ಬೆಳಗಾವಿ ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಬೀಳಿಸಿ ಆಹಾಕಾರ ಮೆರೆದಿದ್ದಾರೆ . ಮಧ್ಯರಾತ್ರಿ ದುಷ್ಕರ್ಮಿಗಳು ಆಗಮಿಸಿ ಪುತ್ಥಳಿ ಬೀಳಿಸಿ ದುಷ್ಕೃತ್ಯ ಮೆರೆದಿದ್ದಾರೆ , ಅದೇ ರೀತಿ ಹಲವಾರು ಪೋಲಿಸ್ ವಾಹನಗಳಿಗೆ ಬೆಂಕಿಯನ್ನಿಟ್ಟು ಹಾನಿಮಾಡಿದ್ದಾರೆ . ರಾಯಣ್ಣನ ಖಡ್ಗ ,ಗುರಾಣಿಯನ್ನು ಬೇರೆ ಬೇರೆ ಕಡೆ ಇಟ್ಟು ವಿಕೃತಿಯನ್ನು ಮೆರೆದಿದ್ದಾರೆ .
ಬೆಳಗಾವಿಯಲ್ಲಿ ನಿನ್ನೆ ತಡರಾತ್ರಿ ಕಿಡಿಗೇಡಿಗಳ ಅಟ್ಟಹಾಸ ಸಂಬಂಧ ಬೆಳಗಾವಿ ಪೊಲೀಸರಿಂದ ಈವರೆಗೆ 27 ಆರೋಪಿಗಳನ್ನು ಬಂಧಿಸಲಾಗಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆವರೆಗೂ ನಗರದಲ್ಲಿ 144 ಸೆಕ್ಷೆನ್ ಜಾರಿ ಮಾಡಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ತಿಳಿಸಿದ್ದಾರೆ .
ಎಂಇಎಸ್ ಪುಂಡರ ದೌರ್ಜನ್ಯಕ್ಕೆ ಸರ್ಕಾರ ಮೌನವಾಗಿರುವುದು ಎಲ್ಲರಿಗೂ ಬೇಸರ ತಂದಿದೆ, ಈ ಕುರಿತಂತೆ ಎಲ್ಲ ನಾಯಕರು ಸರ್ಕಾರಕ್ಕೆ ಕೂಡಲೇ ಎಂಇಎಸ್ ತಪ್ಪಿತಸ್ತ ಪುಂಡರನ್ನು ಜೈಲಿಗಟ್ಟಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಬೆಳಗಾವಿಯಲ್ಲಿ ಎಂಇಎಸ್ ಪುಂಡರಿಂದ ಸಂಗೊಳ್ಳಿ ರಾಯಣ್ಣ ಪುತ್ಥಳಿ ಧ್ವಂಸ..!
- Advertisement -
- Advertisement -