Horoscope: ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಕೆಲವರು ಸದಾ ಹಸನ್ಮುಖಿಯಾಗಿದ್ದರೆ, ಕೆಲವರು ಸದಾ ಸಿಡುಕುತ್ತಲೇ ಇರುತ್ತಾರೆ. ಇನ್ನು ಕೆಲವರು ಮಾತಿನ ಮಲ್ಲರಾಗಿದ್ದರೆ, ಮತ್ತೆ ಕೆಲವರು ಮೌನಿಯಾಗಿರುತ್ತಾರೆ. ಅದೇ ರೀತಿ ಕೆಲವರು ಹಣ ಖರ್ಚು ಮಾಡೋಕ್ಕೆ ಹಿಂದೇಟು ಹಾಕುತ್ತಾರೆ. ಅಂಥವರನ್ನು ಕಂಜೂಸ್, ಜಿಪುಣ ಎಂದು ಕರೆಯಲಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ವೃಷಭ ರಾಶಿ: ವೃಷಭ ರಾಶಿಯವರು ಹಣ ಖರ್ಚು ಮಾಡುವ ಮುನ್ನ, ಹಣ ಖರ್ಚು ಮಾಡುವ ಅಗತ್ಯವಿದೆಯಾ..? ಅದು ನಮಗೆ ಅತ್ಯಾವಶ್ಯಕ ವಸ್ತುವಾ..? ಹಣ ಖರ್ಚು ಮಾಡುವುದರಿಂದ ಲಾಭವಿದೆಯಾ..? ಹೀಗೆ ಹಲವು ರೀತಿಯಲ್ಲಿ ಯೋಚನೆ ಮಾಡಿ, ಬಳಿಕವೇ ಹಣ ಖರ್ಚು ಮಾಡುತ್ತಾರೆ. ಅಲ್ಲದೇ, ಯಾವುದಕ್ಕಾದರೂ ಬಂಡವಾಳ ಹಾಕುವಾಗ ಕೂಡ, ಹಲವು ಬಾರಿ ಯೋಚಿಸಿ, ಹಣ ಹೂಡಿಕೆ ಮಾಡುತ್ತಾರೆ.
ಮಿಥುನ ರಾಶಿ: ಮಿಥುನ ರಾಶಿಯವರು ಅವಶ್ಯಕತೆ ಇರುವ ವಸ್ತುಗಳಿಗಷ್ಟೇ ಖರ್ಚು ಮಾಡಲು ಬಯಸುತ್ತಾರೆ. ಆದರೆ ತಮ್ಮ ಸ್ವಂತ ಬಳಕೆಗೆ ಏನಾದರೂ ಖರೀದಿಸಬೇಕು ಅಂತ ಅಂದಾಗ ಮಾತ್ರ, ದುಡ್ಡು ಖರ್ಚು ಮಾಡಲು ಒಪ್ಪುತ್ತಾರೆ. ಇನ್ನು ಇವರಿಗೆ ಜೀವನವನ್ನು ಎಂಜಾಯ್ ಮಾಡುವ ಆಸೆ ತುಂಬಾ ಇರುತ್ತದೆ. ಆದರೆ ಹಣ ಖರ್ಚು ಮಾಡಲು ಮನಸ್ಸು ಒಪ್ಪುವುದಿಲ್ಲ.
ಕನ್ಯಾ ರಾಶಿ: ಕನ್ಯಾ ರಾಶಿಯವರು ಹಣದ ವಿಷಯ ಬಂದಾಗ, ಸರಿಯಾಗಿ ಲೆಕ್ಕವಿಡುತ್ತಾರೆ. ಇವರ ಬಳಿ ದುಡ್ಡಿದ್ದರೂ, ಅವಶ್ಯಕತೆ ಇರುವ ಸಂದರ್ಭದಲ್ಲೂ ಅದನ್ನು ಖರ್ಚು ಮಾಡಲು ಇಚ್ಛಿಸುವುದಿಲ್ಲ. ಜೊತೆಗಿದ್ದವರ ಹತ್ತಿರವೇ ಖರ್ಚು ಮಾಡಿಸುವ ಸ್ವಭಾವ ಇವರದ್ದಾಗಿರುತ್ತದೆ.
ಮಕರ ರಾಶಿ: ಮಕರ ರಾಶಿಯವರನ್ನು ಕಂಜೂಸು ರಾಶಿಯವರು ಎನ್ನುವುದಕ್ಕಿಂತ, ಇವರು ಮಿತವ್ಯಯಿಗಳು. ಬೇಕಾಬಿಟ್ಟಿ ಖರ್ಚು ಮಾಡಲು ಇಚ್ಚಿಸುವವರಲ್ಲ. ಅಗತ್ಯವಿದ್ದರೆ ಮಾತ್ರ, ಹಣ ಖರ್ಚು ಮಾಡುತ್ತಾರೆ. ಅಲ್ಲದೇ, ಸುಮ್ಮ ಸುಮ್ಮನೆ ದುಡ್ಡು ಖರ್ಚು ಮಾಡಿ, ಶೋಕಿ ಮಾಡುವವರನ್ನು ಕಂಡರೆ ಇವರಿಗಾಗುವುದಿಲ್ಲ.
ನಿರ್ಲಕ್ಷ್ಯದಿಂದಲೇ ತಮ್ಮ ಜೀವನದಲ್ಲಿ ನಷ್ಟ ಅನುಭವಿಸುವ ರಾಶಿಯವರು ಇವರು