Saturday, March 2, 2024

Latest Posts

ಸ್ಪೀಕರ್ ಏಟಿಗೆ ಅತೃಪ್ತರ ಎದಿರೇಟು- ಸುಪ್ರೀಂಕೋರ್ಟ್ ಮೊರೆಹೋದ ಶಾಸಕರು..!

- Advertisement -

ಮುಂಬೈ: ರಾಜೀನಾಮೆ ಅಂಗೀಕಾರ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ವಿಳಂಬ ಧೋರಣೆ ತೋರುತ್ತಿದ್ದಾರೆ ಅಂತ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ಅತೃಪ್ತ ಶಾಸಕರ ರಾಜೀನಾಮೆ ವಿಚಾರ ಇದೀಗ ಮತ್ತೊಂದು ಹಂತಕ್ಕೆ ಹೋಗಿದ್ದು ಮುಂಬೈನಿಂದ ಸುಪ್ರೀಂ ಕೋರ್ಟ್ ತಲುಪಿದೆ. ರಾಜೀನಾಮೆ ನೀಡಿದ ಹೊರತಾಗಿಯೂ ಅದನ್ನು ಅಂಗೀಕಾರಿಸೋದಕ್ಕೆ ಸ್ಪೀಕರ್ ಇಲ್ಲ ಸಲ್ಲದ ಕಾರಣ ನೀಡಿ ವಿಳಂಬ ಮಾಡ್ತಿದ್ದಾರೆ ಅಂತ ಅತೃಪ್ತ ಶಾಸಕರು ಇದೀಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಸ್ಪೀಕರ್ ನಡೆ ವಿರುದ್ಧ ಸಿಡಿದೆದ್ದಿರೋ ಅತೃಪ್ತರ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅರ್ಜಿ ಸಲ್ಲಿಸಿದ್ದು, ನಾಳೆ ಸರ್ವೋಚ್ಚ ನ್ಯಾಯಾಲಯ ವಿಚಾರಣೆ ನಡೆಸಲಿದೆ.

ಇನ್ನು ನಿನ್ನೆಯಷ್ಟೇ 13 ಶಾಸಕರ ರಾಜೀನಾಮೆ ಪೈಕಿ 8 ಮಂದಿ ರಾಜೀನಾಮೆ ಸರಿಯಾದ ಕ್ರಮದಲ್ಲಿಲ್ಲ ಅಂತ ಕಾರಣ ನೀಡಿರೋದಲ್ಲದೆ ಕ್ರಮಬದ್ಧವಾಗಿರೋ 5 ರಾಜೀನಾಮೆ ಪತ್ರಗಳ ಕುರಿತಾಗಿ ವಿಚಾರಣೆಗಾಗಿ ಜು 13, 15ರಂದು ದಿನಾಂಕ ನಿಗದಿ ಮಾಡಿದ್ರು. ಇದರಿಂದ ಕೆರಳಿರೋ ಅತೃಪ್ತರು ಮತ್ತೊಂದು ತಂತ್ರ ಅನುಸರಿಸಿದ್ದು ಇದೀಗ ಸುಪ್ರೀಂ ಅಂಗಳ ತಲುಪಿದ್ದಾರೆ.

ಅತೃಪ್ತರಿಗೆ ಸ್ಪೀಕರ್ ಶಾಕ್..!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=punMqInsQD0
- Advertisement -

Latest Posts

Don't Miss