- Advertisement -
Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಸಿಪ್ಪೆ ತೆಗೆದ ಬೀಟ್‌ರೂಟ್ ತುರಿ, ಒಂದೂವರೆ ಕಪ್ ಮೊಸರು, 2 ಹಸಿಮೆಣಸು, ಉಪ್ಪು, ಕೊತ್ತೊಂಬರಿ ಸೊಪ್ಪು, ಅರ್ಧ ಕಪ್ ಕೊಬ್ಬರಿ ತುರಿ, ಒಗ್ಗರಣೆಗೆ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು, ಉದ್‌ದಿನಬೇಳೆ.
ಮಾಡುವ ವಿಧಾನ: ಮೊದಲು ಮಿಕ್ಸಿಜಾರ್‌ಗೆ ಕಾಯಿತುರಿ, ಹಸಿಮೆಣಸು, ಮೊಸರು ಹಾಕಿ ರುಬ್ಬಿ. ಬಳಿಕ ಮಿಕ್ಸಿಂಗ್ ಬೌಲ್‌ಗೆ ಈ ಮಿಶ್ರಣ, ಉಪ್ಪು, ಕೊತ್ತೊಂಬರಿ ಸೊಪ್ಪು, ಬೀಟ್‌ರೂಟ್ ತುರಿ ಹಾಕಿ ಮಿಕ್ಸ್ ಮಾಡಿ. ಬಳಿಕ ಎಣ್ಣೆ ಬಿಸಿ ಮಾಡಿ, ಸಾಸಿವೆ, ಒಣಮೆಣಸು, ಕರಿಬೇವು, ಉದ್ದಿನಬೇಳೆ ಹಾಕಿ ಒಗ್ಗರಣೆ ಕೊಡಿ.
- Advertisement -