ದೇವೇಗೌಡರು ಸೋಲಬಾರದಿತ್ತು..! ಹೌದು ಹೀಗೊಂದು ಮಾತು ವಿರೋಧಿಗಳ ಬಾಯಲ್ಲೂ ಕೇಳಿ ಬರ್ತಿದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಇಂಥಹದೊಂದು ಫಲಿತಾಂಶ ಹೊರಬರುತ್ತೆ ಅಂತ ಯಾರೂ ನಿರೀಕ್ಷೆ ಕೂಡ ಮಾಡಿರಲಿಲ್ಲ.. ಯಾಕಂದ್ರೆ ದೇಶ ಕಂಡ ಉತ್ತಮ ಪ್ರಧಾನಿಗಳಲ್ಲಿ ದೇವೇಗೌಡರು ಸಹ ಒಬ್ಬರು. ಆದ್ರೆ ದೇವೇಗೌಡರು ಮಾಡಿದ ಅದೊಂದು ತಪ್ಪು ತುಮಕೂರಿನ ಸೋಲಿಗೆ ಕಾರಣವಾಗಿದೆ.
ಸೋಲಿಗೆ ಮೊದಲ ಕಾರಣ
2014ರಲ್ಲಿ ಮೋದಿ ಸುನಾಮಿ ಮುಂದೆ ತುಮಕೂರು ಕ್ಷೇತ್ರದಲ್ಲಿ ಮುದ್ದಹನುಮೇಗೌಡರು ಗೆಲುವನ್ನ ಸಾಧಿಸಿದ್ರು.. ಆದ್ರೆ, ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿ ಗೌಡರು ತುಮಕೂರಿಗೆ ಕಾಲಿಟ್ಟಿದ್ದು ಒಕ್ಕಲಿಗ ಸಮುದಾಯದಲ್ಲೇ ಒಡಕುಂಟಾಗಲು ಕಾರಣವಾಯ್ತು. ಮುದ್ದಹನುಮೇಗೌಡರನ್ನ ಮೊದಲೇ ಸಂಪರ್ಕಿಸಿ ಗೌಡರು ಸ್ಪರ್ಧೆಗೆ ಧುಮಿಕಿದ್ರೆ ಮುದ್ದಹನುಮೇಗೌಡರು ನಾಮಪತ್ರ ಸಲ್ಲಿಸ್ತಿರಲಿಲ್ಲ. ಬಹಿರಂಗ ಬಂಡಾಯ ಕೂಡ ಹೊಡೆತ ಕೊಡ್ತಿರಲಿಲ್ಲ. ಆದ್ರೆ, ಕಾಂಗ್ರೆಸ್ ಮೈತ್ರಿಯಾಗಿರೋದನ್ನೇ ಮುಂದಿಟ್ಟುಕೊಂಡು ತುಮಕೂರು ಸ್ಥಾನವನ್ನ ಅಧಿಕಾರಯುತವಾಗಿ ಪಡೆದು ಮುದ್ದಹನುಮೇಗೌಡರನ್ನ ಕಡೆಗಣಿಸಿದ್ದು ಗೌಡರ ಇಂದಿನ ಸ್ಥಿತಿಗೆ ಇದು ಒಂದು ಕಾರಣ.
ಸೋಲಿಗೆ ಎರಡನೇ ಕಾರಣ
ಅಪ್ಪಂದಿರು ಮಾಡಿದ ತಪ್ಪಿಗೆ ಮಕ್ಕಳು ಶಾಪವನ್ನ ಅನುಭವಿಸಬೇಕಾಗುತ್ತೆ ಅನ್ನೋ ಮಾತಿದೆ. ಈ ಗಾದೆ ಗೌಡರ ವಿಚಾರದಲ್ಲಿ ನಿಜವಾಗಿದೆ. ಹೌದು, ಹೇಮಾವತಿ ವಿಚಾರದಲ್ಲಿ ರೇವಣ್ಣ ಹಾಸನ ರೈತರನ್ನ ಓಲೈಸಿಕೊಳ್ಳಲು ಹೋಗಿ ಈ ಹಿಂದೆ ತುಮಕೂರು ರೈತರ ವಿರೋಧ ಕಟ್ಟಿಕೊಂಡಿದ್ರು. ಜೊತೆಗೆ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ತುರುವೇಕೆರೆ ಶಾಸಕ ಮಸಾಲೆ ಜಯರಾಂ, ಜಿ.ಎಸ್ ಬಸವರಾಜು ರೇವಣ್ಣ ವಿರುದ್ಧ ಭಾರೀ ಪ್ರತಿಭಟನೆಗಳನ್ನ ಮಾಡಿದ್ರು. ಇದಲ್ಲದೇ ಮಾಗಡಿ ಮೂಲಕ ರಾಮನಗರಕ್ಕೆ ಹೇಮಾವತಿ ನೀರನ್ನ ತೆಗೆದುಕೊಂಡು ಹೋಗುವ ಡಿ.ಕೆ ಶಿವಕುಮಾರ್ ನಿರ್ಧಾರ ತುಮಕೂರು ರೈತರನ್ನ ಕೆರಳಿಸಿತ್ತು. ಬಹುತೇಕ ರೈತ ಸಮುದಾಯ ಒಕ್ಕಲಿಗರೇ ಆಗಿರೋದು ಜೆಡಿಎಸ್ ನಂಬಿಕೊಂಡಿದ್ದ ಒಕ್ಕಲಿಗ ಮತಗಳು ದೂರ ಸರಿಯಲು ಕಾರಣವಾಯ್ತು. ಹೇಮಾವತಿ ವಿಚಾರದಲ್ಲಿ ರೇವಣ್ಣ ಹಾಸನದಲ್ಲಿ ಹಠ ಹಿಡಿದಿದ್ದು ದೇವೇಗೌಡರ ಸೋಲಿನ ಕಾರಣಗಳಲ್ಲಿ ಒಂದು ಅಂದ್ರೆ ತಪ್ಪಾಗಲ್ಲ.
ಸೋಲಿಗೆ 3ನೇ ಕಾರಣ
ದೇವೇಗೌಡರ ನಾಲ್ವರು ಗಂಡು ಮಕ್ಕಳಲ್ಲಿ ಈಗಾಗಲೇ ಕುಮಾರಸ್ವಾಮಿ ಸಿಎಂ ಆಗಿದ್ರೆ, ಹೆಚ್ಡಿ ರೇವಣ್ಣ ಸಚಿವರಾಗಿದ್ದಾರೆ.. 2018ರ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ನಮ್ಮ ಕುಟುಂಬದಿಂದ ನಾನು ಮತ್ತು ನಮ್ಮ ಸಹೋದರ ರೇವಣ್ಣ ಮಾತ್ರ ಚುನಾವಣೆಗೆ ಸ್ಪರ್ಧಿಸುತ್ತೇವೆ ಅಂತ ಹೇಳಿದ್ರು.. ಆದ್ರೆ, ರಾಮನಗರ, ಚನ್ನಪಟ್ಟಣ ಎರಡೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋ ಮೂಲಕ ಉಪಚುನಾವಣೆ ಮೂಲಕ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ಅನುವು ಮಾಡಿಕೊಟ್ರು.. ಇಷ್ಟೆ ಆಗಿದ್ರೆ ಏನೂ ಆಗ್ತಿರಲಿಲ್ಲ. ಆಗ ಭವಾನಿ ರೇವಣ್ಣ ತನ್ನ ಪುತ್ರ ಪ್ರಜ್ವಲ್ ರೇವಣ್ಣನಿಗೆ ಎಂ.ಪಿ ಟಿಕೆಟ್ ಬೇಕು ಅಂತ ಪಟ್ಟು ಹಿಡಿದಿದ್ರಿಂದ ದೇವೇಗೌಡರು ಬೇರೊಂದು ಕ್ಷೇತ್ರ ನೋಡಿಕೊಳ್ಳಬೇಕಾಯ್ತು. ಅದ್ಯಾವಾಗ ಪ್ರಜ್ವಲ್ ಹಾಸನದಿಂದ ಸ್ಪರ್ಧೆ ಮಾಡ್ತಾರೆ ಅಂತ ಘೋಷಣೆಯಾಯ್ತೋ, ಅನಿತಾ ಕುಮಾರಸ್ವಾಮಿ ಕೂಡ ಪುತ್ರ ನಿಖಿಲ್ ಗೂ ರಾಜಕೀಯ ನೆಲೆ ಕಲ್ಪಿಸುವಂತೆ ಹಠ ಹಿಡಿದ್ರು.. ಕುಮಾರಸ್ವಾಮಿ ಒಲ್ಲದ ಮನಸ್ಸಿನಿಂದ ಮಂಡ್ಯದಲ್ಲಿ ಪುತ್ರನನ್ನ ಚುನಾವಣೆಗೆ ನಿಲ್ಲಿಸಿದ್ರು. ಆದ್ರೆ, ಜನ ಇದು ಗೌಡರ ಕುಟುಂಬದ ಅಧಿಕಾರದ ವ್ಯಾಮೋಹ ಅನ್ನೋದನ್ನ ಸುಲಭವಾಗಿ ಜನ ಅರ್ಥ ಮಾಡಿಕೊಂಡ್ರು. ಇದರ ಜೊತೆಗೆ ತುಮಕೂರು ಕ್ಷೇತ್ರಕ್ಕೆ ಗೌಡರ ಮತ್ತೊಬ್ಬ ಮಗ ಡಾ. ರಮೇಶ್ ಹಾಗೂ ಅವರ ಪತ್ನಿ ಸೌಮ್ಯ ಎಂಟ್ರಿಯಾಗಿದ್ದು ತುಮಕೂರು ಜೆಡಿಎಸ್ ನಾಯಕರಿಗೂ ಭವಿಷ್ಯದಲ್ಲಿ ಒಂದು ರೀತಿಯ ಅಭದ್ರತೆಯನ್ನ ಸೃಷ್ಠಿ ಮಾಡ್ತು.. ದೇವೇಗೌಡರ ನಂತರ ಡಾ. ರಮೇಶ್ ತುಮಕೂರಿಗೆ ಬಂದ್ರೆ ನಮ್ ಕತೆ ಏನು ಅನ್ನೋ ಲೆಕ್ಕಾಚಾರದಲ್ಲಿ ಜೆಡಿಎಸ್ ನಾಯಕರೇ ಗೌಡರ ಪರವಾಗಿ ಕೆಲಸ ಮಾಡಲು ಹಿಂದೇಟು ಹಾಕಿದ್ರು ಅನ್ನೋ ಮಾತು ತುಮಕೂರಿನಲ್ಲಿ ಚರ್ಚೆಯಾಗ್ತಿದೆ.
ಇನ್ನು ದೇವೇಗೌಡರು ನಾಡಿಗೆ, ದೇಶಕ್ಕೆ ನೂರಾರು ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ. ಆದರೆ ಅವರ ಐದತ್ತು ಯಡವಟ್ಟುಗಳಿಂದಾಗಿ ಆ ಎಲ್ಲಾ ಒಳ್ಳೆಯ ಕೆಲಸಗಳು ಮುಚ್ಚಿಹೋಗಿದೆ. ಅವರ ಈ ಸೋಲಿಗೆ ಆ ಯಡವಟ್ಟುಗಳೆ ಕಾರಣವಾಗಿದೆ. ಹಾಗೆ ಕುಮಾರಸ್ವಾಮಿ ಒಳ್ಳೆಯ ಕೆಲಸಗಳು ಕೂಡ ಅವರ ಒಂದೆರಡು ಮಿಸ್ಟೇಕ್ ಗಳಿಂದ ಮುಚ್ಚಿಹೋಗಿರೋದು ಸುಳ್ಳಲ್ಲ.
ಸಂಸದೆ ಸುಮಲತಾಗೆ ಶಾಸಕ ಓಪನ್ ಚಾಲೆಂಜ್.. !!ಈ ವಿಡಿಯೋ ತಪ್ಪದೇ ನೋಡಿ