ಬೆಂಗಳೂರು: ಒಂದೆಡೆ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡಿ ಹೇಗಾದ್ರೂ ಮನವೊಲಿಸಿಕೊಳ್ಳೋದಕ್ಕೆ ದೋಸ್ತಿಗಳು ಪ್ರಯತ್ನ ಮಾಡ್ತಿದ್ದಾರೆ. ಮತ್ತೊಂದೆಡೆ ಇದೇ ಅತೃಪ್ತ ಶಾಸಕರ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ದಾರಿ ತಪ್ಪಿಸೋ ಯತ್ನ ನಡೆಸುತ್ತಿದ್ದಾರೆ.
ಆಪರೇಷನ್ ಕಮಲದ ಭೀತಿಯಿಂದಾಗಿ ಅತೃಪ್ತ ಶಾಸಕರನ್ನ ಸಚಿವರನ್ನಾಗಿ ಪ್ರಮೋಟ್ ಮಾಡೋ ದೋಸ್ತಿಗಳ ಐಡಿಯಾ ಏನೋ ವರ್ಕ್ ಔಟ್ ಆಗೋ ರೀತಿ ಕಾಣ್ತಿದೆ. ಆದ್ರೆ ಶಾಸಕ ರಮೇಶ್ ಜಾರಕಿಹೊಳಿ ಮಾತ್ರ ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ. ತಮಗೆ 10ಮಂದಿ ಶಾಸಕರು ಸಂಪರ್ಕದಲ್ಲಿದ್ದಾರೆ ಅಂತ ದೋಸ್ತಿಗಳಿಗೆ ಶಾಸಕ ರಮೇಶ್ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. ಈ ಮೂಲಕ ದೋಸ್ತಿಗಳ ದಾರಿ ತಪ್ಪಿಸೋ ಪ್ರಯತ್ನ ಮಾಡ್ತಿದ್ದಾರೆ.
ಅಂದಹಾಗೆ ದೋಸ್ತಿಗಳೇನೋ ರಮೇಶ್ ಜೊತೆ ಬರಿ 5 ಅತೃಪ್ತ ಶಾಸಕರಿದ್ದಾರೆ ಅಂತಿದ್ದಾರೆ. ಆದ್ರೆ ರಮೇಶ್ ಈ ಸ್ಫೋಟಕ ಮಾಹಿತಿ ನೀಡಿ ಅವರ ತಲೆನೋವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಮತ್ತೊಂದೆಡೆ ನಿನ್ನೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದ ದೋಸ್ತಿಗಳು, ಅತೃಪ್ತ ಶಾಸಕರು ರಮೇಶ್ ಜಾರಕಿಹೊಳಿಯನ್ನ ನಂಬುತ್ತಿಲ್ಲ ಅನ್ನೋ ವಿಶ್ವಾಸದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಕಣ್ಣಾಮುಚ್ಚಾಲೆ ಆಟಆಡುತ್ತಿದ್ದು ದೋಸ್ತಿಗಳನ್ನು ಹೈರಾಣಾಗುವಂತೆ ಮಾಡುತ್ತಿದ್ದಾರೆ.
’10 ಶಾಸಕರಿದ್ರಿದ್ರೆ ಮೇ 23ಕ್ಕೆ ಸರ್ಕಾರ ಪತನವಾಗ್ಬೇಕಿತ್ತು’
ಇದಕ್ಕೆ ಪ್ರತಿಕ್ರಿಯಿಸಿರೋ ದೋಸ್ತಿಗಳು, ರಮೇಶ್ ಜಾರಕಿಹೊಳಿಗೆ ಸಂಖ್ಯಾ ಬಲ ಕಡಿಮೆ ಇರೋದ್ರಿಂದಲೇ ಅವರು ಇನ್ನೂ ರಾಜೀನಾಮೆ ನೀಡಿಲ್ಲ. ಒಂದು ವೇಳೆ 10ಕ್ಕೂ ಹೆಚ್ಚು ಶಾಸಕರು ಅವರಿಗೆ ಬೆಂಬಲಿಸಿದ್ರೆ ಫಲಿತಾಂಶದ ದಿನವೇ ಮೈತ್ರಿ ಸರ್ಕಾರ ಪತನವಾಗುತ್ತಿತ್ತು ಅಂತ ಸಮಜಾಯಿಷಿ ನೀಡುತ್ತಿದ್ದಾರೆ.
ಒಟ್ಟಿನಲ್ಲಿ ಈ ರಾಜಕೀಯ ಮೇಲಾಟದಲ್ಲಿ ದೋಸ್ತಿಗಳು ಗೆಲ್ತಾರೋ, ಅಥವಾ ಸಾಹುಕಾರ್ ಸಾಹೇಬ್ರು ಇವರು ಗೆಲ್ತಾರೋ ಅನ್ನೋದಕ್ಕೆ ಮಾತ್ರ ಕಾಲವೇ ಉತ್ತರಿಸಬೇಕು.
ಇವ್ರೆಲ್ಲಾ ಸೋಲ್ತಾರೆ ಅಂತ ಅಂದುಕೊಂಡೇ ಇರಲಿಲ್ಲ… ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಈ ವಿಡಿಯೋದಲ್ಲಿದೆ ತಪ್ಪದೇ ನೋಡಿ.