೇಳುವ ಗಟ್ಟಿ ನಿರ್ಧಾರ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಇಕ್ಸಿಗೋ ಟ್ರಾವೆಲ್ ಕಂಪನಿ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಧಾನಿ ಮೋದಿ ಅದಂಪುರ ವಾಯುನೆಲೆಯಲ್ಲಿ ಆಡಿರುವ ಮಾತುಗಳಿಂದ ಪ್ರೇರಿತರಾಗಿ ಈ ನಿರ್ಧಾರ ಘೋಷಿಸಿದ್ದಾರೆ. ಇಕ್ಸಿಗೋ ಟ್ರಾವೆಲ್ ಕಂಪನಿ ಇದೀಗ ಚೀನಾ, ಟರ್ಕಿ ಹಾಗೂ ಅಜರ್‌ಬೈಜಾನ್ ಫ್ಲೈಟ್, ಹೊಟೆಲ್ ಬುಕಿಂಗ್ ರದ್ದು ಮಾಡಿದೆ.
ಬಾಯ್ಕಾಟ್ ಟರ್ಕಿ, ಚೀನಾ ಅಭಿಯಾನ..
ಇನ್ನೂ ಮುಖ್ಯವಾಗಿ ಭಾರತ ವಿರೋಧಿಯಾಗಿರುವ ಟರ್ಕಿಗೆ ಭಾರತೀಯರು ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಟರ್ಕಿಗೆ ಭಾರತೀಯರು ತಮ್ಮ ಪ್ರವಾಸವನ್ನು ಸಂಪೂರ್ಣ ಬಂದ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ ದೇಶಾದ್ಯಂತ ಬಾಯ್ಕಾಟ್ ಟರ್ಕಿ ಎಂಬ ಬೃಹತ್ ಅಭಿಯಾನ ಶುರುವಾಗಿದೆ. ಇದರಿಂದ ಪಾಕ್ ಪ್ರೇಮಿಗೂ ಈಗ ಪುಕ ಪುಕ ಪ್ರಾರಂಭವಾಗಿದ್ದು, ಪ್ರವಾಸಕ್ಕೆ ಬರುವ ಭಾರತೀಯರಿಗೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡುತ್ತೇವೆ, ಭದ್ರತೆಯನ್ನು ನೀಡುತ್ತೇವೆ. ಅಲ್ಲದೆ ಗ್ರಾಹಕ ಸ್ನೇಹಿಯಾದ ಪ್ರವಾಸೋದ್ಯಮಕ್ಕೆ ಒತ್ತು ನೀಡಿದ್ದೇವೆ. ದಯವಿಟ್ಟು ಭಾರತೀಯರು ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ ಎಂದು ಅಂಗಲಾಚಿಕೊಳ್ಳುತ್ತಿದೆ. ಈ ಕುರಿತು ಅಲ್ಲಿನ ಸರ್ಕಾರ ಪ್ರವಾಸಿಗರಿಗೆ ಪರಿ ಪರಿಯಾಗಿ ಗೋಗರೆಯುತ್ತಿದೆ.
ಭಾರತವನ್ನು ಕೆಣಕಿದವರು ಕೊನೆಯ ದಿನ ಎಣಿಸಿ ಬಂದಿದ್ದಾರೆ..
ಟರ್ಕಿಯ ವಿಚಾರದಲ್ಲಿ ನಾವು ಗಮನಿಸಿದಾಗದ, ಇದೂ ಸಹ ಪ್ರವಾಸೋದ್ಯಮದ ಮೇಲೆ ನಿಂತಿರುವ ದೇಶವಾಗಿದೆ, ಚೀನಿಯರು ಬಿಟ್ಟರೆ ಅತೀ ಹೆಚ್ಚಾಗಿ ಭಾರತೀಯರೇ ಈ ದೇಶಕ್ಕೆ ಪ್ರವಾಸೋದ್ಯಮದ ಮೂಲಕ ಭಿಕ್ಷೆ ನೀಡುತ್ತಿದ್ದೇವೆ. ಹೀಗಿರುವಾಗ ಭಾರತದ ವಿರುದ್ಧವೇ ತಿರುಗಿ ಬೀಳುವ ಭಂಡ ಧೈರ್ಯವನ್ನು ಮಾಡಿರುವ ಟರ್ಕಿಗೆ ಅಪಾರ ಪ್ರಮಾಣದ ಹಾನಿಯ ಮುನ್ಸೂಚನೆ ಬಂದಿದೆ.
ಇನ್ನೂ ಭಾರತದ ವಿರುದ್ಧ ತಿರುಗಿ ಬಿದ್ದ ಬಹುತೇಕ ದೇಶಗಳು ತಮ್ಮ ಕೊನೆಯ ದಿನಗಳನ್ನು ಎಣಿಸಿಯೇ ಬಂದಿವೆ. ಭಾರತವನ್ನು ಕೆಣಕಿದ್ದ ಮಾಲ್ಡೀವ್ಸ್‌ಗೆ ಭಾರತೀಯರು ತಕ್ಕ ಪಾಠ ಕಲಿಸಿದ್ದರು, ಅಲ್ಲಿನ ಆರ್ಥಿಕತೆ ಪಾತಾಳಕ್ಕೆ ಕುಸಿಯುವಂತೆ ಮಾಡಿದ್ದರು. ಈಗ ಈ ಸಾಲಿಗೆ ಟರ್ಕಿಯನ್ನು ಸೇರಿಸಲು ಭಾರತೀಯರು ಸಿದ್ಧವಾಗಿದ್ದಾರೆ. ಪಾಕ್ ಪ್ರೇಮಿ, ಕ್ರಿಮಿಗಳಿಗೆ ಭಾರತದ ಏಟಿನ ಪರಿಚಯ ಮಾಡಲು ಇಡೀ ಭಾರತ ತುದಿಗಾಲಲ್ಲಿ ನಿಂತಿದ್ದು, ಹಂತ ಹಂತವಾಗಿ ನಿಯತ್ತಿನ ಬೆಲೆಯನ್ನು ತೋರಿಸಲು ಮುಂದಾಗಿದ್ದಾರೆ. ಆದರೆ ನೀವೆಷ್ಟೇ ಸಹಾಯ ಸಹಕಾರ ಮಾಡಿದ್ದರೂ ಕೂಡ ನನ್ನ ನಿಯತ್ತು ಮಾತ್ರ ಮುಸ್ಲಿಂ ದೇಶಕ್ಕೆ ಎನ್ನುವುದನ್ನು ಟರ್ಕಿ ಸಾಬೀತು ಮಾಡಿದೆ.