Sunday, April 20, 2025

Latest Posts

Recipe: ಟೀ ಟೈಮ್ ಸ್ನ್ಯಾಕ್ ಗರಿ ಗರಿಯಾದ ಕೋಡುಬಳೆ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ಮೈದಾ, ಕಾಲು ಕಪ್ ರವೆ, 2 ಸ್ಪೂನ್ ಕಡಲೆ ಹಿಟ್ಟು, 1 ಸ್ಪೂನ್ ಖಾರದ ಪುಡಿ, ವೋಮ, ಜೀರಿಗೆ, 1 ಸ್ಪೂನ್ ಎಳ್ಳು, ಕೊಂಚ ಹಿಂಗಿನ ಪುಡಿ, ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಮೊದಲು ಒಂದು ದೊಡ್ಡ ಬೌಲ್ ಅಥವಾ ಹರಿವಾಣದಲ್ಲಿ ಅಕ್ಕಿಹಿಟ್ಟು, ಕಡಲೆಹಿಟ್ಟು, ಮೈದಾ, ರವಾ, ಉಪ್ಪು, ಎಳ್ಳು, ಖಾರದ ಪುಡಿ, ವೋಮ, ಜೀರಿಗೆ, ಹಿಂಗು ಎಲ್ಲವನ್ನು ಹಾಕಿ ಮಿಕ್ಸ್ ಮಾಡಿ. ಬಳಿಕ 3 ಸ್ಪೂನ್ ಬಿಸಿ ಬಿಸಿ ಎಣ್ಣೆ ಅಥವಾ ಅರ್ಧ ಕಪ್ ಬೆಣ್ಣೆ ಅಥವಾ ತುಪ್ಪ ಸೇವಿಸಿ, ಬೇಕಾದಷ್ಟು ನೀರಿನೊಂದಿಗೆ ಹಿಟ್ಟು ಕಲಿಸಿ. ಬಳಿಕ ಈ ಹಿಟ್ಟಿಗೆ ಕೋಡುಬಳೆ ಶೇಪ್ ಕೊಟ್ಟು, ಎಣ್ಣೆಯಲ್ಲಿ ಕರಿದರೆ, ಕೋಡುಬಳೆ ರೆಡಿ. ಮಂದ ಉರಿಯಲ್ಲಿ ಕರಿದರೆ, ಕೋಡುಬಳೆ ಗರಿಗರಿಯಾಗಿರುತ್ತದೆ.

- Advertisement -

Latest Posts

Don't Miss