Friday, July 4, 2025

Latest Posts

ತಲೆ ಮೇಲೆ ತಲೆ ಬಿದ್ದರೂ ಸದಾ ಕೂಲ್ ಆಗಿ ಇರುವ ರಾಶಿಯವರಿವರು

- Advertisement -

Horoscope: ಕೆಲವರು ಮಾಡುವ ಕೆಲಸದಲ್ಲಿ, ಆರೋಗ್ಯದಲ್ಲಿ ಅಥವಾ ಯಾವುದೇ ವಿಷಯದಲ್ಲಿ ಸ್ವಲ್ಪ ಏರುಪೇರಾದರೂ ಕೂಡ, ಏನೋ ಆಗಬಾರದ್ದು ಆಗೇ ಹೊಯ್ತು ಅನ್ನೋ ರೇಂಜಿಗೆ, ತಮ್ಮ ಆತಂಕ ವ್ಯಕ್ತಪಡಿಸುತ್ತಾರೆ. ಆದ್ರೆ ಇನ್ನು ಕೆಲವರು ಭೂಕಂಪ ಸಂಭವಿಸಿದರೂ, ಏನೂ ಆಗೇ ಇಲ್ಲವೆನೋ ಎಂಬಂತೆ ಜೀವನ ನಡೆಸುತ್ತಾರೆ. ಅಷ್ಟು ಕೂಲಾಗಿರುವ ರಾಶಿ ಯಾವುದು ಅಂತಾ ತಿಳಿಯೋಣ ಬನ್ನಿ..

ವೃಷಭ: ವೃಷಭ ರಾಶಿಯವರು ಶಾಂತ ಸ್ವಭಾವದವರು. ಯಾವ ಸಮಯದಲ್ಲೂ ಚೀರಾಡಿ ಹಾರಾಡಿ ರಂಪಾಟ ಮಾಡುವವರಲ್ಲ. ಮೌನವಾಗಿದ್ದುಕೊಂಡೇ ಸಂದರ್ಭವನ್ನು ನಿಭಾಯಿಸುತ್ತಾರೆ. ಅಲ್ಲದೇ, ತಾವಾಯಿತು, ತಮ್ಮ ಕೆಲಸವಾಯಿತು ಎನ್ನುವ ಜನರಿವರು.

ತುಲಾ: ತುಲಾ ರಾಶಿಯವರು ಸ್ವಭಾವದಲ್ಲಿ ಸ್ವಲ್ಪ ಜೋರು ಅಂತಲೇ ಹೇಳಬಹುದು. ಆದರೆ ಕೆಲವು ಸಂದರ್ಭದಲ್ಲಿ ಮೌನವಾಗಿರುತ್ತಾರೆ. ಕೆಲವೊಮ್ಮೆ ಈ ಮೌನ ಅಥವಾ ಇವರ ನಿರ್ಲಕ್ಷವೇ, ಇವರ ಸಂಬಂಧ ಹಾಳು ಮಾಡುತ್ತದೆ. ಉದಾಹರಣೆಗೆ ಪ್ರೀತಿಪಾತ್ರರಿಗೆ ಏನೋ ಪೆಟ್ಟಾಯಿತು ಎಂದುಕೊಳ್ಳಿ. ತುಲಾ ರಾಶಿಯವರು ಏನು ಆಗಿಲ್ಲವೆನ್ನುವ ರೀತಿ, ಆರಾಮವಾಗಿ ಅವರ ರಕ್ಷಣೆಗೆ ಹೋಗುತ್ತಾರೆ. ಇದರಿಂದ ಎದುರಿನವರ ಭಾವನೆಗೆ ಧಕ್ಕೆಯುಂಟಾಗುತ್ತದೆ.

ಕನ್ಯಾ: ಕನ್ಯಾ ರಾಶಿಯವರು ಸಂದರ್ಭವನ್ನು ಹೇಗೆ ನಿಭಾಯಿಸಬೇಕು ಅಂತಾ ತಿಳಿದುಕೊಂಡವರಾಗಿರುತ್ತಾರೆ. ಹಾಗಾಗಿ ಎಂಥದ್ದೇ ಸಂದರ್ಭ ಬಂದರೂ, ಅದನ್ನು ಸಲೀಸಾಗಿ ನಿಭಾಯಿಸುತ್ತಾರೆ. ಆದರೆ, ಹೆಚ್ಚು ಭಾವನಾತ್ಮಕ ಮನಸ್ಥಿತಿ ಇವರದ್ದಾಗಿರದ ಕಾರಣ, ಇವರು ಯಾವುದೇ ವಿಷಯದಲ್ಲೂ ಅಷ್ಟು ಟೆನ್ಶನ್ ತೆಗೆದುಕೊಳ್ಳುವುದಿಲ್ಲ.

ಕುಂಭ: ಕೆಲವೊಮ್ಮೆ ಎದುರಾಗುವ ಪರಿಸ್ಥಿತಿಯನ್ನು ನಿಭಾಯಿಸುವ ಅರ್ಹತೆ ಈ ರಾಶಿಯವರಿಗೆ ಇದ್ದರೂ, ಅವರು ಆ ಸುದ್ದಿಗೆ ಹೋಗುವುದೇ ಇಲ್ಲ. ಇನ್ನು ಕೆಲವು ಪರಿಸ್ಥಿತಿಗಳನ್ನು ನಿಭಾಯಿಸಲೇಬೇಕು ಎಂಬ ಸಂದರ್ಭ ಬಂದಾಗ, ಬುದ್ಧಿವಂತಿಕೆ ಉಪಯೋಗಿಸಿ, ಆ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ.

ಇಂಥವರಿಂದ ಎಂದಿಗೂ ಸಹಾಯ ಪಡೆಯಬೇಡಿ ಅಂತಾರೆ ಚಾಣಕ್ಯರು

ನಿರ್ಲಕ್ಷ್ಯದಿಂದಲೇ ತಮ್ಮ ಜೀವನದಲ್ಲಿ ನಷ್ಟ ಅನುಭವಿಸುವ ರಾಶಿಯವರು ಇವರು

Horoscope: ಹೆಚ್ಚು ಆತ್ಮವಿಶ್ವಾಸವಿಲ್ಲದ ರಾಶಿಯವರು ಇವರು

- Advertisement -

Latest Posts

Don't Miss