Spiritual: ರಾವಣ ಕುಬೇರನಿಂದ ಲಂಕೆಯನ್ನು ಕಸಿದ ಬಳಿಕ, ಹಲವು ಆಸೆಗಳನ್ನು ಈಡೇರಿಸಿಕೊಳ್ಳಬೇಕು ಎಂದೆಣಿಸಿದ್ದ. ಆದರೆ ಆತನ ಈ ಆಸೆಗಳೆಲ್ಲ ಈಡೇರಿದ್ದಿದ್ದರೆ, ಲೋಕದಲ್ಲಿ ದುಷ್ಟತನವೇ ತಾಂಡವವಾಡುತ್ತಿತ್ತು. ಆದರೆ ಆತನ ಆಸೆ ಈಡೇರುವ ಮುನ್ನವೇ, ಆತ ರಾಮನಿಂದ ಸಂಹರಿಸಲ್ಪಟ್ಟ. ಹಾಗಾದ್ರೆ ರಾವಣನಿಗೆ ಇದ್ದ ವಿಚಿತ್ರ ಆಸೆ ಯಾವುದು ಅಂತಾ ತಿಳಿಯೋಣ ಬನ್ನಿ..
ಸ್ವರ್ಗಕ್ಕೆ ಮೆಟ್ಟಿಲು: ಸ್ವರ್ಗಕ್ಕೆ ಮೆಟ್ಟಿಲು ಮಾಡಬೇಕು ಎನ್ನುವುದು ರಾವಣನ ಆಸೆಯಾಗಿತ್ತು. ಅಲ್ಲದೇ ಸ್ವರ್ಗ ಆಳಬೇಕು ಎನ್ನುವ ಆಸೆಯೂ ಇತ್ತು. ಎಲ್ಲರೂ ಸ್ವರ್ಗ ನೋಡಬೇಕು. ತಾನು ನಿರ್ಮಿಸಿದ ಮೆಟ್ಟಿಲನ್ನು ಹತ್ತಿ ಎಲ್ಲರೂ ಸ್ವರ್ಗಕ್ಕೆ ಹೋಗಬೇಕು ಎಂದು ರಾವಣ ಆಶಿಸಿದ್ದನು.
ವಾಸನೆ ಇರದ ಮದ್ಯಪಾನ: ಮದ್ಯಪಾನ ಸೇವಿಸಿದರೆ ಬಾಯಿಯಿಂದ ವಾಸನೆ ಬರುತ್ತದೆ. ಮತ್ತು ಮದ್ಯಪಾನ ಮಾಡಿರುವುದು ಗೊತ್ತಾಗುತ್ತದೆ. ಇದೇ ಕಾರಣಕ್ಕೆ, ರಾವಣನಿಗೆ ಮದ್ಯಪಾನ ಸೇವಿಸಿದರೆ, ಬಾಯಿಯಿಂದ ವಾಸನೆ ಬರಬಾರದು. ಕುಡಿದಿದ್ದೂ ಗೊತ್ತಾಗಬಾರದು ಎಂದು, ಮದ್ಯಪಾನಕ್ಕೆ ವಾಸನೆಯೇ ಇರದಂತೆ ಮಾಡಬೇಕು. ಅದನ್ನು ಸೇವಿಸಿದರೆ, ನೀರು ಕುಡಿದಿದ್ದಾರೆಂದು ಎನ್ನಿಸಬೇಕು ಎನ್ನುವ ರೀತಿ ಮಾಡಬೇಕು ಎನ್ನುವ ವಿಚಿತ್ರ ಆಸೆ ರಾವಣನಿಗೆ ಇತ್ತು.
ದೇವರ ಪೂಜೆ ನಿಲ್ಲಿಸಿ, ರಾಕ್ಷಸರ ಪೂಜೆ ಮಾಡುವುದು: ರಾವಣ ಶಿವ ಭಕ್ತನಾಗಿದ್ದು, ಶಿವ ತಾಂಡವ ಸ್ತೋತ್ರವನ್ನು ರಚಿಸಿದ್ದ. ಆದರೆ ಅವನಿಗೆ ದೇವರ ಪೂಜೆ ಮಾಡುವುದು ಇಷ್ಟವಿರಲಿಲ್ಲ. ಜನ ದೇವರ ಪೂಜೆ ಮಾಡುವುದಿದ್ದರೆ, ರಾಕ್ಷಸರ ಪೂಜೆಯೂ ಮಾಡಬೇಕು ಎನ್ನುವುದು ರಾವಣನ ಲೆಕ್ಕಾಚಾರವಾಗಿತ್ತು. ಏಕೆಂದರೆ ಅವನಿಗೆ ಬೇಧ ಭಾವ ಇಷ್ಟವಿರಲಿಲ್ಲ.
ಸಮುದ್ರದ ನೀರು ಸಿಹಿಯಾಗಿಸುವುದು: ಉಪ್ಪುಪ್ಪಾಗಿರುವ ಸಮುದ್ರದ ನೀರನ್ನು ಸಿಹಿ ಮಾಡಬೇಕು ಎಂದು ರಾವಣ ಆಸೆಪಟ್ಟಿದ್ದನು.
ರಕ್ತದ ಬಣ್ಣವನ್ನು ಬಿಳಿಯಾಗಿಸಬೇಕು. ರಾವಣ ರಕ್ತದ ಬಣ್ಣವನ್ನು ಬಿಳಿಯಾಗಿಸಬೇಕು ಎಂದುಕೊಂಡಿದ್ದನು. ಏಕೆಂದರೆ, ಅವನು ಯುದ್ಧ ಮಾಡಿದಾಗ, ಯುದ್ಧಭೂಮಿ ರಕ್ತಸಿಕ್ತವಾಗಿ, ಅಸಹ್ಯವಾಗಿ ಕಾಣುತ್ತಿತ್ತು. ರಕ್ತ ಬಿಳಿ ಇದ್ದರೆ, ರಣರಂಗ ಚೆಂದವಾಗಿ ಕಾಣಿಸುತ್ತದೆ ಎನ್ನುವುದು ಅವನ ಆಸೆಯಾಗಿತ್ತು.
ಚಿನ್ನಕ್ಕೆ ಪರಿಮಳ ನೀಡುವುದು: ಕುಬೇರನ ಸ್ವರ್ಣ ಲಂಕೆಯನ್ನು ಕಸಿದ ಬಳಿಕ, ಚಿನ್ನ ಕಂಡಾಗ ರಾವಣನಿಗೆ ಪರಿಮಳದ ನೆನಪಾಗುತ್ತಿತ್ತು. ಹಾಗಾಗಿ ಚಿನ್ನ ಧರಿಸಿದವರ ಸುತ್ತಮುತ್ತ ಸುಹಾಸನೆ ಇರಬೇಕು ಎಂದು, ಚಿನ್ನಕ್ಕೆ ಸುಹಾಸನೆ ಬರುವಂತೆ ಮಾಡಬೇಕು ಎಂದು ರಾವಣನಿಗೆ ಆಸೆ ಇತ್ತು.
ವರ್ಣಬೇಧ ನೀತಿಯನ್ನು ಕೊನೆಗೊಳಿಸುವುದು. ರಾವಣ ಬ್ರಾಹ್ಮಣನಾಗಿದ್ದರೂ, ಕಪ್ಪು ಬಣ್ಣವನ್ನು ಹೊಂದಿದ್ದ. ಹಾಗಾಗಿ ಪ್ರಪಂಚದಲ್ಲಿ ವರ್ಣಬೇಧ ನೀತಿ ಕೊನೆಗೊಳಿಸಬೇಕು ಎಂದು ನಿಶ್ಚಯಿಸಿದ್ದ. ಪ್ರಪಂಚದಲ್ಲಿ ಇರುವ ಎಲ್ಲರ ಬಣ್ಣ ಒಂದೇ ರೀತಿ ಇರಬೇಕು. ಕಪ್ಪು, ಬಿಳಿ ಎನ್ನುವ ವಿಷಯವೇ ಇರಬಾರದು ಎಂದು ಆತ ಬಯಸಿದ್ದ.