Saturday, April 12, 2025

Latest Posts

ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪತ್ನಿ ರಿವಾಬಾಗೆ ಅರ್ಪಿಸಿದ ರವೀಂದ್ರ ಜಡೇಜಾ..

- Advertisement -

Cricket News: ರಾಜ್‌ಕೋಟ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಪಂದ್ಯದಲ್ಲಿ ಕ್ರಿಕೇಟಿಗ ರವೀಂದ್ರ ಜಡೇಜಾಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿಯನ್ನು ಜಡೇಜಾ ತಮ್ಮ ಪ್ರೀತಿಯ ಮಡದಿ, ರಿವಾಬಾಗೆ ಅರ್ಪಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ರವೀಂದ್ರ ಜಡೇಜಾ ತಂದೆ, ಸೊಸೆಯ ಮಾತು ಕೇಳಿ ಮಗ ನಮ್ಮಿಂದ ದೂರಾಗಿದ್ದಾನೆ. ಫೋನಿನಲ್ಲೂ ಸಹ ಮಾತನಾಡುತ್ತಿಲ್ಲ. ಅದೇನು ಮೋಡಿ ಮಾಡಿದ್ದಾಳೋ ಎಂದು ಆರೋಪಿಸಿದ್ದರು. ಆಗ ರವೀಂದ್ರ, ಇದೆಲ್ಲಾ ಸ್ಕ್ರಿಪ್ಟೆಡ್ ಆರೋಪಗಳು, ನನ್ನ ಅಪ್ಪ ಮಾಡುತ್ತಿರುವ ಆರೋಪವೆಲ್ಲವೂ ಸುಳ್ಳು. ನನ್ನ ಪತ್ನಿಯ ಹೆಸರನ್ನು ಹಾಳು ಮಾಡಲು ಅವರು ಮಾಧ್ಯಕ್ಕೆ ಈ ರೀತಿ ಹೇಳಿದ್ದಾರೆ. ಇವೆಲ್ಲವೂ ಸ್ಕ್ರಿಪ್ಟೆಡ್. ನನಗೂ ಹೇಳಲು ಸಾಕಷ್ಟಿದೆ. ಆದರೆ ಮನೆಯ ವಿಚಾರವನ್ನು ನಾನು ಯಾರಲ್ಲಿಯೂ ಹೇಳಲು ಬಯಸುವುದಿಲ್ಲವೆಂದು ಹೇಳಿದ್ದರು.

ಬಳಿಕ ರಿವಾಬಾ ಕೂಡ ವೀಡಿಯೋ ಮಾಡಿ,ಇದೆಲ್ಲ ಮೊದಲೇ ಪ್ಲಾನ್ ನಡೆದಿರುತ್ತದೆ. ನಾನು ಮತ್ತು ನನ್ನ ಪತಿ ಬಿಜೆಪಿಗೆ ಸಪೋರ್ಟ್ ಮಾಡುತ್ತೇವೆ. ಆದರೆ ರವೀಂದ್ರ ಅವರ ತಂದೆಗೆ ಇದು ಇಷ್ಟವಿಲ್ಲ. ರವೀಂದ್ರ ಜಡೇಜಾ ತಂಗಿ ಕಾಂಗ್ರೆಸ್ ಪರ ಚುನಾವಣೆಗೆ ನಿಲ್ಲುತ್ತಾಳೆ. ಹಾಗಾಗಿ ಮಗ ಪತ್ನಿಯ ಬದಲು ತಂಗಿಗೆ ಸಪೋರ್ಟ್ ಮಾಡಲಿ ಎಂದು ಅವರ ತಂದೆ ಬಯಸಿದ್ದರು. ಹಾಗಾಗಿಯೇ ನನ್ನ ವಿರುದ್ಧ ಈ ರೀತಿ ಆರೋಪ ಮಾಡಿ, ನನ್ನ ಹೆಸರು ಹಾಳು ಮಾಡಲು ನೋಡಿದ್ದಾರೆಂದು ಆರೋಪಿಸಿದ್ದರು.

ಅಲ್ಲದೇ ಮದುವೆಯೊದ ಹೊಸತರಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಪರ ಪ್ರಚಾರ ಮಾಡಬೇಕು. ಕಾಂಗ್ರೆಸ್‌ನಿಂದ ಎಲೆಕ್ಷನ್‌ಗೆ ನಿಲ್ಲಬೇಕು ಎಂದು ನನ್ ಮಾವ ಒತ್ತಡ ಹೇರುತ್ತಿದ್ದರು. ಹಾಗಾಗಿ ನಾವು ಅವರಿಂದ ದೂರ ಬರಬೇಕಾಯಿತು ಎಂದು ರಿವಾಬ ಹೇಳಿದ್ದರು.

ಇದೀಗ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿರುವ ಜಡೇಜಾ, ಆ ಪ್ರಶಸ್ತಿಯನ್ನು ಪತ್ನಿಗೆ ಅರ್ಪಿಸಿದ್ದಾರೆ. ನನ್ನ ಪತ್ನಿ ನನ್ನನ್ನು ಮಾನಸಿಕವಾಗಿ ಸಧೃಡಗೊಳಿಸಲು ಸಾಕಷ್ಟು ಶ್ರಮ ಪಡುತ್ತಾಳೆ. ಆತ್ಮ ವಿಶ್ವಾಸ ತುಂಬುತ್ತಾಳೆ. ಹಾಗಾಗಿ ಈ ಪ್ರಶಸ್ತಿಯನ್ನು ನಾನು ನನ್ನಾಕೆ ಅರ್ಪಿಸುತ್ತೇನೆ ಎಂದಿದ್ದಾರೆ.

ಅಭಿಮಾನಿಗಳಿಗೆ, ಕರುನಾಡ ಜನತೆಗೆ ಧನ್ಯವಾದ ತಿಳಿಸಿದ ಡಿಬಾಸ್ ದರ್ಶನ್

ಈ ಷರತ್ತು ಒಪ್ಪಿದರೆ ಮಾತ್ರ, ಇಂಡಿಯಾ ಕೂಟದೊಟ್ಟಿಗೆ ಹೊಂದಾಣಿಕೆ: ಸಮಾಜವಾದಿ ಪಾರ್ಟಿ

ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾದ ರಾಜಸ್ಥಾನ ಬುಡಕಟ್ಟು ಮುಖಂಡ ಮಹೇಂದ್ರ ಜೀತ್

- Advertisement -

Latest Posts

Don't Miss