Friday, November 28, 2025

Latest Posts

ಬೆಳಗ್ಗಿನ ತಿಂಡಿ: ರವಾ ಪ್ಯಾನ್‌ ಕೇಕ್ ರೆಸಿಪಿ

- Advertisement -

ಇವತ್ತು ನಾವು ರವಾ ಪ್ಯಾನ್‌ ಕೇಕ್ ರೆಸಿಪಿಯನ್ನ ತಿಳಿಯೋಣ. ಈ ಧಿಡೀರ್ ರೆಸಿಪಿಯನ್ನು ನೀವು ಬೆಳಿಗ್ಗೆ ತಿಂಡಿ ಹೊತ್ತಲ್ಲಿ ಕೂಡ ಮಾಡಬಹುದು. ಅಥವಾ ಉಪವಾಸವಿದ್ದಾಗ ಕೂಡ ಈ ತಿಂಡಿ ಮಾಡಬಹುದು. ಬೇಕಾದ್ರೆ ಉಪವಾಸದ ಹೊತ್ತಲ್ಲಿ ಈರುಳ್ಳಿಯನ್ನ ಸ್ಕಿಪ್ ಮಾಡಬಹುದು. ಹಾಗಾದ್ರೆ ಈ ರೆಸಿಪೆಗ ಬೇಕಾಗುವ ಸಾಮಗ್ರಿಯನ್ನ ನೋಡೋಣ..

ರವಾ ಪ್ಯಾನ್‌ ಕೇಕ್ ಮಾಡಲು ಬೇಕಾಗುವ ಸಾಮಗ್ರಿ: ಒಂದು ಕಪ್ ರವಾ, ಒಂದು ಕಪ್ ಮೊಸರು, ಅರ್ಧ ಸ್ಪೂನ್ ಜೀರಿಗೆ, ಕೊಂಚ ಸಕ್ಕರೆ, ಒಂದರಿಂದ ಎರಡು ಹಸಿಮೆಣಸು, ಒಂದು ತುರಿದ ಕ್ಯಾರೆಟ್, ಅರ್ಧ ಕಪ್ ತುರಿದ ಸೌತೇಕಾಯಿ, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಶುಂಠಿ ಪೇಸ್ಟ್, ಕೊತ್ತೊಂಬರಿ ಸೊಪ್ಪು, ಕರಿಬೇವು, ಚಿಕ್ಕ ಕಪ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ರವಾ ಮತ್ತು ಮೊಸರನ್ನ ಸೇರಿ ಕೊಂಚ ಕೊಂಚ ನೀರು ಸೇರಿಸುತ್ತಾ ಪ್ಯಾನ್ ಕೇಕ್‌ ರೀತಿ ಬ್ಯಾಟರ್ ತಯಾರಿಸಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಬಳಸಲು ಇಷ್ಟವಿದ್ದಲ್ಲಿ ಕೊಂಚ ಸಕ್ಕರೆ, ಅರ್ಧ ಸ್ಪೂನ್ ಜೀರಿಗೆ, ಹಸಿಮೆಣಸು, ಕ್ಯಾರೆಟ್, ಸೌತೇಕಾಯಿ, ಈರುಳ್ಳಿ, ಶುಂಠಿ ಪೇಸ್ಟ್, ಕೊತ್ತೊಂಬರಿ ಸೊಪ್ಪು, ಕರಿಬೇವು ಹಾಕಿ ಮಿಕ್ಸ್ ಮಾಡಿ. ಈಗ ರವಾ ಪ್ಯಾನ್ ಕೇಕ್ ಬ್ಯಾಟರ್ ರೆಡಿ.

ಒಂದು ದೋಸೆ ತವ್ವಾದಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ, ಬಳಿಕ ಪ್ಯಾನ್‌ಕೇಕ್‌ನಂತೆ ಈ ಮಿಶ್ರಣವನ್ನ ತವ್ವಾದ ಮೇಲೆ ಹಾಕಿ ಬೇಯಿಸಿದರೆ ರವಾ ಪ್ಯಾನ್ ಕೇಕ್ ರೆಡಿ. ಇದನ್ನ ಕೊಬ್ಬರಿ ಚಟ್ನಿ, ಚಟ್ನಿ ಪುಡಿ ಅಥವಾ ಜ್ಯಾಮ್‌ ಜೊತೆ ಕೂಡ ಸರ್ವ್ ಮಾಡಬಹುದು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss