ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಭಾಗದಲ್ಲಿ ನಾವು ಮಾರ್ವಾಡಿಗರು ಶ್ರೀಮಂತರಾಗಲು ಬಳಸುವ 7 ರೂಲ್ಸ್‌ನಲ್ಲಿ 4 ರೂಲ್ಸ್ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ, ಉಳಿದ 3 ರೂಲ್ಸ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಐದನೇಯ ರೂಲ್ಸ್, ಶೇರ್ ಮಾರ್ಕೆಟ್ನಲ್ಲಿ ದುಡ್ಡು ಇನ್ವೆಸ್ಟ್ ಮಾಡೋದು. ಹಲವರಿಗೆ ಶೇರ್ ಮಾರ್ಕೆಟ್ ಬಗ್ಗೆ ಗೊತ್ತಿರುವುದಿಲ್ಲ. ಆಗ ನೀವು ಆ ಬಗ್ಗೆ ಗೊತ್ತಿರುವವರ ಬಳಿ ಸರಿಯಾಗಿ ತಿಳಿದುಕೊಂಡು, ಶೇರ್ ಮಾರ್ಕೆಟ್ನಲ್ಲಿ ದುಡ್ಡು ಇನ್ವೆಸ್ಟ್ ಮಾಡಿ. 5 ಸಾವಿರ ರೂಪಾಯಿ ಹೂಡಿಕೆ ಮಾಡಿ, ಲಕ್ಷ ಲಕ್ಷ ಗಳಿಸಿದವರೂ ಇದ್ದಾರೆ. ಹೆಚ್ಚಿನ ಮಾರ್ವಾಡಿ ಉದ್ಯಮಿಗಳು ಕೂಡ ಶೇರ್ ಮಾರ್ಕೆಟ್‌ನಲ್ಲಿ ಇನ್ವೆಸ್ಟ್ ಮಾಡುತ್ತಾರೆ.
ಮಾರ್ವಾಡಿ ಜನರ ಶ್ರೀಮಂತಿಕೆಗೆ ಕಾರಣ ಈ 7 ರೂಲ್ಸ್- ಭಾಗ 1
ಆರನೇಯ ರೂಲ್ಸ್, ರಿಸ್ಕ್ ತೆಗೆದುಕೊಳ್ಳಲು ಹೆದರಿದರುವುದು. ಮಾರ್ವಾಡಿಗಳು ಯಾವ ರೀತಿ ದುಡ್ಡನ್ನ ಉದ್ಯಮದಲ್ಲಿ ಇನ್ವೆಸ್ಟ್ ಮಾಡ್ತಾರೋ, ಅದೇ ರೀತಿ ಅವರು ನಷ್ಟವನ್ನ ಕೂಡ ಅನುಭವಿಸಲು ರೆಡಿಯಾಗಿರ್ತಾರೆ. ಯಾಕಂದ್ರೆ ಅವರಷ್ಟು ಜಾಣ್ಮೆಯಿಂದಲೇ ದುಡ್ಡನ್ನು ಇನ್ವೆಸ್ಟ್ ಮಾಡಿರ್ತಾರೆ.
ಏಳನೇಯ ರೂಲ್ಸ್, ನಷ್ಟವಾದಾಗ ಮುಂದಿನ ದಾರಿ ಏನು ಅನ್ನೋ ಬಗ್ಗೆ ಮೊದಲೇ ತಯಾರು ಮಾಡಿಕೊಂಡಿರಬೇಕು.ಕೆಲವರು ಉದ್ಯಮ ಶುರು ಮಾಡಿ, ನಷ್ಟ ಹೊಂದಿದ ಮೇಲೆ. ಮತ್ತೆ ಅದರೆಡೆಗೆ ಗಮನ ಕೊಡುವುದಿಲ್ಲ. ಮೊದಲಿನಂತೆ ಇತರರ ಬಳಿ ಕೆಲಸ ಮಾಡಿಕೊಂಡಿರುತ್ತಾರೆ. ಆದ್ರೆ ಓರ್ವ ಮಾರ್ವಾಡಿ ಉದ್ಯಮ ಆರಂಭಿಸುವಾಗ, ನಷ್ಟವಾದ್ರೆ ಮುಂದೇನು ಮಾಡಬೇಕು ಅನ್ನೋ ಬಗ್ಗೆ ಮೊದಲು ನಿರ್ಧರಿಸಿರುತ್ತಾನೆ. ಅದಕ್ಕೆ ತಕ್ಕಂತೆ ಇನ್ವೆಸ್ಟ್ ಮಾಡುವ ಜಾಣ್ಮೆ ಅವರಲ್ಲಿರುತ್ತದೆ.