Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿದ ಬಟಾಣಿ, 1 ಬಟಾಣಿ, 1 ಈರುಳ್ಳಿ, 1 ಟೊಮೆಟೋ, ಚಿಟಿಕೆ ಅರಿಶಿನ, ಎಣ್ಣೆ, ಲವಂಗ, ಏಲಕ್ಕಿ, ಚಕ್ಕೆ, ಕಾಳುಮೆಣಸು, ಜೀರಿಗೆ, ಸೋಂಪು, 5 ಎಸಳು ಬೆಳ್ಳುಳ್ಳಿ, ಸಣ್ಣ ತುಂಡು ಶುಂಠಿ, 5 ಹಸಿಮೆಣಸು, ಒಂದು ಕಪ್ ಪುದೀನಾ, ಕೊತ್ತೊಂಬರಿ ಸೊಪ್ಪು, ಮೆಣಸಿನ ಪುಡಿ, ಅರಿಶಿನ, ಜೀರಿಗೆ ಪುಡಿ, ಕೊತ್ತೊಂಬರಿ ಕಾಳಿನ ಪುಡಿ, ಚಾಟ್ ಮಸಾಲೆ ಪುಡಿ, ಚಾಟ್ಸ್ ತಯಾರಿಸಲು ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೆಟೋ, ಕೊತ್ತೊಂಬರಿ ಸೊಪ್ಪು, ಸೇವ್, ಹುಣಸೆ ಚಟ್ನಿ, ಉಪ್ಪು.
ಮಾಡುವ ವಿಧಾನ: ಮೊದಲು ಬಚಾಣಿ, ಬಟಾಟೆ, ಉಪ್ಪು, ಅರಿಶಿನ, ನೀರು ಹಾಕಿ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ. ಬಳಿಕ ಈ ಮಿಶ್ರಣವನ್ನು ಕೊಂಚ ಮ್ಯಾಶ್ ಮಾಡಿಟ್ಟುಕೊಳ್ಳಿ. ಬಳಿಕ ಒಂದು ಪ್ಯಾನ್ ಬಿಸಿ ಮಾಡಿ, ಅದಕ್ಕೆ 2 ಸ್ಪೂನ್ ಎಣ್ಣೆ, ಲವಂಗ, ಏಲಕ್ಕಿ, ಚಕ್ಕೆ, ಕಾಳುಮೆಣಸು, ಜೀರಿಗೆ, ಸೋಂಪು, ಹಾಕಿ ಹುರಿಯಿರಿ. ಬಳಿಕ 4ರಿಂದ 5 ಎಸಳು ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು ಸೇರಿಸಿ ಹುರಿಯಿರಿ.
ಬಳಿಕ ಈರುಳ್ಳಿ, ಟೊಮೆಟೋ ಹಾಕಿ ಹುರಿಯಿರಿ. ಬಳಿಕ ಹುರಿದ ಮಿಶ್ರಣದ ಜೊತೆ ಕೊತ್ತೊಂಬರಿ ಸೊಪ್ಪು ಮತ್ತು ಪುದೀನಾ ಸೇರಿಸಿ, ಪೇಸ್ಟ್ ತಯಾರಿಸಿ. ಬಳಿಕ ಮತ್ತೆ ಪ್ಯಾನ್ ಬಿಸಿ ಮಾಡಿ, ಎಣ್ಣೆ, ಅರಿಶಿನ, ಖಾರದ ಪುಡಿ, ಚಾಟ್ ಮಸಾಲೆ, ಜೀರಿಗೆ ಪುಡಿ, ಗರಂ ಮಸಾಲೆ, ಧನಿಯಾಪುಡಿ, ತಯಾರಿಸಿದ ಪೇಸ್ಟ್ ಸೇರಿಸಿ ಮಿಕ್ಸ್ ಮಾಡಿ. ಬಳಿಕ ಬೇಯಿಸಿದ ಬಟಾಣಿ, ಆಲೂ ಸೇರಿಸಿ, ಕುದಿ ಬರಿಸಿ.
ಈಗ ಒಂದು ಪ್ಲೇಟ್‌ಗೆ ಪಾಪ್ಡಿ ಪುಡಿ ಹಾಕಿ ಕ್ರಶ್ ಮಾಡಿ. ಅದರ ಮೇಲೆ ರೆಡಿ ಮಾಡಿದ ಗ್ರೇವಿ, ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಟೊಮೆಟೋ, ಸೇವ್, ಹುಣಸೆ ಚಟ್ನಿ ಹಾಕಿ ಸರ್ವ್ ಮಾಡಿ.