Monday, December 11, 2023

Latest Posts

ಸಿಎಂ ಮಕ್ಕಳಿಗೆ ಅದ್ಯಾವ ಶಾಪ- ಎಲೆಕ್ಷನ್ ನಲ್ಲಿ ಸೋತಿದ್ದ್ಯಾಕೆ…?

- Advertisement -

ಈ ಬಾರಿ ನಡೆದ ಚುನಾವಣೆಯಲ್ಲಿ ತಮ್ಮ ಮಕ್ಕಳನ್ನು ಅಖಾಡಕ್ಕಿಳಿಸೋ ಮೂಲಕ ತಮ್ಮ ಶಕ್ತಿ ಏನು ಅನ್ನೋದನ್ನ ಸಾಬೀತುಪಡಿಸಲು ಹೊರಟಿದ್ದ ನಾಲ್ಕು ರಾಜ್ಯಗಳ ಸಿಎಂಗಳಿಗೆ ತೀವ್ರ ಮುಖಭಂಗವಾಗಿದೆ.

ಹೌದು, ನಾನು ಈಗಾಗಲೇ ಸಿಎಂ ಆಗಿದ್ದೀನಿ, ನನಗೆ ರಾಜ್ಯದ ಎಲ್ಲಾ ಮತದಾರರು ಸಪೋರ್ಟ್ ಮಾಡ್ತಾರೆ ಬಿಡಿ ಅಂತ ತಮ್ಮ ಮಕ್ಕಳನ್ನು ಚುನಾವಣಾ ಅಖಾಡಕ್ಕಿಳಿಸಿದ್ದ  ಸಿಎಂಗಳು ಮುಜುಗರಕ್ಕೀಡಾಗಿದ್ದಾರೆ.

ಸಿಎಂ ಕುಮಾರಸ್ವಾಮಿ ಮತ್ತು ಮಂಡ್ಯದಿಂದ ಸ್ಪರ್ಧಿಸಿದ್ದ ಪುತ್ರ ನಿಖಿಲ್ ಕುಮಾರ್

ಹೌದು ರಾಜ್ಯದಲ್ಲಿ ಸಿಎಂ ಕುಮಾರಸ್ವಾಮಿ ಆತುರಕ್ಕೆ ಬಿದ್ದು ಈ ಬಾರಿಯ ಲೋಕಭಾ ಚುನಾವಣೆಗೆ ಮಂಡ್ಯದಿಂದ ತಮ್ಮ ಮಗ ನಿಖಿಲ್ ಕುಮಾರ್ ರನ್ನ ಕಣಕ್ಕಿಳಿಸಿದ್ರು. ತೀವ್ರ ಜಿದ್ದಾಜಿದ್ದಿನ ಕಣವಾಗಿದ್ದ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಸ್ಪರ್ಧಿಸಿದ್ದ ನಿಖಿಲ್ ಗೆ ಭಾರೀ ಜನಬೆಂಬಲ ವ್ಯಕ್ತವಾಗಿದ್ದಂತೆ ಕಂಡುಬಂತು. ಇದಿಂದ ಸಿಎಂ ಕುಮಾರಸ್ವಾಮಿ ಕೂಡ ಮಂಡ್ಯದಲ್ಲಿ ಗೆದ್ದರೆ ಅದು ನನ್ನ ಮಗನೇ, ನಿಖಿಲ್ ಈಗಾಗಲೇ ಗೆದ್ದುಬಿಟ್ಟ ಅಂತ ಫಲಿತಾಂಶದ ಮುಂಚೆಯೇ ಸಿಎಂ ಹೇಳಿಕೊಂಡು ತಿರುಗಾಡಿದ್ದೂ ಉಂಟು. ಆದ್ರೆ ಪಕ್ಷೇತರ ಅಭ್ಯರ್ಥಿ ಸುಮಲತಾ ನಿಖಿಲ್ ರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿಬಿಟ್ಟಿದ್ದಾರೆ.

ಇದೇ ಮೊದಲ ಬಾರಿ ಚುನಾವಣೆಗೆ ನಿಂತಿದ್ದ ಸುಮಲತಾ ಗೆ ರಾಜಕೀಯ ಅನುಭವ ಇಲ್ಲದಿದ್ರೂ ಕಾಂಗ್ರೆಸ್ ಪಾಳಯದಲ್ಲಿ ಹೆಸರು ಮಾಡಿದ್ದ ಮಾಜಿ ಸಚಿವರೂ ಆಗಿದ್ದ ತಮ್ಮ ಪತಿ ದಿವಂಗತ ಅಂಬರೀಶ್ ಸಾವಿನ ಅನುಕಂಪವೇ ಶ್ರೀರಕ್ಷೆಯಾಯ್ತು. ನನ್ನ ಮಗನನ್ನು ಮಂಡ್ಯ ಜನ ಗೆಲ್ಲಿಸ್ತಾರೆ ಎಂದುಕೊಂಡಿದ್ದ ರಾಜ್ಯದ ಸಿಎಂ ಕುಮಾರಸ್ವಾಮಿಯವರ ಅತಿಯಾದ ವಿಶ್ವಾಸ ಸುಳ್ಳಾಗಿದೆ.

ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮತ್ತು ಪುತ್ರ ನಾರಾ ಲೋಕೇಶ್ ನಾಯ್ಡು

ಇನ್ನು ಆಂಧ್ರಪ್ರದೇಶದ ಕಥೆಯೂ ಹೀಗೆ ಆಗಿದೆ. ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ರೆಡ್ಡಿ ಕೂಡ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ, ಕ್ಯಾಬಿನೇಟ್ ನಲ್ಲಿ ಐಟಿ ಸಚಿವರಾಗಿದ್ದ ನಾರಾ ಲೋಕೇಶ್, ಮಂಗಳಗಿರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ರು.

ಮಾತುಗಾರಿಕೆಯಾಗಲೀ, ರಾಜಕೀಯ ತಂತ್ರಗಾರಿಕೆಯಲ್ಲಾಗಲಿ, ಅಷ್ಟಾಗಿ ನಿಪುಣರೇನೂ ಅಲ್ಲದ ಚಂದ್ರಬಾಬು ನಾಯ್ಡು ಪುತ್ರ, ಟಿಡಿಪಿ ಅಭ್ಯರ್ಥಿ ಲೋಕೇಶ್ ತಮ್ಮ ಭಾಷಣಗಳಲ್ಲಿ ತಡಬಡಾಯಿಸಿ  ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲ್ ಆಗಿದ್ರು.

 ಆದ್ರೀಗ ವೈಎಸ್ ಆರ್ ಪಕ್ಷದ ಎ.ರಾಮಕೃಷ್ಣ ರೆಡ್ಡಿ ವಿರುದ್ಧ 5,200 ಮತಗಳ ಅಂತರದಿಂದ ಟಿಡಿಪಿ ಅಭ್ಯರ್ಥಿ ನಾರಾ ಲೋಕೇಶ್ ಸೋಲನುಭವಿಸಿದ್ರು. ಪುತ್ರನನ್ನು ಹೇಗಾದ್ರೂ ಮಾಡಿ ಗೆಲ್ಲುವಂತೆ ಮಾಡಿ ತಾನು ಮತ್ತೆ ಆಂಧ್ರಪ್ರದೇಶ ಸಿಎಂ ಆಗಿ ಮುಂದುವರೆಯಬೇಕೆಂಬ  ಮಹದಾಸೆ ಹೊತ್ತಿದ್ದ ಚಂದ್ರಬಾಬು ಕನಸು ಕನಸಾಗಲೇ ಇಲ್ಲ.

ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಮತ್ತು ನಿಜಾಮಾಬಾದ್ ನಿಂದ ಸ್ಪರ್ಧಿಸಿದ್ದ ಪುತ್ರಿ ಕೆ.ಕವಿತಾ

ತೆಲಂಗಾಣದ ರಾಜ್ಯದಲ್ಲೂ ಕೂಡ ಇದೇ ಪರಿಸ್ಥಿತಿ. ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ಈಗಾಗಲೇ ಸಂಸದೆಯಾಗಿದ್ದ ತಮ್ಮ ಪುತ್ರಿ ಕವಿತಾರನ್ನು ನಿಜಾಮಾಬಾದ್ ಕ್ಷೇತ್ರದಿಂದ ಕಣಕ್ಕಿಳಿಸಿದ್ರು. ನಿಜಾಮಾಬಾದ್ ಕ್ಷೇತ್ರದಲ್ಲಿ ಪ್ರಮುಖ ಅಭ್ಯರ್ಥಿಗಳನ್ನ ಹೊರತುಪಡಿಸಿ ಬರೋಬ್ಬರಿ 185 ಮಂದಿ ರೈತರು ಕಣದಲ್ಲಿದ್ದರು.

ಅದಾಗಲೇ ಕೆಂಪು ಜೋಳಕ್ಕೆ ತೆಲಂಗಾಣ ಸರ್ಕಾರ ಸೂಕ್ತ ರೀತಿಯ ಬೆಲೆ ನೀಡಲಿಲ್ಲ ಅಂತ ಸರ್ಕಾರದ ವಿರುದ್ಧ ಕೆರಳಿದ್ದ ರೈತರು ಹೇಗಾದ್ರೂ ಮಾಡಿ ಇವರಿಗೆ ಪಾಠ ಕಲಿಸ್ಲೇಬೇಕು ಅಂತ ಟೊಂಕ ಕಟ್ಟಿ ತಾವೇ ಚುನಾವಣಾ ಕಣಕ್ಕಿಳಿದುಬಿಟ್ಟಿದ್ರು. ಹೈ ಪ್ರೊಫೈಲ್ ಅಭ್ಯರ್ಥಿ ಕೆ ಕವಿತಾ, ಮೊಟ್ಟ ಮೊದಲ ಬಾರಿ ಚುನವಣೆಗೆ ಸ್ಪರ್ಧಿಸಿದ್ದ ಬಿಜೆಪಿಯ ಧರ್ಮಪುರಿ ಅರವಿಂದ ವಿರುದ್ಧ ಸೋಲು ಅನುಭವಿಸಿದ್ದಾರೆ.  ಸಿಎಂ ಚಂದ್ರಶೇಖರ್ ರಾವ್ ತಮ್ಮ ಪುತ್ರಿಯನ್ನು ಸಂಸದೆಯನ್ನಾಗಿಯೂ ಮಾಡಿದ್ದರು, ಆದ್ರೆ ಮೊದಲ ಬಾರಿ ಕಣಕ್ಕಿಳಿದ್ದ ಅಭ್ಯರ್ಥಿ ವಿರುದ್ಧ ಖುದ್ದು ಸಿಎಂ ಪುತ್ರಿ, ಸಂಸದೆಯೂ ಆಗಿದ್ದ ಕವಿತಾ ಸೋತಿದ್ದು, ತಂದೆ ಚಂದ್ರಶೇಖರ್ ರಾವ್ ಗೆ ಆದ ಮುಖಭಂಗವಲ್ಲದೆ ಮತ್ತೇನು ಅಲ್ಲ.

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಪುತ್ರ ವೈಭವ್ ಗೆಹ್ಲೋಟ್

ಇನ್ನು ರಾಜಸ್ಥಾನದಲ್ಲೊಂತೂ ತಮ್ಮ ಪವರ್ ಏನು ಅನ್ನೋದನ್ನ ತೋರಿಸೋದಕ್ಕೆ ಹಾಲಿಸಿಎಂ ಅಶೋಕ್ ಗೆಹ್ಲೋಟ್ ತಮ್ಮ ಪುತ್ರ ವೈಭವ್ ಗೆಹ್ಲೋಟ್ ರನ್ನು ಗೆಲ್ಲಿಸೋ ಹಠದಲ್ಲಿ ವಿಫಲರಾಗಿದ್ದಾರೆ.

ಕಾಂಗ್ರೆಸ್ ನಿಂದ ಜೋಧ್ ಪುರ ಕ್ಷೇತ್ರದಿಂದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ಗೆಹ್ಲೋಟ್  ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ರಾಜೇಂದ್ರ ಸಿಂಗ್ ಶೆಖಾವತ್ ಎದುರು ಸ್ಪರ್ಧಿಸಿದ್ರು. ಆದ್ರೆ ವೈಭವ್ ಸಿಂಗ್ 2.70ಲಕ್ಷ ಮತಗಳ ಅಂತರದಿಂದ ಬಿಜೆಪಿಯ ರಾಜೇಂದ್ರ ಸಿಂಗ್ ಶೆಖಾವತ್ ವಿರುದ್ಧ ಸೋತಿದ್ದಾರೆ.

ಅಂದಹಾಗೆ ಸಿಎಂ ಅಶೋಕ್ ಗೆಹ್ಲೋಟ್ ಮೂರನೇ ಬಾರಿಗೆ ರಾಜಸ್ಥಾನ ಸಿಎಂ ಆಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಪುತ್ರನ ಪರ ಭರ್ಜರಿ ಪ್ರಚಾರ ಮಾಡಿದ್ದ ಗೆಹ್ಲೋಟ್ ಜೊತೆಗೆ ಹತ್ತಾರು ಸಂಪುಟ ಸಚಿವರೂ ಏಕಕಾಲದಲ್ಲಿ ಭಾಗಿಯಾಗಿದ್ದರು. ಆದ್ರೆ ಜನಾದೇಶ ಮಾತ್ರ ಬೇರೆನೇ ಆಗಿತ್ತು. ಸಿಎಂ ಅಶೋಕ್ ಗೆಹ್ಲೋಟ್ ಏನೆಲ್ಲಾ ಪ್ರಯತ್ನ ಮಾಡಿದ್ರೂ ತಮ್ಮ ಮಗ ವೈಭವ್ ನನ್ನ ಗೆಲ್ಲಿಸಿ ದೆಹಲಿಗೆ ಕಳುಹಿಸೋ ಆಸೆಗೆ ಜನ ತಣ್ಣೀರೆರೆಚಿದ್ರು.

ಒಟ್ನಲ್ಲಿ ತಮ್ಮ ತಮ್ಮ ರಾಜಕೀಯ ಪ್ರಭಾವದಿಂದ, ಅಧಿಕಾರದಿಂದಾಗ ಜನ ತಮ್ಮ ಮಕ್ಕಳಿಗೆ ಮತ ಹಾಕ್ತಾರೆ ಅಂತ ಮಾಡಿದ್ದ ಊಹೆ ತಲೆಕೆಳಕಾಗಿ 4 ರಾಜ್ಯಗಳ ಸಿಎಂಗಳ ಗರ್ವಭಂಗವಾಗಿದೆ.

ಟ್ರಾಲ್ ಮಾಡುವವರಿಗೆ ದ್ವಾರಕಾನಾಥ್ ಗುರೂಜಿ ಹೇಳಿದ್ದೇನು ಗೊತ್ತಾ.. ಈ ವಿಡಿಯೋದಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

https://www.youtube.com/watch?v=nBtvQXZf7Z4
- Advertisement -

Latest Posts

Don't Miss