www.karnatakatv.net : ಮಂತ್ರಾಲಯ : ಕಲಿಯುಗ ಕಾಮಧೇನು ಶ್ರೀ ಗುರು ರಾಘವೇಂದ್ರರ 350ನೇ ಆರಾಧನಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಇಂದು ಉತ್ತರಾರಾಧನೆ ಜರುಗುತ್ತಿದ್ದು ಇದರ ಅಂಗವಾಗಿ ಬೆಳಗಿನ ಜಾವ ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ, ಭಜನೆ ಸಂಕೀರ್ತನೆ ಕಾರ್ಯಕ್ರಮಗಳು ನಡೆಯುತ್ತಿವೆ.
ಬಳಿಕ ಶ್ರೀರಾಘವೇಂದ್ರ ತೀರ್ಥರ ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಮೂಲಬೃಂದಾವನಕ್ಕೆ ಮಂಗಳಾರತಿಯನ್ನ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ನೆರವೇರಿಸಿದ್ರು. ಬಳಿಕ, ವಸಂತೋತ್ಸವಕ್ಕೆ ಚಾಲನೆ ನೀಡಲಾಯ್ತು. ಬಳಿಕ ವಸಂತೋತ್ಸವದಲ್ಲಿ ಓಕುಳಿಯಾಡುವ ಕಾರ್ಯಕ್ರಮ ನಡೆಯಲಿದೆ.
ಶ್ರೀಮಠದ ಪ್ರಾಕಾರದಲ್ಲಿ ಪ್ರಹ್ಲಾದರಾಜರ ಉತ್ಸವಮೂರ್ತಿಯನ್ನು ಮೆರವಣಿಗೆಯೊಂದಿಗೆ ಮಹಾರಥದ ಬಳಿ ಕರೆತಂದು ಬಳಿಕ ಪೀಠಾಧಿಪತಿಗಳು ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ, ಆರಾಧನಾ ಮಹೋತ್ಸವದ ಮಹಾರಥೋತ್ಸವದ ಯಶಸ್ಸಿಗೆ ಪ್ರಾರ್ಥಿನೆ ಸಲ್ಲಿಸಲಿದ್ದಾರೆ. ನಂತರ ಪ್ರಹ್ಲಾದರಾಜರ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ಬಳಿಕ ಶ್ರೀಗಳು ಅನುಗ್ರಹ ಸಂದೇಶ ನೀಡಲಿದ್ದಾರೆ.
ಅನೀಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು