Recipe: ನಿಮ್ಮ ಮನೆಯಲ್ಲಿ ಯಾರಾದ್ರೂ ಬೀಟ್‌ರೂಟ್ ತಿನ್ನಲ್ಲಾ, ಬೇರೆ ತರಕಾಾರಿ ತಿನ್ನಲ್ಲಾ, ಓಟ್ಸ್ ತಿನ್ನಲ್ಲಾ ಅಂತಾ ಹೇಳಿದರೆ, ನೀವು ಅವರಿಗೆ ಈ ರೀತಿ ದೋಸೆ ಮಾಡಿ ಕೊಡುವ ಮೂಲಕ, ಓಟ್ಸ್ ಮತ್ತು ತರಕಾರಿ ತಿನ್ನಿಸಬಹುದು. ಹಾಗಾದ್ರೆ ಈ ಆರೋಗ್ಯಕರ ಬೀಟ್‌ರೂಟ್ ದೋಸೆ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.
ಮೊದಲು ಮಿಕ್ಸಿ ಜಾರ್‌ಗೆ ನೆನೆಸಿಟ್ಟಿದ್ದ ಒಂದು ಕಪ್ ಮಸೂರ್ ದಾಲ್, ತೊಗರಿ ಬೇಳೆ, 1 ಕಪ್ ಓಟ್ಸ್, ಅರ್ಧ ತುರಿದ ಬೀಟ್‌ರೂಟ್, ಜೀರಿಗೆ, ಹಸಿಮೆಣಸು, ಶುಂಠಿ, ಉಪ್ಪು ಹಾಕಿ ದೋಸೆ ಹಿಟ್ಟು ರುಬ್ಬಿಕೊಳ್ಳಿ. ಬಳಿಕ ದೋಸೆ ಪ್ಯಾನ್ ಬಿಸಿ ಮಾಡಿ, ಎಣ್ಣೆ ಸವರಿ ದೋಸೆ ಮಾಡಿ, ಅದರ ಮೇಲೆ ತುಪ್ಪ ಹಾಕಿ ಕಾಯಿಸಿ. ಈಗ ರುಚಿಕರ ಮತ್ತು ಆರೋಗ್ಯಕರ ಬೀಟ್‌ರೂಟ್ ದೋಸೆ ರೆಡಿ. ಇದರೊಂದಿಗೆ ಕಾಯಿ ಚಟ್ನಿ ಉತ್ತಮ ಕಾಂಬಿನೇಷನ್.
ಇದನ್ನು ಇನ್ನೂ ಸ್ಪೆಶಲ್ ಮಾಡಬೇಕು ಅಂದ್ರೆ, ನೀವು ಒಂದು ಬೌಲ್‌ನಲ್ಲಿ ಮೊಳಕೆ ಬರಿಸಿದ ಹೆಸರು ಕಾಳು, ಕೊಂಚ ಸ್ವೀಟ್ ಕಾರ್ನ್, ತುರಿದ ಪನೀರ್, ತುರಿದ ಚೀಸ್, ತುರಿದ ಕ್ಯಾರೆಟ್ ಕೊಂಚ ಉಪ್ಪು, ಮಸಾಲೆ ಎಲ್ಲ ಹಾಕಿ ಮಿಕ್ಸ್ ಮಾಡಿ, ಸಲಾಡ್ ರೀತಿ ತಯಾರಿಸಿಕೊಳ್ಳಿ.
ದೋಸೆ ಮಾಡುವಾಗ, ಮಸಾಲೆ ದೋಸೆಯೊಳಗೆ ಆಲೂಗಡ್ಡೆ ಪಲ್ಯ ಇಟ್ಟಂತೆ, ನೀವು ಈ ದೋಸೆಯಲ್ಲಿ ಈ ಸಲಾಡ್ ಮಿಶ್ರಣವನ್ನು ಇರಿಸಿ, ಮಕ್ಕಳಿಗೆ ಆರೋಗ್ಯಕರ, ರುಚಿಕರ ಸ್ಪೆಶಲ್ ದೋಸೆ ಮಾಡಿಕೊಡಬಹುದು.