ಸಿನಿಮಾ ಸುದ್ದಿ: ರಶ್ಮಿಕಾ ಮಂದಣ್ಣ ಕನ್ನಡದ ಹುಡುಗಿ ತಮ್ಮ ವಿಭಿನ್ನ ನಟನೆಯ ಮೂಲಕವೋ ಅಥವಾ ಅದೃಷ್ಟವೇನೋ ಎಂಬಂತೆ ಕನ್ನಡದ ಮೊದಲ ಸಿನಿಮಾವಾದ ‘ಕಿರಿಕ್ ಪಾರ್ಟಿ’ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದೇ ತಡ ಈ ಕಿರಿಕ್ ಪಾರ್ಟಿ ಸಿನಿಮಾ ಸಕ್ಸಸ್ ಕಂಡ ತಕ್ಷಣ ರಶ್ಮಿಕಾಗೆ ಬಂದೆ ಬಿಟ್ಟಿತು ಅದೃಷ್ಟ
ಕನ್ನಡ ಮಾತ್ರವಲ್ಲದೆ ತೆಲುಗು ಹಿಂದಿ ಸಿನಿಮಾಗಳಿಂದಲೂ ಬಹಳಷ್ಟು ಆಫರ್ ಗಳು ಬರಲು ಶುರುವಾದವು. ಅವರ ಶ್ರಮಕ್ಕೆ ತಕ್ಕ ಪ್ರತಿಫಲವೆಂಬಂತೆ ಅವರಿಗೆ ಎಲ್ಲಾ ಭಾಷೆಯಲ್ಲೂ ಬೇಡಿಕೆ ಜಾಸ್ತಿ ಆಗ್ತಾ ಹೋಯಿತು. ಕನ್ನಡದ ಕಿರಿಕ್ ಪಾರ್ಟಿ ಹಿಟ್ ಆಗಿದ್ದೆ ತಡ ಅಲ್ಲಿಂದ ಇಲ್ಲಿಯವರೆಗೂ ಅವರು ತಿರುಗಿ ನೋಡಿದ್ದೇ ಇಲ್ಲ
ಆದರೆ ಇದರ ಮದ್ಯೆ ಕೆಲವು ವಿಚಾರಗಳು ಮತ್ತು ಅವರ ನಡವಳಿಕೆ, ಮಾತು ಇವುಗಳಿಂದ ಸ್ವಲ್ಪದಿನ ಟ್ರೋಲರ್ ಗಳ ಬಾಯಿಗೆ ತುತ್ತಾದರೂ ನಂತರ ಬುದ್ದಿಕಲಿತ ರಶ್ಮಿಕಾ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ . ಇದೆಲ್ಲ ನಿಮಗೆ ಗೊತ್ತಿರುವ ವಿಚಾರವೇ
ಹಾಗಿದ್ದರೆ ಅವರು ಒಂದು ಸಿನಿಮಾಗೆ ಅವರು ತೆಗೆದುಕೊಳ್ಳವ ಸಂಭಾವನೆ ವಿಚಾರಕ್ಕೆ ಬಂದರೆ ಅವರು ಬರೋಬ್ಬರಿ 3 ಕೋಟಿ ರೂಗಳನ್ನು ಸಂಭಾವನೆ ಪಡೆದುಕೊಳ್ಳುತ್ತಾರೆ. ಎಂದು ಬಾಲಿವುಡ್ ಅಂಗಳದಲ್ಲಿರುವ ಮಾತು.