ರವಿಚಂದ್ರನ್ ಅವರ ತಾಯಿ ನಿಧನ..!

ನಟ ರವಿಚಂದ್ರನ್ (V. Ravichandran) ಅವರ ತಾಯಿ ಇಂದು ನಿಧನರಾಗಿದ್ದಾರೆ. ರವಿಚಂದ್ರನ್ ಅವರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ (Pattammal Veeraswamy) ಅವರಿಗೆ 83 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ (age-related disease) ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಇಂದು ಅವರು ಕೊನೆಯುಸಿರು ಎಳೆದಿದ್ದಾರೆ. ರವಿಚಂದ್ರನ್ ಅವರ ತಾಯಿ ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಅವರು ಆಗಾಗ ಎಲ್ಲರನ್ನೂ ಮರೆಯುತಿದ್ದರು. ಆದರೆ ಯಾರನ್ನು ಮರೆತರೂ ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಅವರು ಮರೆತಿಲ್ಲ. ನನ್ನ ಹೆಂಡತಿಯೇ ಅವರನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುವುದು. ಎಲ್ಲವನ್ನೂ ಹಾಸಿಗೆಯಲ್ಲೇ ಮಾಡಿಕೊಳ್ಳುವ ಅಮ್ಮನನ್ನು ನಿಭಾಯಿಸುವುದು ಅಷ್ಟು ಸುಲಭ ಅಲ್ಲ. ನನ್ನ ಹೆಂಡತಿ ಒಂದು ದಿನವೂ ಬೇಸರ ಮಾಡಿಕೊಂಡಿಲ್ಲ ಎಂದು ರವಿಚಂದ್ರನ್ ಒಂದು ಕಾರ್ಯಕ್ರಮದಲ್ಲಿ ತಿಳಿಸಿದ್ದರು. ಇಂದು 11 ಸುಮಾರಿಗೆ ನಂತರ ಅವರ ಮನೆಗೆ ಇಂದು ಪಾರ್ಥಿವ ಶರೀರವನ್ನು ತರಲಾಗುವುದು, ಸಂಜೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ರವಿಚಂದ್ರನ್ ತಿಳಿಸಿದ್ದಾರೆ.

About The Author