Recipe: ಬೇಕಾಗುವ ಸಾಮಗ್ರಿ : 4 ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ, ಕೊತ್ತೊಂಬರಿ ಸೊಪ್ಪು, ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ, ಜೀರಿಗೆ, ಸೋಂಪು, ವೋಮ, ಗರಂ ಮಸಾಲೆ, ಚಾಟ್ ಮಸಾಲೆ, ಅರಿಶಿನ, 3ರಿಂದ 4 ಕಪ್ ಗೋದಿ, 1 ಕಪ್ ಎಣ್ಣೆ, ಉಪ್ಪು.
ಮಾಡುವ ವಿಧಾನ: ಚಪಾತಿ ಹಿಟ್ಟು ತಯಾರಿಸಲು ಮಿಕ್ಸಿಂಗ್ ಬೌಲ್‌ನಲ್ಲಿ ಗೋದಿ ಹುಡಿ, ಉಪ್ಪು, ವೋಮ, ಎಣ್ಣೆ ಅಥವಾ ತುಪ್ಪ ಮತ್ತು ನೀರು ಹಾಕಿ ಚಪಾತಿ ಹಿಟ್ಟು ನಾದಿ. ಬಳಿಕ ಮಿಕ್ಸಿಂಗ್ ಬೌಲ್‌ಗೆ ಮ್ಯಾಶ್ ಮಾಡಿದ ಆಲೂಗಡ್ಡೆ, ಗರಂ ಮಸಾಲೆ, ಚಾಟ್ ಮಸಾಲೆ, ಅರಿಶಿನ, ತರಿ ತರಿಯಾಗಿ ಪುಡಿ ಮಾಡಿದ ಕೊತ್ತೊಂಬರಿ ಸೊಪ್ಪು, ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ, ಜೀರಿಗೆ, ಸೋಂಪು ಮಿಶ್ರಣ ಉಪ್ಪು ಹಾಕಿ ಮಿಕ್ಸ್ ಮಾಡಿ.
ಬಳಿಕ ಚಪಾತಿ ರೆಡಿ ಮಾಡಿ ಅದರಲ್ಲಿ ಆಲೂಗಡ್ಡೆ ಮಿಶ್ರಣ ತುಂಬಿಸಿ, ಕಾದ ಕಾವಲಿಗೆ ಎಣ್ಣೆ ಸವರಿ ಪರಾಟಾ ಬೇಯಿಸಿದರೆ, ಆಲೂಗಡ್ಡೆ ಪರಾಟಾ ರೆಡಿ. ಬೆಳಿಗ್ಗೆ ತಿಂಡಿಗೆ ಅಥವಾ ಮಕ್ಕಳಿಗೆ ಟಿಫಿನ್ ಬಾಕ್ಸ್‌ಗೂ ಇದನ್ನು ಹಾಕಿಕ“ಡಬಹುದು.




