Recipe: ಬೇಸಿಗೆ ಗಾಲ ಶುರುವಾಗಿದೆ. ಪದೇ ಪದೇ ಬಾಯಾರಿಕೆಯಾಗುವುದು, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗೋ ಸಮಸ್ಯೆ ಇರೋದು ಕಾಮನ್. ಹಾಗಂತ ನಾವು ಮಾರುಕಟ್ಟೆಯಲ್ಲಿ ಸಿಗುವಂಥ ಪಾನೀಯ ತಂದು ಕುಡಿಯೋದಲ್ಲ. ಬದಲಾಗಿ ಮನೆಯಲ್ಲೇ ನೀವು ಮ್ಯಾಂಗೋ ಲಸ್ಸಿ ತಯಾರಿಸಿ ಕುಡಿಯಬಹುದು. ಇದು ಮಾವಿನ ಸೀಸನ್ ಆಗಿರುವ ಕಾರಣಕ್ಕೆ, ಆರೋಗ್ಯಕ್ಕೂ ಹಿತವಾದ, ರುಚಿಯೂ ಆದ ಮ್ಯಾಂಗೋ ಲಸ್ಸಿ ಮನೆಯಲ್ಲೇ ಮಾಡಬಹುದು. ಹಾಗಾದ್ರೆ ಹೇಗೆ ಲಸ್ಸಿ ಮಾಡೋದು ಅಂತಾ ತಿಳಿಯೋಣ ಬನ್ನಿ.
ಬೇಕಾಗುವ ಸಾಮಗ್ರಿ: 1 ಮಾವಿನ ಹಣ್ಣು, 1 ಗ್ಲಾಸ್ ಸ್ವಲ್ಪ ನೀರು ಸೇರಿಸಿದ ಮೊಸರು, 2 ಸ್ಪೂನ್ ಸಕ್ಕರೆ, ಪಿಸ್ತಾ, ಬಾಾದಾಮ್, 1 ಸ್ಪೂನ್ ರೋಸ್ ವಾಟರ್, ಅವಶ್ಯಕತೆ ಇದ್ದಲ್ಲಿ 4ರಿಂದ 5 ಐಸ್ ಕ್ಯೂಬ್ಸ್.
ಒಂದು ಮಿಕ್ಸಿಂಗ್ ಬೌಲ್‌ಗೆ, ಮಾವಿನ ಹಣ್ಣಿನ ಪ್ಯೂರಿ, ಮೊಸರು, ಸಕ್ಕರೆ, ರೋಸ್ ವಾಟರ್, ಐಸ್ ಕ್ಯೂಬ್ಸ್ ಹಾಕಿ, ಮೊಸರು ಕಡೆಯುವ ಕಡುಗೋಲಿನಿಂದ, ಮೋಸರು ಕಡಿಯಿರಿ. ಈಗ ಬೆಣ್ಣೆಯಂಥ, ಕ್ರೀಮಿ ಮ್ಯಾಂಗೋ ಲಸ್ಸಿ ರೆಡಿ. ಒಂದು ಗ್ಲಾಸ್‌ಗೆ ಈ ಲಸ್ಸಿ ಹಾಕಿ, ಬಾದಾಮ್ ಮತ್ತು ಪಿಸ್ತಾದಿಂದ ಗಾರ್ನಿಶ್ ಮಾಡಿ, ಸವಿಯಲು ಕೊಡಿ.