ಬಿಜೆಪಿಯಲ್ಲಿಯೂ ಪ್ರಧಾನಿ ಬದಲಾವಣೆ ಬಗ್ಗೆ ಚರ್ಚೆ ನಡೀತಿದೆ: ಸಚಿವ ಸಂತೋಷ್ ಲಾಡ್‌ ವಾಗ್ದಾಳಿ

Hubli News: ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಸಚಿವ ಸಂತೋಷ್ ಲಾಡ್ ಮಾಧ್ಯಮದ ಜೊತೆ ಮಾತನಾಡಿದ್ದು, ದೆಹಲಿ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸತ್ಯ ಹೇಳಬೇಕಾಗುತ್ತೆ, ಸರ್ವೇ ಪ್ರಕಾರ ನಮ್ಮ ಪಕ್ಷ 5-10 ಗೆಲ್ಲುತ್ತೆ. ಆಪ್ ಪಕ್ಷ ಮೊದಲು, ಸೆಕೆಂಡು ಬಿಜೆಪಿ ಇದೆ. ರಾಹುಲ್ ಗಾಂಧಿ ಅವರನ್ನ ಇನ್ನು ದೇಶದ ಜನ ಅರ್ಥ ಮಾಡ್ಕೊಂಡಿಲ್ಲ. ಅವರ ಫಿಲೋಸಫಿ ಜನರಿಗೆ ಮುಟ್ಟುವ ಕೆಲಸ ನಾವು ಮಾಡ್ತಿಲ್ಲ. ಪಾರ್ಲಿಮೆಂಟ್ ನಲ್ಲಿ ಬಹಳ ಚನ್ನಾಗಿ ಮಾತಾಡಿದ್ದಾರೆ. ಆದ್ರೆ ಅದನ್ನ ತೋರಿಸಲ್ಲ, ಅದರ ಬಗ್ಗೆ ಎಲ್ಲೂ ಚರ್ಚೆ ಇಲ್ಲಾ. ಬಿಜೆಪಿ ಅವರ ದೇಶದಲ್ಲಿ ಎಐ ಯಾವ ಲೆವೆಲ್‌ನಲ್ಲಿದ್ದೇವೆ. ಚೈನಾಗೆ ಹೋಲಿಸಿಕೊಳ್ಳೋಕೆ ಆಗಲ್ಲ, 10 ವರ್ಷದಲ್ಲಿ ಚೈನಾ ಏನೆಲ್ಲಾ ಮಾಡ್ತು.

ಡಾಲರ್ ಮುಂದೆ ರೂಪಾಯಿ ದಿನದಿಂದ ದಿನಕ್ಕೆ ಕುಸಿತ ಇದೆ. ದೇಶದ ಸಾಲ ಎಷ್ಟಾಗಿದೆ ಅಂತ ಯಾಕೆ ಕೇಳಬಾರದು. 70 ವರ್ಷದಲ್ಲಿ ಆಗಿರೋ ಸಾಲಕ್ಕೆ 3 ಪಟ್ಟು 10 ವರ್ಷದಲ್ಲಿ ಆಗಿದೆ. ಪ್ರಧಾನ ಮಂತ್ರಿ ಮೋದಿ ಒಬ್ಬ ಮನುಷ್ಯನ ತಲೆ ಮೇಲೆ 1 ಲಕ್ಷ ಸಾಲ ಹೊರಿಸಿದ್ದಾರೆ. ಇದು ಸಾಧನೆ ಅಲ್ವಾ? ಎಲರಿಗಿಂತ ದೊಡ್ಡ ಸಾಧನೆ ಆಲ್ವಾ ಇದು..? ಎಂದು ಬಿಜೆಪಿ ವಿರುದ್ಧ ಸಂತೋಷ್ ಲಾಡ್ ವ್ಯಂಗ್ಯವಾಡಿದ್ದಾರೆ.

ಬಲಿಷ್ಠ 10 ರಾಷ್ಟ್ರಗಳ ಪಟ್ಟಿಯಲ್ಲಿದ್ದ ಭಾರತ, ಈಗ ಹೊರ ಬಿದ್ದಿದೆ. ಥೈಲ್ಯಾಂಡ್ ಗೆ ವೀಸಾ ಫ್ರಿ ಅಂದ್ರೆ ಪವರ ಫುಲ್ ಏನ್ರಿ? ಪವರ್‌ಫುಲ್ ಇದ್ರೆ ಡಾಲರ್ ಯಾಕೆ ಬೀಳ್ತಾ ಇದೆ, ಕೇಳಿ ಅವರನ್ನ. ಬಿಜೆಪಿ ಹಾಗೂ ಮೋದಿ ಅವರ ಪಬ್ಲಿಸಿಟಿ ತಗೊಂಡು ದೇಶ ಹಾಳು ಆಗ್ತಿದೆ. ಪ್ರಹ್ಲಾದ್ ಜೋಶಿ ಅವರನ್ನ ಕರೀರಿ ಚರ್ಚೆ ಮಾಡೋಣ.

ನಮ್ಮ ದೇಶದ ಸಾಲಕ್ಕಿಂತ 20% ಬಡ್ಡಿ ಕಟ್ಟುತ್ತಾ ಇದ್ದೇವೆ. ಬೆಳಗ್ಗೆ ಎದ್ರೆ ಕೇವಲ ಧರ್ಮ, ಜಾತಿ ಬಗ್ಗೆ ಮಾತನಾಡ್ತಾರೆ. ನಾವು ತಲೆ ಕೂದಲು ಎಷ್ಟಿವೆ ಅಷ್ಟು ದೇವಸ್ಥಾನಗಳನ್ನ ಕಟ್ಟಿದ್ದೇವೆ. 57 ಲಕ್ಷ ಕೋಟಿ ಇದ್ದಿದ್ದವು, ಈಗ 225 ಕೋಟಿ ಲಕ್ಷ ಸಾಲ ಆಗಿದೆ. ಟ್ಯಾಕ್ಸ್ ಕಡಿಮೆ ಮಾಡಿದ್ರಿ ಒಪ್ಕೋಳೋಣಾ, ಆದ್ರೆ ಜಿಎಸ್ ಟಿ ಯಾಕೆ ಕಮ್ಮಿ ಮಾಡಬಾರದು. ದೇಶದಲ್ಲಿ 60% ಬಡವರೇ ಇದ್ದಾರೆ. 27 ಕೇಂದ್ರ ಸರ್ಕಾರ ದ ಕಂಪನಿ ಮಾರಿದ್ದಾರೆ, ಅವರ ಹತ್ತಿರ ದುಡ್ಡೇ ಇಲ್ಲಾ. ಈಗ ಎಲ್ಲಾ ಖಾಸಗಿ ಕಂಪನಿಗಳಿವೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಬಿಜೆಪಿಯಲ್ಲೂ ಪ್ರಧಾನಿ ಮೋದಿ ಬದಲಾವಣೆ ಮಾತು ಕೇಳಿ ಬರುತ್ತಿವೆ. ದೆಹಲಿಯಲ್ಲಿ ಕೆಲ ಬಿಜೆಪಿ ಸ್ನೇಹಿತರು ನನ್ನ ಬಳಿ‌ ಈ ವಿಚಾರ ಚರ್ಚೆ ಮಾಡಿದ್ದಾರೆ. ಪ್ರಧಾನಿ ಮೋದಿ ಬದಲಾವಣೆ ಮಾತು ಪ್ರಬಲವಾಗಿ ಚರ್ಚೆ ಆಗುತ್ತಿದೆ. ಆದರೆ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದೆ ಮೋದಿ ಪ್ರಶ್ನೆ ಮಾಡಲು ಧೈರ್ಯ ಇಲ್ಲ. ಬಿಜೆಪಿ ಒಳೊಳಗೆ ಮೋದಿ ಬದಲಾವಣೆ ಬಗ್ಗೆ ಚರ್ಚೆ ಆಗ್ತಿದೆ. ಮೋದಿ ವಿರುದ್ಧ ಮಾತನಾಡೋಕೆ ಯಾರಿಗೂ ಧೈರ್ಯ ಇಲ್ಲಾ. ರಾಮುಲು ಬಂದ್ರೆ ನಾನು ವ್ಯಯಕ್ತಿಕವಾಗಿ ಸ್ವಾಗತ ಮಾಡ್ತೇನೆ ಎಂದು ಲಾಡ್ ಹೇಳಿದ್ದಾರೆ.

ಗ್ಯಾರೆಂಟಿಯಿಂದ ಶಾಸಕರಿಗೆ ಅನುದಾನ ಇಲ್ಲಾ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಲಾಡ್, ಕೆಲವು ಶಾಸಕರು ಈ ರೀತಿ ಹೇಳಿದ್ದಾರೆ. ಆದರೆ ಸಾಮಾನ್ಯವಾಗಿ ಬರುವ ಅನುದಾನ ಬರ್ತಿದೆ. ಹೆಚ್ಚಿನ ಅನುದಾನ ಕೊಟ್ಟಿಲ್ಲ ಅಷ್ಟೇ. ಬಿ.ಆರ್.ಪಾಟೀಲ್ ಯಾಕೆ ರಾಜೀನಾಮೆ ಕೊಟ್ಟಿದ್ದಾರೆ ಅವರನ್ನೇ ಕೇಳಿ. ಸೂರ್ಯ ಚಂದ್ರ ಇರುವವರಿಗೆ ಅನುದಾನ ಕೊರತೆ ಇರುತ್ತೆ. ಬೆಡ್ತಿ ನಾಲೆ, ಹುಲಿ ಕೋಟಿ ಸೇರಿ ಹಲವು ಕಾಮಗಾರಿಗೆ ಅನುದಾನ ಕೊಟ್ಟಿದ್ದೇವೆ ಎಂದು ಲಾಡ್ ಹೇಳಿದ್ದಾರೆ.

ರಾಜ್ಯ ಬಜೆಟ್ ವಿಚಾರಕ್ಕೆ ಲಾಡ್ ಪ್ರತಿಕ್ರಿಯೆ ನೀಡಿದ್ದು, ಸಿಎಂ ಬಜೆಟ್ ಮಾಡ್ತಾ ಇದ್ದಾರೆ, ಎಲ್ಲಾ ಇಲಾಖೆ ಅವರನ್ನ ಕರೀತಾ ಇದ್ದಾರೆ. ಎಲ್ಲಾ ಸಚಿವರಿಗೂ ಅವಕಾಶ ಕೊಡ್ತಾ ಇದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಸಿಎಂ ಬದಲಾವಣೆ ವಿಚಾರಕ್ಕೆ ಲಾಡ್ ಪ್ರತಿಕ್ರಿಯೆ ನೀಡಿದ್ದು, ಅವರಿಗೂ ಉಸಿರು ಗಟ್ಟೋ ವಾತಾವರಣ ಇದೆ.
ಸುಬ್ರಹ್ಮಣ್ಯ ಸ್ವಾಮಿ ಮಾತನಾಡಿದ ಬಗ್ಗೆ ಬಿಜೆಪಿ ಅವರು ಮಾತನಾಡಿದ್ದಾರಾ? ಎಲ್ಲರೂ ಒಪ್ಪಿಕೊಂಡಿದ್ದಾರೆ ಅಂತ ಅರ್ಥ. ಬಿಜೆಪಿ ಅಧ್ಯಕ್ಷ ಯಾರಾಗಬೇಕು ಅಂತ ಅವರ ನಿರ್ಧಾರ ತಗೋಬೇಕು. ಅವರ ಬಗ್ಗೆ ನಾನ್ಯಾಕೆ ಮಾತನಾಡಬೇಕು ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

About The Author