Hubballi Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಮ್ಮ ಮನೆಗೆ ರಾಮ ಬಂದಿದ್ದಾನೆ ಅನ್ನೋ ರೀತಿನಲ್ಲಿ ಜನ ಖುಷಿಪಡುತ್ತಿದ್ದಾರೆ. ಇದೇ ರಾಮನ ಪ್ರತಿಷ್ಠಾಪನೆಗಾಗಿ 500 ವರ್ಷಗಳ ಹೋರಾಟ ನಡೆದಿತ್ತು. ಅತ್ಯಂತ ಸರಳವಾಗಿ ಸುಸೂತ್ರವಾಗಿ ರಾಮನ ಪ್ರತಿಷ್ಠಾಪನೆಯಾಗಿದೆ. ರಾಮನೂ ಸಹ ಒಳ್ಳೆಯ ಭಕ್ತನಗಾಗಿ ಕಾಯುತ್ತಿದ್ದ. ಮೋದಿಯಂತಹ ಒಳ್ಳೆಯ ಭಕ್ತ ಸಿಕ್ಕ ಮೇಲೆ ಪ್ರಾಣ ಪ್ರತಿಷ್ಠಾಪನೆಯಾಗಿದೆ ಎಂದಿದ್ದಾರೆ.
ಇನ್ನು ಕರ್ನಾಟಕದಲ್ಲಿ ಸರ್ಕಾರಿ ರಜೆ ನೀಡದ ಕಾಾರಣ ಕೇಂದ್ರ ಸಚಿವ ಜೋಶಿ ಕಿಡಿ ಕಾರಿದ್ದು, ಕಾಂಗ್ರೆಸ್ ತುಷ್ಟಿಕರಣದ ರಾಜಕಾರಣ ಮಾಡುತ್ತಿದೆ. ಅಯೋಧ್ಯೆಗೆ ಹೋಗುವುದರ ಬಗ್ಗೆಯೇ ಅವರಲ್ಲಿ ಗೊಂದಲವಿದೆ. ರಾಮ ಜನ್ಮಭೂಮಿ ಹೋರಾಟ ಆರಂಭವಾದಾಗಿನಿಂದಲೂ ಕಾಂಗ್ರೆಸ್ ಕನ್ಫ್ಯೂಸ್ ನಲ್ಲಿದೆ. ಮೊದಲು ಆಹ್ವಾನ ಪತ್ರಿಕೆ ಬಂದಿಲ್ಲ ಅಂದ್ರು. ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಗೆ ಆಹ್ವಾನ ಕೊಡಲಾಗಿತ್ತು. ಆಹ್ವಾನ ಬಂದ ಮೇಲೆ ನಾವು ಹೋಗಲ್ಲ ಅಂದ್ರು. ಈಗ ರಜೆ ಕೊಡುವ ಕುರಿತು ಅವರಲ್ಲಿ ಗೊಂದಲ. ರಾಹುಲ್ ಗಾಂಧಿಯವರನ್ನ ಸಿದ್ದರಾಮಯ್ಯ ಕೇಳಿರಬೇಕು. ಅವರು ರಜೆ ಬೇಡ ಅಂದಿರಬೇಕು. ಸಿದ್ದರಾಮಯ್ಯ ಮೊದಲಿನಿಂದಲೂ ಹಿಂದೂ ವಿರೋಧಿ. ಮತಕ್ಕಾಗಿ ಸಿದ್ದರಾಮಯ್ಯ ಅಯೋಧ್ಯೆಗೆ ಈಗ ಹೋಗ್ತೀನಿ ಅಂತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಶುಭಹಾರೈಸಿದ ಡಿಸಿಎಂ ಡಿ.ಕೆ.ಶಿವಕುಮಾರ್
ಸಾಂಘವಾಗಿ ನೆರವೇರಿದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ನಮೋ ಸಾರಥ್ಯದಲ್ಲಿ ನೆರವೇರಿದ ಪೂಜೆ