Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಮೆಂತ್ಯೆ ಸೊಪ್ಪು, ಸ್ವಲ್ಪ ಕರಿಬೇವು, ಸ್ವಲ್ಪ ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ಜೀರಿಗೆ, 1 ಸ್ಪೂನ್ ಶುಂಠಿ- ಹಸಿಮೆಣಸಿನ ಪೇಸ್ಟ್, ಕೊಂಚ ಅರಶಿನ, 1 ಸ್ಪೂನ್ ಖಾರದ ಪುಡಿ, ಚಾಟ್ ಮಸಾಲೆ ಪುಡಿ, ಉಪ್ಪು, ಕೊಂಚ ಹಿಂಗು, ಕಾಲು ಕಪ್ ಅಕ್ಕಿಹುಡಿ, 1 ಕಪ್ ಕಡ್ಲೆ ಹಿಟ್ಟು, ಕರಿಯಲು ಎಣ್ಣೆ
ಮಾಡುವ ವಿಧಾನ: ಮೊದಲು ಒಂದು ಹರಿವಾಣ ಅಥವಾ ಮಿಕ್ಸಿಂಗ್ ಬೌಲ್ ತೆಗೆದುಕೊಂಡು, ಅದರಲ್ಲಿ ಮೆಂತ್ಯೆ ಸೊಪ್ಪು, ಕರಿಬೇವು, ಕೊತ್ತೊಂಬರಿ ಸೊಪ್ಪು, ಜೀರಿಗೆ, ಶುಂಠಿ- ಹಸಿಮೆಣಸಿನ ಪೇಸ್ಟ್, ಅರಿಶಿನ, ಖಾರದ ಪುಡಿ, ಚಾಟ್ ಮಸಾಲೆ, ಉಪ್ಪು, ಹಿಂಗು, ಅಕ್ಕಿ ಹಿಟ್ಟು, ಕಡ್ಲೆ ಹಿಟ್ಟು ಅಗತ್ಯವಿದ್ದರೆ ಕೊಂಚ ನೀರು ಚುಮುಕಿಸಿ, ಗಟ್ಟಿಯಾದ ಪಕೋಡಾ ಹಿಟ್ಟು ತಯಾರಿಸಿ.
ಬಳಿಕ ಕಾದ ಎಣ್ಣೆಯಲ್ಲಿ ಚಿಕ್ಕ ಚಿಕ್ಕದಾಗಿ ಪಕೋಡಾ ಕರಿಯಿರಿ. ಎಣ್ಣೆಯನ್ನು ಚೆನ್ನಾಗಿ ಕಾಯಿಸಿ, ಬಳಿಕ ಮಂದ ಉರಿಯಲ್ಲಿ ಪಕೋಡಾವನ್ನು ಕಾಯಿಸಿದರೆ, ಕ್ರಿಸ್ಪಿಯಾಗಿರುವ ಪಕೋಡಾ ರೆಡಿಯಾಗುತ್ತದೆ. ಇದನ್ನು ನೀವು ಟೊಮೆಟೋ ಸಾಸ್ ಅಥವಾ ಕಾಯಿ ಚಟ್ನಿಯೊಂದಿಗೆ ಸವಿಯಬಹುದು.