Sunday, December 22, 2024

Latest Posts

ಮಾರ್ವಾಡಿ ಉದ್ಯಮಿಗಳ ಶ್ರೀಮಂತಿಕೆಗೆ ಕಾರಣ ಈ 7 ರೂಲ್ಸ್- ಭಾಗ 1

- Advertisement -

ಮಾರ್ವಾಡಿಗರಲ್ಲಿ ಬಡವರು ಸಿಗೋದು ತೀರಾ ಕಡಿಮೆ. ಯಾಕಂದ್ರೆ ಅವರು ಯಾವಾಗಲೂ ಉದ್ಯಮದ ಬಗ್ಗೆಯೇ ಯೋಚನೆ ಮಾಡುತ್ತಾರೆ. ಕೈಯಲ್ಲಿ 10 ರೂಪಾಯಿ ಇದ್ದರೆ, ಅದನ್ನ ನಾನು ಎಲ್ಲಿ ಇನ್ವೆಸ್ಟ್ ಮಾಡಬಹುದು ಅನ್ನೋ ಯೋಚನೆಯೇ ಅವರ ತಲೆಯಲ್ಲಿರುತ್ತದೆ. ಹಾಗಾಗಿ ಅವರು ಜಾಣ್ಮೆಯಿಂದಲೇ ದುಡ್ಡು ಸಂಪಾದನೆ ಮಾಡುತ್ತಾರೆ. ಹಾಗಾದ್ರೆ ಶ್ರೀಮಂತರಾಗಲು ಮಾರ್ವಾಡಿಗರು ಅನುಸರಿಸುವ 7 ರೂಲ್ಸ್ ಯಾವುದು ತಿಳಿಯೋಣ ಬನ್ನಿ..

ಮೊದಲನೇಯ ರೂಲ್ಸ್, ದುಡ್ಡಿನ ಮಹತ್ವ ಅರಿಯುವುದು. ನಾವು ಈ ಮೊದಲೇ ಹೇಳಿದಂತೆ, ಕೈಯಲ್ಲಿ 10 ರೂಪಾಯಿ ಇದ್ರೂ ಕೂಡ ಮಾರ್ವಾಡಿಯಾದವನು, ಅದನ್ನ ಎಲ್ಲಿ ಇನ್ವೆಸ್ಟ್ ಮಾಡಬಹುದು. ಅದರಿಂದ ಹೇಗೆ ಡಬಲ್ ದುಡ್ಡು ಮಾಡಬಹುದು ಅಂತಾನೇ ಯೋಚಿಸುತ್ತಾನೆ. ಕೆಲವರು ಮಾರ್ವಾಡಿಗಳನ್ನು ಕಂಜೂಸ್ ಎನ್ನುತ್ತಾರೆ. ಆದ್ರೆ ಅದು ಕಂಜೂಸುತನವಲ್ಲ. ಬದಲಾಗಿ ದುಡ್ಡು ಉಳಿಸುವ ಬುದ್ಧಿವಂತಿಕೆ.

ನಿಮ್ಮ ತ್ವಚೆ ಆರೋಗ್ಯಕರವಾಗಿರಬೇಕು ಅಂದ್ರೆ ಈ ತರಕಾರಿ ಬಳಸಿ..

ಎರಡನೇಯ ರೂಲ್ಸ್, ಅವಶ್ಯಕತೆ ಇದ್ದದ್ದನ್ನಷ್ಟೇ ಖರೀದಿಸಿ. ಕೆಲವರು ಮಾರುಕಟ್ಟೆಗೆ ಹೋದಾಗ, ಸಿಕ್ಕಿ ಸಿಕ್ಕಿದ್ದನ್ನೆಲ್ಲಾ ಖರೀದಿ ಮಾಡ್ತಾರೆ. ಅದರ ಅವಶ್ಯಕೆತ ಇಲ್ಲದಿದ್ದರೂ ಶೋಕಿಗಾಗಿ, ಆ ವಸ್ತುವನ್ನು ಖರೀದಿಸಿ, ದುಡ್ಡು ಖರ್ಚು ಮಾಡುತ್ತಾರೆ. ಆದ್ರೆ ಮಾರ್ವಾಡಿ ಹಾಗಲ್ಲ. ತನಗೆ ಅವಶ್ಯಕತೆ ಇದ್ದ ವಸ್ತುವನ್ನಷ್ಟೇ ಖರೀದಿ ಮಾಡುತ್ತಾನೆ. ವಿನಃ ಇಷ್ಟವೆಂದು ಕಂಡ ಕಂಡದ್ದನ್ನೆಲ್ಲ ಖರೀದಿಸುವುದಿಲ್ಲ. ಇದೇ ರೀತಿ ಹಣ ಉಳಿಸಿ, ಅದನ್ನ ಉದ್ಯಮಕ್ಕೆ ಹಾಕುತ್ತಾನೆ. ಮತ್ತು ಲಾಭ ಮಾಡುತ್ತಾನೆ.

ಮೂರನೇಯ ರೂಲ್ಸ್, ಖರ್ಚು ಮಾಡಿದ್ದು ಮತ್ತು ನಿಮಗೆ ಬಂದ ದುಡ್ಡಿನ ಬಗ್ಗೆ ಸರಿಯಾದ ಲೆಕ್ಕಾಚಾರವಿಡಿ. ಉದಾಹರಣೆಗೆ ನೀವು ಜಾಬ್ ಮಾಡುತ್ತಿದ್ದೀರಿ. ಆಗ ನೀವು ನಿಮಗೆ ಬಂದ ಸ್ಯಾಲರಿ ಎಷ್ಟು, ಅದರಲ್ಲಿ ಈ ತಿಂಗಳು ನಾವು ಏನೇನು ಖರೀದಿಸಿದೆ. ಎಷ್ಟು ಖರ್ಚು ಮಾಡಿದೆ ಎಂದು ನಿಮಗೆ ಕರೆಕ್ಟ್ ಆಗಿರುವ ಲೆಕ್ಕವಿರಬೇಕು. ಆಗ ಮಾತ್ರ ನೀವು ಸರಿಯಾಗಿ ಹಣ ಕೂಡಿಡಲು ಸಾಧ್ಯವಾಗುತ್ತದೆ. ಖರ್ಚು ವೆಚ್ಚದ ಲೆಕ್ಕವಿಲ್ಲದಿದ್ದಲ್ಲಿ, ನೀವು ಸರಿಯಾದ ರೀತಿಯಲ್ಲಿ ಹಣ ಕೂಡಿಡಲು ಸಾಧ್ಯವೇ ಇಲ್ಲ.

ಅಕ್ಕಿ ತೊಳೆದ ನೀರಿನಿಂದ ನೀವು ಈ ರೀತಿಯಾಗಿ ಸೌಂದರ್ಯ ಪಡೆದುಕೊಳ್ಳಬಹುದು..

ನಾಲ್ಕನೇಯ ರೂಲ್ಸ್, ನಿಮ್ಮ ಬಳಿ ಇರುವ ಕೊಂಚ ದುಡ್ಡನ್ನು ಕೂಡ ಇನ್ವೆಸ್ಟ್ ಮಾಡೋದನ್ನ ಕಲಿಯಿರಿ. ಉದಾಹರಣೆಗೆ ನಿಮಗೆ ಬಂದ ಸ್ಯಾಲರಿಯಲ್ಲಿ ಎಲ್ಲ ಖರ್ಚಾಗಿ ಒಂದೈದು ಸಾವಿರ ರೂಪಾಯಿ ಉಳಿದರೂ ಕೂಡ, ನೀವು ಪ್ರತೀ ತಿಂಗಳು ಬ್ಯಾಂಕ್‌ನಲ್ಲಿ ಆರ್‌ಡಿ ಇಡಬಹುದು. ಇದರಿಂದ ಮುಂದೊಂದು ದಿನ ನಿಮಗೆ ಬಡ್ಡಿ ಸಮೇತ ಹಣ ಸಿಗುತ್ತದೆ. ಮಾರ್ವಾಡಿಗಳು ಕೂಡ ಇದೇ ರೀತಿ ಹಣ ಗಳಿಸೋದು.

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ ಬನ್ನಿ..

- Advertisement -

Latest Posts

Don't Miss