ಮುಂಬೈ: ಆರ್ಸಿಬಿ ತಂಡದ ಫಿನಿಶರ್ ದಿನೇಶ್ ಕಾರ್ತಿಕ್ ಎದುರಾಳಿ ತಂಡಗಳಲ್ಲಿ ನಡುಕ ಹುಟ್ಟಿಸಿದ ಬ್ಯಾಟ್ಸಮನ್ ಆಗಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಈಗ ಫಾಫ್ ಡುಪ್ಲೆಸಿಸ್ ಅಡಿಯಲ್ಲಿ ಕೆಳಕ್ರಮಾಂದಲ್ಲಿ ಬ್ಯಾಟಿಂಗ್ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ಕಳೆದ 8 ಪಂದ್ಯಗಳಿಂದ ದಿನೇಶ್ ಕಾರ್ತಿಕ್ 210 ರನ್ ಗಳಿಸಿ 210 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಬ್ಯಾಟಿಂಗ್ ಸರಾಸರಿ 105 ಹೊಂದಿದ್ದಾರೆ.
ಇಂದು ರಾಜಸ್ಥಾನ ವಿರುದ್ಧದ ಕದನ ಸಾಕಷ್ಟು ಕುತೂಹಲ ಮೂಡಿಸಿದೆ. ಆರ್ಸಿಬಿ ತಂಡದ ಮಾಜಿ ಆಟಗಾರರಾದ ಯಜ್ವಿಂದರ್ ಚಾಹಲ್ ಹಾಗೂ ದೆವದತ್ ಪಡಿಕಲ್ ವಿರುದ್ಧ ಆಡಲಿದೆ.
ದಿನೇಶ್ ಕಾರ್ತಿಕ್ ರಾಜಸ್ಥಾನ ಬೌಲರ್ಸ್ಗಳಿಗೆ ಕಠಿಣ ಸವಾಲಾಗಿದ್ದಾರೆ. ಕಾರ್ತಿಕ್ ಅವರನ್ನು ಕಟ್ಟಿಹಾಕಲು ತಂತ್ರವನ್ನು ರೂಪಿಸಿವೆ. ಅದರೆ ಇದರೊಂದಿಗೆ ಇನ್ನೊಂದು ಸಣ್ಣ ಪರಿಹಾರವನ್ನು ರಾಜಸ್ಥಾನ ರಾಯಲ್ಸ್ ಕಂಡುಕೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ಪುಣೆಗೆ ಪಂದ್ಯವನ್ನು ಆಡಲು ಹೇಗೆ ಬರಬೇಕೆಂಬುದನ್ನು ನಕ್ಷೆ ಮೂಲಕ ಹೇಳಿದೆ. ಮುಂಬೈನಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ ಹೀಗಾಗಿ ನಕ್ಷೆ ಮಾಡಿ ಈ ದಾರಿಯಿಂದ ಬನ್ನಿ ಎಂದು ಟ್ವೀಟ್ ಮಾಡಿದೆ.
ಈ ಟ್ವೀಟ್ ನೋಡಿದ ಅಭಿಮಾನಿಗಳು ನೋಡಿ ಹೊಟ್ಟ ನೋವಾಗುವಷ್ಟು ನಕ್ಕಿದ್ದಾರೆ.
ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ ಸೋತಿದ್ದ ಆರ್ಸಿಬಿ ರಾಜಸ್ಥಾನ ವಿರುದ್ಧ ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ.